ಮತ್ತೊಬ್ಬ ನಟಿ ಜೊತೆ ತಮನ್ನಾ ಮಾಜಿ ಪ್ರಿಯಕರನ ಲವ್ವಿ ಡವ್ವಿ?

ಸಿನಿಮಾ ಲೋಕದಲ್ಲಿ ತಾರೆಯರ ನಡುವೆ ಎಷ್ಟು ಬೇಗ ಲವ್ ಆಗುತ್ತೋ ಅಷ್ಟೇ ಬೇಗ ಬ್ರೇಕಪ್ ಸಹ ಆಗಿಬಿಡುತ್ತದೆ. ಕೆಲವರು ಮಾತ್ರ ಮದುವೆ, ಫ್ಯಾಮಿಲಿ ಅಂತೆಲ್ಲಾ ಮುಂದುವರೆಯುತ್ತಾರೆ. ಒಬ್ಬರ ಜೊತೆ ಬ್ರೇಕಪ್ ಆಗುತ್ತಿದ್ದಂತೆ ಕೆಲವೇ ದಿನಗಳಲ್ಲಿ ಮತ್ತೊಬ್ಬರ ಜೊತೆ ತಿರುಗಾಡುತ್ತಾರೆ.

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಹಾಗೂ ನಟ ವಿಜಯ್ ವರ್ಮಾ ಲವ್ ಸ್ಟೋರಿ ಗುಟ್ಟಾಗಿ ಏನು ಉಳಿದಿರಲಿಲ್ಲ. ಕೆಲ ದಿನ ಕದ್ದು ಮುಚ್ಚಿ ಓಡಾಡಿದ ಜೋಡಿ ವಿಷಯ ಲೀಕ್ ಆಗುತ್ತಿದ್ದಂತೆ ಬಹಿರಂಗವಾಗಿ ಸುತ್ತಾಡಿದ್ದರು. ಬಳಿಕ ತಮ್ಮಿಬ್ಬರ ಪ್ರೇಮ್ ಕಹಾನಿಯನ್ನು ಒಪ್ಪಿಕೊಂಡಿದ್ದರು. ಇತ್ತೀಚೆಗೆ ಇಬ್ಬರೂ ದೂರಾಗಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಲಿಲ್ಲ. ಇದೀಗ ನಟ ವಿಜಯ್ ವರ್ಮಾ ಮತ್ತೊಬ್ಬ ನಟಿ ಜೊತೆ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ.

Vijay Varma Sparks Dating Rumors with Fatima Sana Shaikh After Tamannaah Breakup Buzz

'ದಂಗಲ್' ಚಿತ್ರ ನಟಿ ಫಾತಿಮಾ ಸನಾ ಶೇಕ್ ಜೊತೆ ವಿಜಯ್ ವರ್ಮಾ ಇರುವ ಫೋಟೊವೊಂದು ಹಲ್‌ಚಲ್ ಎಬ್ಬಿಸಿದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಊಹಾಪೋಹಕ್ಕೆ ಕಾರಣವಾಗಿದೆ. 'ಗುಸ್ತಾಕ್ ಇಷ್ಕ್' ಎಂಬ ಚಿತ್ರದಲ್ಲಿ ವಿಜಯ್ ಹಾಗೂ ಫಾತಿಮಾ ನಟಿಸುತ್ತಿದ್ದಾರೆ. ಇದೇ ಸಮಯದಲ್ಲಿ ಇಬ್ಬರ ನಡುವೆ ಲವ್ವಾಯ್ತಾ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಇದರಲ್ಲಿ ಎಷ್ಟು ನಿಜ ಇದೆ ಎನ್ನುವುದು ಮಾತ್ರ ಗೊತ್ತಿಲ್ಲ.

