For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್‌ಗೆ ಕತೆ ಕೊಟ್ಟಿದ್ದಕ್ಕೆ ತಂದೆ ಮೇಲೆ ಬೇಸರಿಸಿಕೊಂಡಿದ್ದ ರಾಜಮೌಳಿ

  |

  ರಾಜಮೌಳಿ ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲೊಬ್ಬರು. ಯಶಸ್ಸಿನ ಮೇಲೆ ಯಶಸ್ಸುಗಳಿಸುತ್ತಲೇ ಸಾಗುತ್ತಿದ್ದಾರೆ ರಾಜಮೌಳಿ.

  ರಾಜಮೌಳಿ ನಿರ್ದೇಶಿಸಿರುವ ಅತ್ಯುತ್ತಮ ಸಿನಿಮಾಗಳ ಹಿಂದೆ ಇರುವುದು ಅವರ ತಂದೆ ವಿಜಯೇಂದ್ರ ಪ್ರಸಾದ್‌ ಕಲ್ಪನಾ ಶಕ್ತಿ ಎಂಬುದು ಗುಟ್ಟೇನೂ ಅಲ್ಲ. ರಾಜಮೌಳಿ ಈವರೆಗೆ ನಿರ್ದೇಶಿಸಿರುವ ಬಹುತೇಕ ಸಿನಿಮಾಗಳಿಗೆ ಕತೆ ಒದಗಿಸಿರುವವರು ಅವರ ತಂದೆ ವಿಜಯೇಂದ್ರ ಪ್ರಸಾದ್.

  ಅಪ್ಪನ ಕಂಡರೆ ಅತೀವ ಪ್ರೀತಿ, ಗೌರವಗಳನ್ನು ಹೊಂದಿರುವ ರಾಜಮೌಳಿ, ಒಮ್ಮೆ ಮಾತ್ರ ಅಪ್ಪನ ಮೇಲೆ ಬಹಳ ಬೇಸರಗೊಂಡಿದ್ದರಂತೆ. ಕತೆಯೊಂದನ್ನು ಸಲ್ಮಾನ್ ಖಾನ್‌ಗೆ ನೀಡಿದ್ದಕ್ಕೆ ರಾಜಮೌಳಿ ಬೇಸರಪಟ್ಟುಕೊಂಡು ವಿಜಯೇಂದ್ರ ಪ್ರಸಾದ್ ಜೊತೆ ವಾಗ್ವಾದ ನಡೆಸಿದ್ದರು. ಈ ವಿಷಯವನ್ನು ಸ್ವತಃ ವಿಜಯೇಂದ್ರ ಪ್ರಸಾದ್ ಹೇಳಿಕೊಂಡಿದ್ದಾರೆ.

  ರಾಕ್‌ಲೈನ್ ವೆಂಟಕೇಶ್ ನಿರ್ಮಾಣ ಮಾಡಿ, ಸಲ್ಮಾನ್ ಖಾನ್ ನಟಿಸಿದ್ದ ಸೂಪರ್ ಡೂಪರ್ ಹಿಟ್ ಸಿನಿಮಾ, 'ಭಜರಂಗಿ ಭಾಯಿಜಾನ್' ಸಿನಿಮಾಕ್ಕೆ ಕತೆ ಒದಗಿಸಿರುವುದು ವಿಜಯೇಂದ್ರ ಪ್ರಸಾದ್. ಆಂಜನೇಯ ಸ್ವಾಮಿ ಭಕ್ತನೊಬ್ಬ ಪಾಕಿಸ್ತಾನದ ಮುಸ್ಲಿಂ ಬಾಲಕಿಯನ್ನು ಭಾರತದಿಂದ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿ ಅವರಿಗೆ ಒಪ್ಪಿಸುವುದು ಸಿನಿಮಾದ ಕತೆ. 2015ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

  2015 ರಲ್ಲಿ ಬಿಡುಗಡೆ ಆಗಿದ್ದ 'ಭಜರಂಗಿ ಬಾಯಿಜಾನ್'

  2015 ರಲ್ಲಿ ಬಿಡುಗಡೆ ಆಗಿದ್ದ 'ಭಜರಂಗಿ ಬಾಯಿಜಾನ್'

