ದಕ್ಷಿಣ ಭಾರತದ ಖ್ಯಾತ ನಟನ ಜೊತೆ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟ ಶಾಹಿದ್ ಕಪೂರ್
ಬಾಲಿವುಡ್ ನ ಸ್ಟಾರ್ ನಟ ಶಾಹಿದ್ ಕಪೂರ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾಗಳ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಶಾಹಿದ್, ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾದ ಹಿಂದಿ ರಿಮೇಕ್ ಕಬೀರ್ ಸಿಂಗ್ ನಲ್ಲಿ ನಟಿಸಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದರು.
ಇದೀಗ ತೆಲುಗು ನಟ ನಾನಿ ನಟನೆಯ ಸೂಪರ್ ಹಿಟ್ ಜರ್ಸಿ ಸಿನಿಮಾದ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಶಾಹಿದ್ ಕಪೂರ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೌದು, ಶಾಹಿದ್ ಕಪೂರ್ ಸದ್ಯ ವೆಬ್ ಸೀರಿಸ್ ಲೋಕದ ಕಡೆ ಗಮನ ಹರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಲೋಕ ಪ್ರೇಕ್ಷಕರನ್ನು ಹೆಚ್ಚು ಸೆಳೆಯುತ್ತಿದೆ. ಅನೇಕ ಸ್ಟಾರ್ ಕಲಾವಿದರು ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ಶಾಹಿದ್ ಕಪೂರ್ ಸಹ ಸಿನಿಮಾಗಳ ಜೊತೆಗೆ ಡಿಜಿಟಲ್ ಲೋಕದಲ್ಲೂ ಮಿಂಚಲು ಸಜ್ಜಾಗಿದ್ದಾರೆ. ವಿಶೇಷ ಎಂದರೆ ಶಾಹಿದ್ ಕಪೂರ್ ಹೊಸ ವೆಬಸ್ ರೀಲ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಮಾತ್ಯರು ಅಲ್ಲ ವಿಜಯ್ ಸೇತುಪತಿ. ಈ ವೆಬ್ ಸೀರಿಸ್ ರಾಜ್ ಮತ್ತು ಡಿಕೆ ನಿರ್ದೇಶನಲ್ಲಿ ಮೂಡಿಬರುತ್ತಿದೆ.

ಈಗಾಗಲೇ ವಿಜಯ್ ದೇವರಕೊಂಡ ಜೊತೆ ಮಾತುಕತೆ ನಡೆಸಿದ್ದು, ವಿಜಯ್ ನಟಿಸುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಗೋವಾದಲ್ಲಿ ಚಿತ್ರೀಕರಣ ಮಾಡಲು ತಂಡ ಪ್ಲಾನ್ ಮಾಡಿದೆ. ಆಕ್ಷನ್, ಥ್ರಿಲ್ಲರ್ ಸರಣಿಯಾಗಿದ್ದು, ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಬಾರಿಗೆ ವಿಜಯ್ ಮತ್ತು ಶಾಹಿದ್ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಚೊಚ್ಚಲ ಒಟಿಟಿಯಲ್ಲಿ ಪ್ಲಾಟ್ ಫಾರ್ಮ್ ನಲ್ಲಿ ಮಿಂಚಲು ಸಿದ್ಧರಾಗಿರುವ ವಿಜಯ್ ಮತ್ತು ಶಾಹಿದ್ ಅವರನ್ನು ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಇಬ್ಬರು ನಟರು ಈ ವೆಬ್ ಸೀರಿಸ್ ಗಾಗಿ ಭರ್ಜರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ವೆಬ್ ಸೀರಿಸ್ ನ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯದಲ್ಲೇ ಟೈಟಲ್ ಫೈನಲ್ ಆಗಲಿದ್ದು, ಹೆಚ್ಚಿನ ವಿವಿರವನ್ನು ಬಹಿರಂಗ ಪಡಿಸಲಿದೆ ತಂಡ.


Click it and Unblock the Notifications











