ಪ್ರೀತಿ ಮಾಡಿರುವಾಗ ಭಯವೇಕೆ?: ತಮನ್ನಾ ಜೊತೆಗಿನ ಪ್ರೇಮ ಸಂಬಂಧದ ಬಗ್ಗೆ ವಿಜಯ್ ವರ್ಮಾ ಮುಕ್ತ ಮಾತು

ಬಾಲಿವುಡ್ ನಟ ವಿಜಯ್ ವರ್ಮಾ ತಮ್ಮ ಡಾರ್ಲಿಂಗ್ಸ್, ದಹಾಡ್ ಮತ್ತು ಲಸ್ಟ್ ಸ್ಟೋರೀಸ್ 2 ಸಿನಿಮಾ, ವೆಬ್ ಸೀರಿಸ್‌ಗಳಿಂದ ಸುದ್ದಿಯಲ್ಲಿದ್ದಾರೆ. ಇದರ ಜೊತೆಗೆ ವಿಜಯ್ ವರ್ಮಾ ಅವರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೊಂದಿಗೆ ಪ್ರೀತಿಯಲ್ಲಿದ್ದು ಹಲವು ಬಾರಿ ಸುದ್ದಿಯಾಗಿದ್ದಾರೆ.

ಹೆಚ್ಚಾಗಿ ನಟ ನಟಿಯರು ತಮ್ಮ ಪ್ರೇಮ ಸಂಬಂಧಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಮದುವೆಯ ಹಂತಕ್ಕೆ ಬಂದಾಗ ಇಬ್ಬರ ನಡುವಿನ ಪ್ರೀತಿ ಬಗ್ಗೆ ತಿಳಿಯುತ್ತದೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಂಬಂಧದ ಬಗ್ಗೆ ಮುಚ್ಚಿಡಲು ಯಾಕೆ ಬಯಸಲಿಲ್ಲ ಎಂಬ ಪ್ರಶ್ನೆಗೆ ವಿಜಯ್ ನೇರವಾಗಿ ಉತ್ತರಿಸಿದ್ದಾರೆ.

Vijay Varma speaks about his relationship with Tamannaah Bhatia

ಹಿಂದೂಸ್ತಾನ್ ಟೈಮ್ಸ್‌ನೊಂದಿಗಿನ ಸಂದರ್ಶನದಲ್ಲಿ ನಟ ವಿಜಯ್ ವರ್ಮಾ ತಮ್ಮ ಪ್ರೇಮ, ವೃತ್ತಿಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತರ ಬಾಲಿವುಡ್ ಸೆಲೆಬ್ರಿಟಿಗಳಂತೆ ನೀವು ಮತ್ತು ತಮನ್ನಾ ತಮ್ಮ ಸಂಬಂಧವನ್ನು ಏಕೆ ಮುಚ್ಚಿಟ್ಟಿಲ್ಲ ಎಂದು ವಿಜಯ್ ಅವರನ್ನು ಪ್ರಶ್ನೆ ಮಾಡಲಾಗಿದೆ.

ಇದಕ್ಕೆ ಹಾಡಿನ ಮೂಲಕ ಉತ್ತರಿಸಿರುವ ಅವರು, "ನಾನು ಮುಘಲ್-ಎ-ಆಜಮ್‌ನ 'ಜಬ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಹಾಡು ಇಷ್ಟಪಡುತ್ತೇನೆ" ಎಂದಿದ್ದಾರೆ. ಪ್ರೀತಿ ಮಾಡುವಾಗ ಹೆದರುವುದೆ ಏಕೆ ಎಂಬ ಅರ್ಥದಲ್ಲಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಫಿಲ್ಮ್ ಕಂಪ್ಯಾನಿಯನ್ ಜೊತೆಗೆ ಈ ಹಿಂದೆ ಮಾತನಾಡಿದ್ದ ಅವರು, ನಟಿಯೊಂದಿಗೆ ಡೇಟಿಂಗ್ ಮಾಡಲು ಇಷ್ಟವಿರಲಿಲ್ಲ ಎಂದು ತಿಳಿಸಿದ್ದರು. ಜೊತೆಗೆ ತಮನ್ನಾ ಅವರನ್ನು ಭೇಟಿಯಾದಾಗ ಅವರ ನಿರ್ಧಾರ ಹೇಗೆ ಬದಲಾಯಿತು ಎಂಬುದನ್ನು ತಿಳಿಸಿದ್ದರು.