ವಿಬು ಪುರಿ ನಿರ್ದೇಶನದ 'ಗುಸ್ತಾಕ್ ಇಷ್ಕ್' ಚಿತ್ರದಲ್ಲಿ ನಸೀರುದ್ದಿನ್ ಶಾ, ರೋಹನ್ ವರ್ಮಾ, ಶಬೀರ್ ಹಶ್ಮಿ ಸೇರಿ ಹಲವರು ನಟಿಸುತ್ತಿದ್ದಾರೆ. ಈ ಹಿಂದೆ ಫಾತಿಮಾ ಸನಾ ಶೇಕ್ ಹೆಸರು ಆಮೀರ್ ಖಾನ್ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅದೇ ಕಾರಣಕ್ಕೆ ಆಮೀರ್ ಚಿತ್ರದಲ್ಲಿ ಆಕೆಗೆ ಅವಕಾಶಗಳು ಸಿಗುತ್ತಿದೆ ಎನ್ನಲಾಗಿತ್ತು. ಆದರೆ ಬಾಲಿವುಡ್ ಮಿ. ಪರ್ಫೆಕ್ಷನಿಸ್ಟ್ ಈಗ ಗೌರಿ ಸ್ಪ್ರಾಟ್ ಎಂಬುವವರ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ.

Vijay Varma Sparks Dating Rumors with Fatima Sana Shaikh After Tamannaah Breakup Buzz

ಹೈದರಾಬಾದ್ ಮೂಲಕ ವಿಜಯ್ ವರ್ಮಾ ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ನಟನಾಗಿ ಕಾಣಿಸಿಕೊಂಡಿರುವುದು ಹೆಚ್ಚು. ವಿಲನ್ ಆಗಿಯೂ ಅಬ್ಬರಿಸಿದ್ದಾರೆ. ಇತ್ತೀಚೆಗೆ ಲೀಡ್ ರೋಲ್‌ಗಳು ಸಿಗುತ್ತಿದೆ. 'ಲಸ್ಟ್ ಸ್ಟೋರಿಸ್' ಸಿನಿಮಾದಲ್ಲಿ ತಮನ್ನಾ ಜೊತೆ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಲವ್ವಾಗಿತ್ತು. ಆದರೆ ಇಬ್ಬರೂ ದೂರಾಗಲು ಕಾರಣ ಏನು ಎನ್ನುವುದು ಮಾತ್ರ ಬಹಿರಂಗವಾಗಲಿಲ್ಲ. ಬ್ರೇಕಪ್ ಬಗ್ಗೆ ಕೂಡ ಇಬ್ಬರೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ.

ಸದ್ಯ 'ಜಾನೆ ಜಾನ್' ಹಾಗೂ 'ಮರ್ಡರ್ ಮುಬಾರಕ್' ಎಂಬ ಮತ್ತೆರಡು ಸಿನಿಮಾಗಳು ವಿಜಯ್ ವರ್ಮಾ ಕೈಯಲ್ಲಿವೆ. ಇನ್ನು ಬಾಲ ನಟಿಯಾಗಿ ಫಾತಿಮಾ ಚಿತ್ರರಂಗ ಪ್ರವೇಶಿಸಿದ್ದರು. 'ದಂಗಲ್' ಚಿತ್ರದಲ್ಲಿ ಗೀತಾ ಪೋಗಟ್ ಪಾತ್ರದಲ್ಲಿ ಅಬ್ಬರಿಸಿದ್ದರು. ಚಿತ್ರದಲ್ಲಿ ಮಹಾವೀರ್ ಸಿಂಗ್ ಪೋಗಟ್ ಆಗಿ ಕಾಣಿಸಿಕೊಂಡಿದ್ದ ಆಮೀರ್ ಖಾನ್ ಮಗಳ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಮತ್ತೆ ಆಮೀರ್ ಜೊತೆ ಮಿಂಚಿದ್ದರು.

'ಲುಡೊ', 'ಥಾರ್', 'ಧಕ್ ಧಕ್', 'ಸಾಮ್ ಬದ್ದೂರ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಫಾತಿಮಾ ಸನಾ ಶೇಕ್ ನಟಿಸಿದ್ದರು. 'ಗುಸ್ತಾಕ್ ಇಷ್ಕ್' ಸಿನಿಾ ಜೊತೆಗೆ 'ಆಪ್ ಜೈಸಾ ಕೊಯಿ' ಎಂಬ ಮತ್ತೊಂದು ಸಿನಿಮಾ ಕೂಡ ಆಕೆ ಬಣ್ಣ ಹಚ್ಚಿದ್ದಾರೆ.

More from Filmibeat

English summary
After rumors of his breakup with Tamannaah Bhatia, actor Vijay Varma is now in the spotlight for his viral photo with Fatima Sana Shaikh;
Read more about: tamannaah bhatia hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X