ಅದನ್ನು ಐಸ್‌ಕ್ರೀಂ ರೀತಿ ಆಸ್ವಾದಿಸಬೇಕು; ರಿಲೇಷನ್‌ಶಿಪ್ ಬಗ್ಗೆ ವಿಜಯ್ ವರ್ಮಾ ಮಾತು
ಮಾಡರ್ನ್ ಪ್ರೇಮಕ್ಕೆ ಮೈಲೇಜು ಕಮ್ಮಿ ಎಂದು 'ಪರಮಾತ್ಮ' ಚಿತ್ರದಲ್ಲಿ ಯೋಗರಾಜ್ ಭಟ್ ಹೇಳಿದ್ದರು. ಚಿತ್ರರಂಗದಲ್ಲಿ ಶುರುವಾಗುವ ಲವ್‌ಗೆ ಕೂಡ ಆಯಸ್ಸು ಬಹಳ ಕಮ್ಮಿ ಎನ್ನುವುದು ಆಗಾಗ್ಗೆ ಸಾಬೀತಾಗುತ್ತಿರುತ್ತದೆ. ನಟಿ ತಮನ್ನಾ ಹಾಗೂ ನಟ ವಿಜಯ್ ವರ್ಮಾ ಲವ್ ಬ್ರೇಕಪ್ ಬಗ್ಗೆ ಗುಲ್ಲಾಗಿದೆ.
ಎರಡು ವರ್ಷದ ಹಿಂದೆ ತಮನ್ನಾ ಹಾಗೂ ವಿಜಯ್ ವರ್ಮಾ ಸೀಕ್ರೆಟ್ ಲವ್ ಸ್ಟೋರಿ ರಿವೀಲ್ ಆಗಿತ್ತು. ಹೊಸ ವರ್ಷದ ಪಾರ್ಟಿಯಲ್ಲಿ ಇಬ್ಬರೂ ಗುಟ್ಟಾಗಿ ಭಾಗವಹಿಸಿದ್ದರು. ಒಬ್ಬರಿಗೊಬ್ಬರು ಮುತ್ತು ಕೊಡುವ ವೀಡಿಯೋ ವೈರಲ್ ಆಗಿ ಇಬ್ಬರ ರಿಲೇಷನ್‌ಶಿಪ್ ಬಯಲಾಗಿತ್ತು. ಬಳಿಕ ಇಬ್ಬರೂ ಒಟ್ಟಿಗೆ ಕಾರ್ ಏರಿ ಡಿನ್ನರ್‌ಗೆ ಹೋಗಿ ಬಂದಿದ್ದರು. ಬಳಿಕ ಬಹಿರಂಗವಾಗಿಯೇ ತಮ್ಮ ಪ್ರೀತಿ ವಿಚಾರ ಹಂಚಿಕೊಂಡಿದ್ದಾರೆ.

ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಲವ್ ಬ್ರೇಕಪ್ ಆಗಿದೆ ಎಂದು ಇತ್ತೀಚೆಗೆ ಬಾಲಿವುಡ್ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದರೆ ಈ ಬಗ್ಗೆ ಇಬ್ಬರೂ ನೇರವಾಗಿ ಪ್ರತಿಕ್ರಿಯಿಸಿಲ್ಲ. ಇದೆಲ್ಲದರ ನಡುವೆ ರಿಲೇಷನ್‌ಶಿಪ್ ಬಗ್ಗೆ ವಿಜಯ್ ವರ್ಮಾ ಮಾಡಿರುವ ಕಾಮೆಂಟ್ಸ್ ವೈರಲ್ ಆಗ್ತಿದೆ. ರಿಲೇಷನ್‌ಶಿಪ್ ಅನ್ನು ಕಾಪಾಡಿಕೊಳ್ಳುವುದು ಕಷ್ಟ. ಅದನ್ನು ಐಸ್‌ಕ್ರೀಮ್ ರೀತಿ ಆಸ್ವಾದಿಸಬೇಕು ಎಂದು ವಿಜಯ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ವಿಜಯ್ ವರ್ಮಾ ಭಾಗಿ ಆಗಿದ್ದರು. ಈ ವೇಳೆ ಅವರಿಗೆ ರಿಲೇಷನ್‌ಶಿಪ್ ಬಗ್ಗೆ ಪ್ರಶ್ನೆ ಎದುರಾಗಿದೆ. ವಿಜಯ್ ಮಾತನಾಡಿ "ನೀವು ರಿಲೇಷನ್‌ಶಿಪ್ ಅನ್ನು ಐಸ್‌ಕ್ರೀಮ್ ರೀತಿ ಆನಂದಿಸಿದರೆ, ನೀವು ಬಹಳ ಸಂತೋಷವಾಗಿರುತ್ತೀರಿ. ಸಿಹಿ, ಉಪ್ಪು ಹೀಗೆ ಯಾವುದೇ ರುಚಿ ಬಂದಾಗಲೂ ಅದನ್ನು ಸ್ವೀಕರಿಸಿ, ನೋವು, ಕೋಪ ಮತ್ತು ಕಿರಿಕಿರಿಯ ಪ್ರತಿಯೊಂದು ಅಂಶವನ್ನು ಒಪ್ಪಿಕೊಂಡು ಮುಂದುವರಿಯಬೇಕು. ಆಗ ಮಾತ್ರ ಅದು ಚೆಂದ" ಎಂದಿದ್ದಾರೆ.
