ವಿಜಯ್ ಸೇತುಪತಿ ಕೈಗೆ ಮತ್ತೊಂದು ಹಿಂದಿ ಸಿನಿಮಾ: ತಮಿಳಿನದ್ದೇ ರೀಮೇಕ್!
ದಕ್ಷಿಣ ಭಾರತದ ನಟರಿಗೆ ಬಾಲಿವುಡ್‌ನವರು ಅವಕಾಶ ಕೊಡುವುದು ಕಡಿಮೆ. ದಕ್ಷಿಣ ಭಾರತದಿಂದ ಹೋಗಿ ಮುಂಬೈ ನಲ್ಲೇ ನೆಲೆಸಿದ್ದರೆ, ಹಾಗೂ ಅಂಥಹವರಿಗೆ ಪ್ರತಿಭೆ ಇದ್ದರೆ ಅವಕಾಶ ಕೊಡುತ್ತಾರೆ ಬಾಲಿವುಡ್ ಮಂದಿ, ಆದರೆ ದಕ್ಷಿಣ ಭಾರತದಲ್ಲಿ ಹಿಟ್ ಆದ ನಟ-ನಟಿಯರಿಗೆ ಕರೆದು ಅವಕಾಶ ಕೊಡುವುದು ಕಡಿಮೆ.
ಸುದೀಪ್ ಕೆಲವು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು, ಆದರೆ ಅದನ್ನು ನಿರ್ದೇಶಿಸಿದ್ದು ದಕ್ಷಿಣದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಆದರೆ ನಟ ವಿಜಯ್ ಸೇತುಪತಿ ಸತತ ಎರೆಡನೇ ಬಾರಿಗೆ ಹಿಂದಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಹೌದು, ನಟ ವಿಜಯ್ ಸೇತುಪತಿ ಅವರಿಗೆ ಎರಡನೇ ಬಾರಿ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂದಿದೆ. ಆದರೆ ಈಗ ದೊರಕಿರುವ ಹಿಂದಿ ಸಿನಿಮಾ, ತಮಿಳು ಸಿನಿಮಾದ ರೀಮೇಕ್ ಆಗಿದೆ.

ಅಮೀರ್ ಖಾನ್ ಜೊತೆಗೆ ಸೇತುಪತಿ ನಟನೆ
ವಿಜಯ್ ಸೇತುಪತಿ ಈಗಾಗಲೇ ಸ್ಟಾರ್ ನಟ ಅಮೀರ್ ಖಾನ್ ನಾಯಕರಾಗಿ ನಟಿಸುತ್ತಿರುವ ಲಾಲ್‌ಸಿಂಗ್ ಛಡ್ಡಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಹಿಂದಿ ಸಿನಿಮಾ. ಇಂಗ್ಲಿಷ್ ನ ಫಾರೆಸ್ಟ್ ಗಂಫ್ ಸಿನಿಮಾದ ರೀಮೇಕ್ ಲಾಲ್ ಸಿಂಗ್ ಛಡ್ಡಾ.

ತಮಿಳಿನ ಹಿಟ್ ಸಿನಿಮಾ ಹಿಂದಿಗೆ ರೀಮೇಕ್
ತಮಿಳಿನಲ್ಲಿ ಹಿಟ್ ಆಗಿದ್ದ ಸಿನಿಮಾ 'ಮಹಾನಗರಂ' ಹಿಂದಿಗೆ ರೀಮೇಕ್ ಆಗುತ್ತಿದ್ದು. ಸಿನಿಮಾದ ಅತ್ಯಂತ ಪ್ರಮುಖ ಪಾತ್ರಕ್ಕೆ ವಿಜಯ್ ಸೇತುಪತಿ ಅವರನ್ನು ಆಹ್ವಾನಿಸಲಾಗಿದೆ. ಹಿಂದಿ ರೀಮೇಕ್‌ನಲ್ಲಿ ವಿಜಯ್ ಸೇತುಪತಿ ಅವರದ್ದು ತಮಿಳು ನಾಗರೀಕನ ಪಾತ್ರವೇ ಎನ್ನಲಾಗುತ್ತಿದೆ.

ಹಿರಿಯ ನಿರ್ದೇಶಕ ಸಂತೋಶ್ ಶಿವನ್ ನಿರ್ದೇಶನ
'ಮಾನಗರಂ' ಸಿನಿಮಾವನ್ನು ತಮಿಳಿನ ಹಿಟ್ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಹಿಂದಿಯಲ್ಲಿ ಇದೇ ಸಿನಿಮಾವನ್ನು ಖ್ಯಾತ ಕ್ಯಾಮೆರಾಮನ್ ಮತ್ತು ನಿರ್ದೇಶಕ ಸಂತೋಶ್ ಶಿವನ್ ನಿರ್ದೇಶಿಸುತ್ತಿದ್ದಾರೆ. ಇರುವರ್, ದಿಲ್ ಸೇ, ರಾವಣ್, ಫಿಜಾ, ಪುಕಾರ್ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಕ್ಯಾಮೆರಾಮನ್ ಆಗಿರುವ ಸಂತೋಶ್ ಶಿವನ್, ಹಿಂದಿಯ ಅಸೋಕಾ ಸೇರಿ ಇನ್ನೂ ಹಲವಾರು ಹಿಟ್ ಸಿನಿಮಾ ನಿರ್ದೇಶಿಸಿದ್ದಾರೆ.
Recommended Video

ಹಲವು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಬ್ಯುಸಿ
ಭಾರತದ ಬ್ಯುಸಿ ನಟರಲ್ಲೊಬ್ಬರಾದ ವಿಜಯ್ ಸೇತುಪತಿ, ಲಾಭಂ, ಮಾ ಮನಿತ್ತನ್, ಮುತ್ತಯ್ಯ ಮುರಳಿಧರನ್ ಜೀವನಾಧಾರಿತ ಸಿನಿಮಾ, ಕಡೈಸಿ ವ್ಯವಸಾಯಿ, ತುಗಲಕ್ ದರ್ಬಾರ್, ಉಪ್ಪೆನ, ಕಾತು ವಾಕುಲ ರೆಂಡು ಕಾದಲ್, 800, ಇದಂ ಪೊರಲ್ ಇವಲ್, ಯಾಧಂ ಊರೆ ಯಾದವಂ ಕೆಲುರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಾಸ್ಟರ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ.


Click it and Unblock the Notifications