Vijay Varma speaks about his relationship with Tamannaah Bhatia

"ನಾನು ವೃತ್ತಿ ಜೀವನ ಪ್ರಾರಂಭಿಸಿದಾಗ, ನಟಿ ಅಥವಾ ಉದ್ಯಮದ ಯಾರೊಂದಿಗೂ ಡೇಟಿಂಗ್ ಮಾಡಬಾರದು ಎಂದುಕೊಂಡಿದ್ದೆ. ಆದರೆ, ನಾವು ಒಬ್ಬರನ್ನೊಬ್ಬರು ನೋಡಲು ಪ್ರಾರಂಭಿಸಿದಾಗ, ಇಲ್ಲಿನ ಆಟವನ್ನು ತಿಳಿದಿರುವ, ವ್ಯವಹಾರವನ್ನು ತಿಳಿದಿರುವ, ಕಲಾತ್ಮಕ, ಸೃಜನಶೀಲ, ಲಾಜಿಸ್ಟಿಕ್ಸ್, ಹಣಕಾಸು, ಚಲನಚಿತ್ರ ತಯಾರಿಕೆಯ ಎಲ್ಲಾ ಬದಿಗಳನ್ನು ಅರ್ಥಮಾಡಿಕೊಳ್ಳುವ ಒಬ್ಬರನ್ನು ಪಡೆಯುವುದು ತುಂಬಾ ಮೌಲ್ಯಯುತವಾದದ್ದು ಎಂಬುದನ್ನು ತಿಳಿದುಕೊಂಡೆ" ಎಂದು ಹೇಳಿದ್ದಾರೆ.

ವಿಜಯ್ ವರ್ಮಾ ಮತ್ತು ತಮನ್ನಾ ಮೊದಲ ಬಾರಿಗೆ ನೆಟ್‌ಫ್ಲಿಕ್ಸ್‌ನ ಲಸ್ಟ್ ಸ್ಟೋರೀಸ್ 2 ನಲ್ಲಿ ಒಟ್ಟಿಗೆ ನಟಿಸಿದರು, ಸಿನಿಮಾದಲ್ಲಿನ ಅವರ ಕೆಮಿಸ್ಟ್ರಿ ಸಕತ್ ಸುದ್ದಿಯಾಗಿತ್ತು. ತಮನ್ನಾ ಭಾಟಿಯಾ ಅವರು ನೆಟ್‌ಫ್ಲಿಕ್ಸ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ತಾನು ಮತ್ತು ವಿಜಯ್ ಪ್ರೀತಿಸುತ್ತಿದ್ದೆವು ಎಂದು ಈ ಹಿಂದೆ ಬಹಿರಂಗಪಡಿಸಿದ್ದರು.

ಅವರ ವೃತ್ತಿಪರ ಸಾಧನೆಗಳ ಬಗ್ಗೆ ಮಾತನಾಡಿರುವ ವಿಜಯ್ ವರ್ಮಾ, "ಈ ನರೇಟಿವ್ಸ್ , ಪಾತ್ರಗಳನ್ನು ರೂಪಿಸುವ ಪ್ರಯತ್ನ ಮತ್ತು ನಿರ್ಧಾರಗಳನ್ನು ನಾನು ಪ್ರಶಂಸಿಸುತ್ತೇನೆ. ಸಿನಿಮಾ, ವೆಬ್‌ ಸೀರಿಸ್‌ಗಳ ಯಶಸ್ಸು ಸಂಪೂರ್ಣವಾಗಿ ನನ್ನ ಕೈಯಲ್ಲಿಲ್ಲದಿದ್ದರೂ ಗೆಲುವಿನ ಅಮಲಿನಲ್ಲಿರುವುದು ಅದ್ಭುತವಾಗಿದೆ" ಎಂದಿದ್ದಾರೆ.

ಇನ್ನು, ವಿಜಯ್ ಮುಂದೆ ಕರೀನಾ ಕಪೂರ್ ಖಾನ್ ಅವರೊಂದಿಗೆ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾರಾ ಅಲಿ ಖಾನ್ ಅವರೊಂದಿಗೆ ಹೋಮಿ ಅಡ್ಜಾನಿಯಾ ಅವರ ಚಿತ್ರ ಮರ್ಡರ್ ಮುಬಾರಕ್ ಮತ್ತು ಬಹುನಿರೀಕ್ಷಿತ ಮಿರ್ಜಾಪುರ್ 3 ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ವರ್ಮಾ ಗಲ್ಲಿ ಬಾಯ್ ಮತ್ತು ಸೂಪರ್ 30 ನಂತಹ ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Vijay Varma speaks about his relationship with Tamannaah Bhatia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X