For Quick Alerts
  ALLOW NOTIFICATIONS  
  For Daily Alerts

  ಪ್ರೀತಿ ಹುಟ್ಟಿದ್ದೂ ನಿಜ.. ಬ್ರೇಕ್ ಆಗಿದ್ದೂ ನಿಜ: 2 ವರ್ಷದಿಂದ ರಶ್ಮಿಕಾ ಸಿಂಗಲ್!

  |

  ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಓಡುವ ಕುದುರೆ. ಸದ್ಯ ತಾನಾಯ್ತು, ತನ್ನ ಸಿನಿಮಾ ಆಯ್ತು ಅಂತಿರುವ ನಟಿ ಕೈ ತುಂಬಾ ಸಿನಿಮಾಗಳಿವೆ. ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಎತ್ತರಕ್ಕೆ ಬೆಳೆಯುತ್ತಲೇ ಇದ್ದಾರೆ. ಅದರಲ್ಲೂ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ.

  ರಶ್ಮಿಕಾ ಅದೆಷ್ಟೇ ಎತ್ತರಕ್ಕೆ ಬೆಳೆದರೂ, ಅವರ ಸಿನಿಮಾದ ಜೊತೆ ಜೊತೆಗೆ ಅವರ ಲವ್ ಸ್ಟೋರಿ ಬಗ್ಗೆ ಸುದ್ದಿಗಳು ಬರೋದು ಮಾತ್ರ ನಿಂತಿಲ್ಲ. ಅದರಲ್ಲೂ ನ್ಯಾಷನಲ್ ಕ್ರಶ್ ಹಾಗೂ ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಜೊತೆ ಸಂಥಿಂಗ್ ಸಂಥಿಂಗ್ ಅಂತ ಅದೆಷ್ಟು ವರದಿಗಳು ಬಂದು ಹೋಗಿದ್ದಾವೋ ಗೊತ್ತಿಲ್ಲ.

  ಗಾಸಿಪ್‌ನಿಂದ ಬೇಸತ್ತ ರಶ್ಮಿಕಾ: 8 ತಿಂಗಳ ಗ್ಯಾಪ್ ಬಳಿಕ ವಿಜಯ್ ದೇವರಕೊಂಡ ಬಗ್ಗೆ ಟ್ವೀಟ್!

  ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್ ಸ್ಟೋರಿ ವೈರಲ್ ಆದಾಗಲೆಲ್ಲಾ ಇಬ್ಬರೂ ನುಣುಚಿಕೊಂಡಿದ್ದೇ ಹೆಚ್ಚು. ಆದ್ರೀಗ ಬಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಪ್ರೀತಿ ಹುಟ್ಟಿದ್ದೂ ನಿಜ, ಬ್ರೇಕಪ್ ಆಗಿದ್ದೂ ನಿಜ ಎನ್ನಲಾಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವಿನ ಸುದ್ದಿಯೇನು? ತಿಳಿಯಲು ಮುಂದೆ ಓದಿ..

  ಬ್ರೇಕಪ್ ಬಳಿಕ ಪ್ರೀತಿ ಹುಟ್ಟಿದ್ದು ನಿಜ

  ಬ್ರೇಕಪ್ ಬಳಿಕ ಪ್ರೀತಿ ಹುಟ್ಟಿದ್ದು ನಿಜ

  ಕಿರಿಕ್ ಪಾರ್ಟಿ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಪ್ರೇಮಾಂಕುರವಾಗಿತ್ತು. ಅದು ನಿಶ್ಚಿತಾರ್ಥದವರೆಗೂ ಬಂದು ನಿಂತಿದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನೇನು ಮದುವೆ ಆಗಬಹುದು ಅನ್ನುವಾಗಲೇ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಸಿನಿಮಾಗಾಗಿ ಕೊಟ್ಟ ಒಂದೇ ಒಂದು ಮುತ್ತು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಪ್ರೀತಿಯನ್ನು ಸಾರಿ ಸಾರಿ ಹೇಳಿತ್ತು. ಆದರೆ, ಇಬ್ಬರೂ ಅಂದು ಈ ಮಾತನ್ನು ಒಪ್ಪಿಕೊಂಡಿರಲೇ ಇಲ್ಲ. ಆದ್ರೀಗ ನ್ಯೂಸ್ ಪೋರ್ಟಲ್ ಒಂದು ಇಬ್ಬರೂ ಪ್ರೀತಿ ಮಾಡಿದ್ದು ನಿಜ ಎನ್ನುತ್ತಿದೆ.

