Animal teaser: ಅನಿಮಲ್ ಟೀಸರ್ ನೋಡಿ ಹೊಗಳಿದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ಏನು?
ಬಾಲಿವುಡ್ ನಟ ರಣಬೀರ್ ಕಪೂರ್ ಅವರ 'ಅನಿಮಲ್' ಟೀಸರ್ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಿದೆ. ಬ್ಲಾಕ್ ಬಸ್ಟರ್ 'ಅರ್ಜುನ್ ರೆಡ್ಡಿ' ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಅಮಿತಾಬ್ ಬಚ್ಚನ್ ಜೊತೆಗೆ ಗುಡ್‌ಬೈ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಮಿಷನ್ ಮಜ್ನು ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿ ಸೋಲು ಕಂಡಿರುವ ನಟಿ ರಶ್ಮಿಕಾ ಮಂದಣ್ಣಗೆ 'ಅನಿಮಲ್' ಮೂರನೇ ಸಿನಿಮಾ. ಟೀ ಸೀರಿಸ್ ಫಿಲ್ಮ್ಸ್, ಭದ್ರಕಾಳಿ ಪಿಕ್ಚರ್ಸ್ ಹಾಗೂ ಸಿನಿ 1 ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿವೆ. ಡಿಸೆಂಬರ್ 1ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದೆ.

ಅನಿಮಲ್ ಟೀಸರ್ ನೋಡಿ 'ಅರ್ಜುನ್ ರೆಡ್ಡಿ' ಹೇಳಿದ್ದೇನು?
ಅನಿಮಲ್ ಟೀಸರ್ ನೋಡಿ ಚಿತ್ರರಂಗದ ಗಣ್ಯರು ರಣಬೀರ್ ಕಪೂರ್‌ಗೆ ಶುಭಾಶಯ ಹೇಳಿದ್ದಾರೆ. ಸಿನಿಮಾದಲ್ಲಿ ಗೀತಾಂಜಲಿ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಲುಕ್‌ಗೆ ಜನ ಫಿದಾ ಆಗಿದ್ದಾರೆ. ರಣಬೀರ್ ಅವರ ವೈಲ್ಡ್ ಲುಕ್ ಸಿನಿಪ್ರಿಯರ ಗಮನ ಸೆಲೆಯುತ್ತಿದೆ.ಮ ಇದೇ ಹೊತ್ತಿನಲ್ಲಿ ರಶ್ಮಿಕಾ ಮಂದಣ್ಣ ಅವರ ಬಾಯ್‌ಫ್ರೆಂಡ್ ಎಂದು ಹೇಳಲಾಗುವ ನಟ ವಿಜಯ್ ದೇವರಕೊಂಡ ಕೂಡ ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಕ್ಸ್ ವೇದಿಕೆಯಲ್ಲಿ (ಹಿಂದೆ ಟ್ವಿಟರ್ ಎನ್ನಲಾಗುತ್ತಿತ್ತು) ಅನಿಮಲ್ ಟೀಸರ್ ಹಂಚಿಕೊಂಡಿರುವ ವಿಜಯ್ ದೇವರಕೊಂಡ, ಚಿತ್ರವನ್ನು ಹೊಗಳಿದ್ದಾರೆ. ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ನಾಯಕ ನಟ ರಣಬೀರ್ ಕಪೂರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ.

ಡಾರ್ಲಿಂಗ್ಸ್ ಎಂದ ವಿಜಯ್ ದೇವರಕೊಂಡ!
ಟೀಸರ್ ಹಂಚಿಕೊಂಡಿರುವ ಅವರು, "ನನ್ನ ಡಾರ್ಲಿಂಗ್ಸ್ ಸಂದೀಪ್ ರೆಡ್ಡಿ ವಂಗಾ ಮತ್ತು ರಶ್ಮಿಕಾ ಮಂದಣ್ಣಗೆ ಶುಭ ಹಾರೈಸುತ್ತೇನೆ. ಮತ್ತು ನನ್ನ ಮೆಚ್ಚಿನ ರಣಬೀರ್ ಕಪೂರ್ ಅವರಿಗೆ ಒಳ್ಳೆಯ ದಿನ ಮತ್ತು ಜನ್ಮದಿನದ ಶುಭಾಶಯಗಳು! " ಎಂದು ವಿಜಯ್ ದೇವರಕೊಂಡ ಶೀರ್ಷಿಕೆ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
ವಿಜಯ್ ದೇವರಕೊಂಡ ಅವರ ಶುಭಾಶಯಕ್ಕೆ ನಟಿ ರಶ್ಮಿಕಾ ಮಂದಣ್ಣ, "ಥ್ಯಾಂಕ್ಯೂಯುಉಉಉಉಉ ವಿಜಯ್ ದೇವರಕೊಂಡ... ಯು ಬಿ ದಿ ಬೆಸ್ಟೆಸ್ಟ್" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಎರಡು ಹೃದಯಗಳ ಎಮೋಜಿಯನ್ನು ಬಳಸಿದ್ದಾರೆ. ನಟ ವಿಜಯ್ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಇಬ್ಬರು ಪ್ರೀತಿಯಲ್ಲಿದ್ದಾರೆ. ಲಿವ್ ಇನ್ ನಲ್ಲಿ ವಾಸಿಸುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಆದರೆ, ಈ ಜೋಡಿ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ.
ಅನಿಮಲ್ ಟೀಸರ್
'ಅನಿಮಲ್ ಟೀಸರ್ ಹೆಚ್ಚಿನ ಆಕ್ಟೇನ್ ಸ್ಟಂಟ್‌ಗಳು, ಅದ್ಭುತ ಸಂಭಾಷಣೆ ಮತ್ತು ರಣಬೀರ್ ಕಪೂರ್ ಅವರ ಅದ್ಭುತ ನಟನೆಯಿಂದ ತುಂಬಿದ ಪವರ್-ಪ್ಯಾಕ್ ಆಗಿದೆ. ಹೋಮ್ಲಿ ಹುಡುಗನಿಂದ ಗ್ಯಾಂಗ್‌ಸ್ಟಾರ್ ಆಗಿ ಬದಲಾಗುವ ಅವರನ್ನು ಟೀಸರ್‌ನಲ್ಲಿ ನೋಡಬಹುದು. ಒಬ್ಬ ಶಿಸ್ತಿನ ತಂದೆಯ ಪಾತ್ರದಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಟೀಸರ್‌ನಲ್ಲಿ ರಣಬೀರ್ ಕಪೂರ್ ಅವರ ಖಡಕ್ ಲುಕ್ ಗಮನ ಸೆಳೆಯುತ್ತಿದೆ.


Click it and Unblock the Notifications