ತಮನ್ನಾ ಜೊತೆಗಿನ ಬ್ರೇಕಪ್ ವದಂತಿ ಬೆನ್ನಲ್ಲೇ ವಿಜಯ್ ವರ್ಮಾ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಆದರೆ ಇಬ್ಬರೂ ಈ ಬಗ್ಗೆ ಸೋಶಿಯಲ್ ಮೀಡಿಯಾ ಆಗಲಿ, ಮಾಧ್ಯಮಗಳ ಮುಂದೆ ಆಗಲಿ ಇನ್ನು ಮಾತನಾಡಿಲ್ಲ. ಇಬ್ಬರೂ ಮೌನ ವಹಿಸಿರುವುದು ನೋಡಿದರೆ ಇದು ನಿಜವೇ ಇರಬಹುದು ಎನ್ನಲಾಗ್ತಿದೆ.
ವಿಜಯ್ ಹಾಗೂ ತಮನ್ನಾ ಜೋಡಿಯ 2 ವರ್ಷಗಳ ಲವ್ ಬ್ರೇಕಪ್ ಆಗಿದೆ. ಮುಂದೆ ಇಬ್ಬರೂ ಸ್ನೇಹಿತರಾಗಿ ಇರಲು ನಿರ್ಧರಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ತಮನ್ನಾ ಹಾಗೂ ವಿಜಯ್ ವರ್ಮಾ 'ಲಸ್ಟ್ ಸ್ಟೋರಿಸ್-2' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೇ ಸಮಯದಲ್ಲಿ ಶುರುವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು.
ಹಳೇ ಸಂದರ್ಶನವೊಂದರಲ್ಲಿ ಪ್ರೀತಿ ಬಗ್ಗೆ ತಮನ್ನಾ ಮಾತನಾಡಿದ್ದ ಮಾತುಗಳು ಬ್ರೇಕಪ್ ವದಂತಿ ಬಳಿಕ ವೈರಲ್ ಆಗಿತ್ತು. "ಪ್ರೀತಿ ಎನ್ನುವುದು ಒಂದು ಆಂತರಿಕ ವಿಷಯ, ಅದು ನೀವು ಯಾರನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀರಾ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಜನರು ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಅವರು ಮಾಡಬೇಕೆಂದು ನೀವು ಬಯಸಿದರೆ, ಅದು ಕೇವಲ ವ್ಯವಹಾರ. ನಾನು ಯಾರನ್ನಾದರೂ ಪ್ರೀತಿಸಬೇಕಾದರೆ, ನಾನು ಅವರನ್ನು ಅವರಾಗಿ ಇರಲು ಬಿಡಬೇಕು, ಎನ್ನುವುದನ್ನು ನಾನು ಅರಿತುಕೊಂಡಿದ್ದೇನೆ" ಎಂದಿದ್ದರು.
ಮಾತು ಮುಂದುವರೆಸಿದ್ದ ತಮನ್ನಾ "ನಾನು ರಿಲೇಷನ್‌ಶಿಪ್‌ನಲ್ಲಿ ಇರುವಾಗ ರಿಲೇಷನ್‌ಶಿಪ್‌ನಲ್ಲಿ ಇಲ್ಲದೇ ಇದ್ದಾಗ ಇರುವುದಕ್ಕಿಂತ ಹೆಚ್ಚು ಸಂತೋಷವಾಗಿದ್ದೇನೆ ಎಂದು ನನಗೆ ಅನಿಸುತ್ತದೆ. ನನಗೆ ಮತ್ತೊಬ್ಬರ ಜೊತೆಗಿನ ಒಡನಾಟದ ಭಾವನೆ ತುಂಬಾ ಇಷ್ಟ; ಅದು ಅದ್ಭುತವಾದ ಭಾವನೆ" ಎಂದಿದ್ದರು.


Click it and Unblock the Notifications