  ರಶ್ಮಿಕಾ-ವಿಜಯ್ ನಡುವೆ ಲವ್ ಆಗಿತ್ತು!

  ರಶ್ಮಿಕಾ-ವಿಜಯ್ ನಡುವೆ ಲವ್ ಆಗಿತ್ತು!

  ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಕಾಂಬಿನೇಷನ್ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 'ಗೀತಾ ಗೋವಿಂದಂ', 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ನಟಿಸಿದ ಬಳಿಕ ಇಬ್ಬರು ಕೆಮಿಸ್ಟ್ರಿ ನೋಡಿ ಇಬ್ಬರೂ ಲವ್‌ನಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇಲ್ಲಿಂದ ಇವರಿಬ್ಬರ ಜೋಡಿ ಮುನ್ನೆಲೆ ಬರುತ್ತಲೇ ಇತ್ತು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂದೇ ಹೇಳಲಾಗಿತ್ತು. ಪ್ರತಿ ಬಾರಿಯೂ ಇಬ್ಬರು ಪ್ರೀತಿ ವಿಚಾರವನ್ನು ತಿರಸ್ಕರಿಸುತ್ತಲೇ ಇದ್ದರು. ಆದ್ರೀಗ ನ್ಯೂಸ್ ಪೋರ್ಟಲ್ ಇಬ್ಬರೂ ಡೇಟಿಂಗ್ ಮಾಡಿದ್ದು ನಿಜ ಎಂದು ಹೇಳಿದೆ.

  2 ವರ್ಷದ ಹಿಂದನೇ ಬ್ರೇಕಪ್!

  2 ವರ್ಷದ ಹಿಂದನೇ ಬ್ರೇಕಪ್!

  ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ಕೆಲವು ದಿನಗಳ ಕಾಲ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ, ಇದು ಹೆಚ್ಚು ದಿನ ಉಳಿಯಲಿಲ್ಲ. ಎರಡು ವರ್ಷಗಳ ಹಿಂದೆನೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಇಬ್ಬರ ಸಂಬಂಧಕ್ಕೊಂದು ಕ್ಲಾರಿಟಿ ಸಿಕ್ಕಂತಾಗಿದೆ.

  ರಶ್ಮಿಕಾ ಈಗ ಸಿಂಗಲ್ ?

  ರಶ್ಮಿಕಾ ಈಗ ಸಿಂಗಲ್ ?

  ರಶ್ಮಿಕಾ ಮಂದಣ್ಣ ಸದ್ಯ ಸಿಂಗಲ್ ಆಗಿದ್ದಾರೆ ಅಂತ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿರುವ ಸುದ್ದಿ. ಹೀಗಿದ್ದರೂ, ಇಬ್ಬರೂ ಸ್ನೇಹವನ್ನು ಮುಂದುವರೆಸಿದ್ದಾರೆ. ಈ ಕಾರಣಕ್ಕೆ ವಿಜಯ್ ದೇವರಕೊಂಡ ಇತ್ತೀಚೆಗೆ ನಡೆದ 'ಸೀತಾ ರಾಮಂ' ಸಿನಿಮಾ ಪ್ರೀ-ರಿಲೀಸ್ ಈವೆಂಟ್‌ಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ "ರಶ್ಮಿಕಾ ನೀನು ಯಾವಾಗಲೂ ಸುಂದರವಾಗಿ ಕಾಣುತ್ತೀಯಾ" ಎಂದು ಕಮೆಂಟ್ ಮಾಡಿದ್ದರು. ಅಲ್ಲದೆ 'ಕಾಫಿ ವಿತ್ ಕರಣ್' ಶೋನಲ್ಲೂ " ರಶ್ಮಿಕಾ ನನ್ನ ಡಾರ್ಲಿಂಗ್' ಎಂದು ವಿಜಯ್ ದೇವರಕೊಂಡ ಹೇಳಿದ್ದರು.

  English summary
  Vijay Deverakonda And Rashmika 2 Years Ago They Had Ended Their Love, Know More.
  Tuesday, August 2, 2022, 22:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X