ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ನಟ ವಿಜಯ್ ರಾಝ್ ಪ್ರತಿಕ್ರಿಯೆ

ಖ್ಯಾತ ಬಾಲಿವುಡ್ ನಟ ವಿಜಯ್ ರಾಝ್‌ ವಿರುದ್ಧ ಕೆಲವು ದಿನಗಳ ಹಿಂದಷ್ಟೆ ನಟಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ನಟ ವಿಜಯ್ ರಾಝ್‌.

ವಿದ್ಯಾ ಬಾಲನ್ ನಟನೆಯ ಶೇರ್ನಿ ಸಿನಿಮಾದ ಚಿತ್ರೀಕರಣ ಸೆಟ್‌ನಲ್ಲಿ ಮಹಿಳಾ ನಟಿಯೊಬ್ಬರ ಮೇಲೆ ವಿಜಯ್ ರಾಝ್ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಆಕೆಯು ವಿಜಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ.

ಅಂತೆಯೇ ವಿಜಯ್ ರಾಝ್ ಅನ್ನು ಬಂಧಿಸಿದ್ದ ಮುಂಬೈ ಪೊಲೀಸರು, ಒಂದು ದಿನದ ನಂತರ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಪ್ರಕರಣದ ತನಿಖೆ ಜಾರಿಯಲ್ಲಿದೆ. ಈ ನಡುವೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ವಿಜಯ್ ರಾಝ್ ಘಟನೆ ಬಗ್ಗೆ ಮಾತನಾಡಿದ್ದಾರೆ.

'ಮಹಿಳೆ ಬಳಿ ಕ್ಷಮೆ ಕೇಳಿದೆ, ಹಾಗೆಂದು ನಾನು ತಪ್ಪಿತಸ್ಥನಲ್ಲ'

'ಮಹಿಳೆ ಬಳಿ ಕ್ಷಮೆ ಕೇಳಿದೆ, ಹಾಗೆಂದು ನಾನು ತಪ್ಪಿತಸ್ಥನಲ್ಲ'

'ಆ ಘಟನೆ ನಡೆದ ಕೂಡಲೇ ಎಲ್ಲರ ಮುಂದೆ ಆ ಮಹಿಳೆಯ ಬಳಿ ಕ್ಷಮೆ ಕೇಳಿದೆ. ನಾನು ಕ್ಷಮೆ ಕೇಳಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೆ ಎಂದರ್ಥವಲ್ಲ. ನನಗೆ ಗೊತ್ತಿಲ್ಲದೆ ಆಗಿರಬಹುದಾದ ಕಾರ್ಯದಿಂದ ಆಕೆಗೆ ಬೇಸರವಾಗಿರಬಹುದು ಎಂಬ ಕಾರಣಕ್ಕೆ ಕ್ಷಮೆ ಕೇಳಿದ್ದೆ ಅಷ್ಟೆ' ಎಂದಿದ್ದಾರೆ.

'23 ವರ್ಷಗಳಿಂದ ನಾನು ಈ ಉದ್ಯಮದಲ್ಲಿದ್ದೇನೆ'

'23 ವರ್ಷಗಳಿಂದ ನಾನು ಈ ಉದ್ಯಮದಲ್ಲಿದ್ದೇನೆ'

ನಾನು ಈಗ ಇರುವ ಸ್ಥಿತಿ ಅತ್ಯಂತ ಅಪಾಯಕಾರಿಯಾದುದ್ದು, ನನ್ನ ವಾದವನ್ನೇ ಕೇಳದೆ ಹಲವರು ನನ್ನನ್ನು ಅಪರಾಧಿ ಮಾಡಿಬಿಟ್ಟಿದ್ದಾರೆ. ನಾನು 23 ವರ್ಷಗಳಿಂದಲೂ ಸಿನಿಮಾ ಉದ್ಯಮದಲ್ಲಿದ್ದೇನೆ, ನನಗೆ ಯಾರೊಂದಿಗೆ ಹೇಗೆ ವರ್ತಿಸಬೇಕು, ವೃತ್ತಿಪರತೆ ಏನು ಎಂಬ ಅರಿವಿದೆ ಎಂದಿದ್ದಾರೆ ವಿಜಯ್ ರಾಝ್.

ನನಗೆ 23 ವರ್ಷದ ಮಗಳಿದ್ದಾಳೆ: ವಿಜಯ್ ರಾಝ್

ನನಗೆ 23 ವರ್ಷದ ಮಗಳಿದ್ದಾಳೆ: ವಿಜಯ್ ರಾಝ್

ಮಹಿಳಾ ಸುರಕ್ಷತೆ ಅತ್ಯಂತ ಪ್ರಮುಖವಾದುದು, ಈ ಪ್ರಕರಣದಲ್ಲಿ ನನ್ನ ವಿರುದ್ಧ ಮಾಡಲಾಗುವ ಯಾವುದೇ ತನಿಖೆ ಎದುರಿಸಲು ನಾನು ತಯಾರಾಗಿದ್ದೇನೆ. ನನಗೆ 23 ವರ್ಷದ ಮಗಳಿದ್ದಾಳೆ, ಮಹಿಳೆಯ ಸುರಕ್ಷತೆ ವಿಷಯದ ನನಗೆ ಅರಿವಿದೆ ಎಂದಿದ್ದಾರೆ ವಿಜಯ್ ರಾಝ್.

Recommended Video

ಕಿಶನ್ ಕಥೆ ಕೇಳಿ ತುಂಬಾ ಅತ್ತಿದ್ರಂತೆ ರವಿ ಬೆಳಗೆರೆ | Filmibeat Kannada
ಸಿನಿಮಾಗಳಿಂದ ಅಮಾನತ್ತು

ಸಿನಿಮಾಗಳಿಂದ ಅಮಾನತ್ತು

ಮಹಿಳೆಯಿಂದ ದೂರು ದಾಖಲಾಗಿರುವ ಕಾರಣ ವಿಜಯ್ ರಾಝ್ ಅನ್ನು ಕೆಲವು ಸಿನಿಮಾಗಳಿಂದ ಅಮಾನತ್ತು ಮಾಡಲಾಗಿದೆ. ಅಲ್ಲದೆ, ಸಿನಿಮಾಗಳ ಸಂಘಟನೆ ಸಹ ಆಂತರಿಕ ಕಮಿಟಿಯೊಂದನ್ನು ರಚಿಸಿ ವಿಜಯ್ ರಾಝ್ ವಿರುದ್ಧ ತನಿಖೆ ನಡೆಸುತ್ತಿದೆ.

More from Filmibeat

English summary
Vijay Raaz talked about molestation allegations made against him. He said i have a 23 year old daughter, i know who to treat women.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X