  ರಾಕ್‌ಲೈನ್ ವೆಂಟಕೇಶ್ ನಿರ್ಮಾಣ ಮಾಡಿ, ಸಲ್ಮಾನ್ ಖಾನ್ ನಟಿಸಿದ್ದ ಸೂಪರ್ ಡೂಪರ್ ಹಿಟ್ ಸಿನಿಮಾ, 'ಭಜರಂಗಿ ಭಾಯಿಜಾನ್' ಸಿನಿಮಾಕ್ಕೆ ಕತೆ ಒದಗಿಸಿರುವುದು ವಿಜಯೇಂದ್ರ ಪ್ರಸಾದ್. ಆಂಜನೇಯ ಸ್ವಾಮಿ ಭಕ್ತನೊಬ್ಬ ಪಾಕಿಸ್ತಾನದ ಮುಸ್ಲಿಂ ಬಾಲಕಿಯನ್ನು ಭಾರತದಿಂದ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿ ಅವರಿಗೆ ಒಪ್ಪಿಸುವುದು ಸಿನಿಮಾದ ಕತೆ. 2015ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

  ರಾಜಮೌಳಿಗೆ ಕತೆ ಹೇಳಿದ್ದ ವಿಜಯೇಂದ್ರ ಪ್ರಸಾದ್

  ರಾಜಮೌಳಿಗೆ ಕತೆ ಹೇಳಿದ್ದ ವಿಜಯೇಂದ್ರ ಪ್ರಸಾದ್

  ಆದರೆ ಆ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಬೇಕು ಎಂದುಕೊಂಡಿದ್ದರಂತೆ. ಅಸಲಿಗೆ ರಾಜಮೌಳಿಗೆ ಮೊದಲು ವಿಜಯೇಂದ್ರ ಪ್ರಸಾದ್ ಕತೆಯನ್ನು ಹೇಳಿದ್ದರು. ಕತೆ ಕೇಳಿ ಭಾವುಕರಾದ ರಾಜಮೌಳಿ ಕತೆಯನ್ನೇನೋ ಮೆಚ್ಚಿದರು. ಆದರೆ ಕತೆಯನ್ನು ಬೇರೆಯವರಿಗೆ ಕೊಟ್ಟುಬಿಡಿ ಎಂದಿದ್ದರು. ಅಂತೆಯೇ ವಿಜಯೇಂದ್ರ ಪ್ರಸಾದ್ ಆ ಕತೆಯನ್ನು ರಾಕ್‌ಲೈನ್ ವೆಂಕಟೇಶ್‌ಗೆ ನೀಡಿದರು. ಆ ಮೂಲಕ ಸಲ್ಮಾನ್ ಖಾನ್‌ಗೆ ಕತೆ ತಲುಪಿತು.

  ಬೇಸರಗೊಂಡಿದ್ದ ರಾಜಮೌಳಿ

  ಬೇಸರಗೊಂಡಿದ್ದ ರಾಜಮೌಳಿ

  ಆದರೆ 'ಭಜರಂಗಿ ಭಾಯಿಜಾನ್' ಸಿನಿಮಾ ಬಿಡುಗಡೆ ಆದ ಮೇಲೆ ಸಿನಿಮಾ ವೀಕ್ಷಿಸಿದ ರಾಜಮೌಳಿ, ಆ ಕತೆಯನ್ನು ಸಲ್ಮಾನ್ ಖಾನ್‌ಗೆ ಕೊಡಬಾರದಿತ್ತು, ನಾನೇ ಆ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ನಾನು 'ಬಾಹುಬಲಿ' ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟಿಂಗ್‌ನ ಒತ್ತಡದಲ್ಲಿರುವ ಸಂದರ್ಭದಲ್ಲಿ ನನಗೆ ನೀವು ಆ ಕತೆ ಹೇಳಿದಿರಿ. ಅದೇ ನೀವು ಆ ಕತೆಯನ್ನು ಹತ್ತು ದಿನ ಮುಂಚೆ ಅಥವಾ ಶೂಟಿಂಗ್ ಮುಗಿದ ಬಳಿಕ ಹೇಳಿದ್ದಿದ್ದರೆ ನಾನು ಖಂಡಿತ ಆ ಸಿನಿಮಾ ನಿರ್ದೇಶನ ಮಾಡಿರುತ್ತಿದ್ದೆ ಎಂದರಂತೆ.

  ಚಿರಂಜೀವಿ ಸಿನಿಮಾದಿಂದ ಸ್ಪೂರ್ತಿ ಪಡೆದ ಸಿನಿಮಾ

  ಚಿರಂಜೀವಿ ಸಿನಿಮಾದಿಂದ ಸ್ಪೂರ್ತಿ ಪಡೆದ ಸಿನಿಮಾ

  'ಭಜರಂಜಿ ಬಾಯಿಜಾನ್' ಸಿನಿಮಾದ ಕತೆಯನ್ನು ಚಿರಂಜೀವಿ ಅವರ ಹಳೆಯ ಸಿನಿಮಾ 'ಪಸಿವಾಡಿ ಪ್ರಾಣಂ' ಸಿನಿಮಾ ನೋಡಿ ಸ್ಪೂರ್ತಿಯಿಂದ ಬರೆದಿದ್ದು ಎಂದು ವಿಜಯೇಂದ್ರ ಪ್ರಸಾದ್ ಹೇಳಿಕೊಂಡಿದ್ದಾರೆ. ಕತೆ ಬರೆಯುವಾಗಲೇ ಪಾಕಿಸ್ತಾನದ ಆಂಗಲ್ ಸಿನಿಮಾಕ್ಕೆ ಇತ್ತಂತೆ, ವಿಜಯೇಂದ್ರ ಪ್ರಸಾದ್‌ರ ಅಸಿಸ್ಟೆಂಟ್, ಪಾಕಿಸ್ತಾನದ ವಿಲನ್ ಅನ್ನು ಅಲ್ಲಿಗೆ ನುಗ್ಗಿ ಹೀರೋ ಕೊಲ್ಲುವಂತೆ ಕತೆ ಮಾಡಿ ಎಂದಿದ್ದರಂತೆ. ಆದರೆ ವಿಜಯೇಂದ್ರ ಪ್ರಸಾದ್‌ಗೆ ಭಾರತ-ಪಾಕ್ ನಡುವೆ ದ್ವೇಷ ಹೆಚ್ಚಿಸುವ ಕತೆ ಮಾಡುವುದು ಇಷ್ಟವಿಲ್ಲದೆ, ಅದನ್ನು ಕಡಿಮೆ ಮಾಡುವ ಕತೆ ಮಾಡೋಣವೆಂದು ಆ ಕತೆ ಮಾಡಿದರಂತೆ.

  ಭಜರಂಗಿ ಬಾಯಿಜಾನ್ 2 ಸಿನಿಮಾದ ಕತೆ ರೆಡಿ

  ಭಜರಂಗಿ ಬಾಯಿಜಾನ್ 2 ಸಿನಿಮಾದ ಕತೆ ರೆಡಿ

  ಇದೀಗ ಭಜರಂಗಿ ಬಾಯಿಜಾನ್ ಎರಡನೇ ಪಾರ್ಟ್‌ ಸಿನಿಮಾದ ಕತೆ ರೆಡಿಯಾಗಿದೆ. ಸಿನಿಮಾಕ್ಕೆ 'ಪವನಪುತ್ರ ಬಾಯಿಜಾನ್' ಎಂದು ಹೆಸರಿಡಲಾಗಿದೆ. 'ಭಜರಂಗಿ ಬಾಯಿಜಾನ್' ಸಿನಿಮಾದ ಮುಂದಿನ ಭಾಗ ಇದಾಗಿರಲಿದ್ದು, ಆ ಸಿನಿಮಾ ಮುಗಿದ ಸಮಯಕ್ಕಿಂತಲೂ ಏಳೆಂಟು ವರ್ಷಗಳ ನಂತರದ ಕತೆಯನ್ನು ಈ ಸಿನಿಮಾ ಹೊಂದಿರಲಿದೆ. ಆ ಸಿನಿಮಾದಲ್ಲಿದ್ದ ಬಹುತೇಕ ಪಾತ್ರಗಳು ಈ ಸಿನಿಮಾದಲ್ಲಿಯೂ ಮುಂದುವರೆಯಲಿದೆ. ಸಿನಿಮಾದ ಕತೆಯನ್ನು ಸಲ್ಮಾನ್ ಖಾನ್ ಈಗಾಗಲೇ ಒಪ್ಪಿಕೊಂಡಿದ್ದು, ಕೆಲವೇ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

  English summary
  Story writer Vijayendra Prasad reveled Rajamouli upset on him for giving Bhajarangi Bhaijan movie to Salman Khan. Rajamouli wanted to direct that movie.
  Sunday, July 17, 2022, 21:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X