'ಮಹಾಭಾರತ' ಸಿನಿಮಾಗೆ ಸಿದ್ಧತೆ: ಆಮೀರ್ ಖಾನ್ ಜೊತೆ 'ಬಾಹುಬಲಿ' ವಿಜಯೇಂದ್ರ ಪ್ರಸಾದ್ ಮಾತುಕತೆ
ಮಹಾಭಾರತ, ಚಿತ್ರಪ್ರಿಯರು ಭಾರಿ ಕುತೂಹಲದಿಂದ ಕಾಯುತ್ತಿರುವ ಸಿನಿಮಾ. ನಿರ್ದೇಶಕ ರಾಜಮೌಳಿ ಮಹಾಭಾರತ ಸಿನಿಮಾ ಮಾಡುತ್ತಾರೆ ಎಂದು ವರ್ಷಗಳಿಂದ ಹೇಳಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೀಗ ಮಹಾಭಾರತ ಸಿನಿಮಾ ಬಗ್ಗೆ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.
Recommended Video
ಬಾಲಿವುಡ್ ನಟ ಆಮೀರ್ ಖಾನ್ ಸಹ ಮಹಾಭಾರತ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೀಗ ಆಮೀರ್ ಖಾನ್ ಕನಸಿನ ಪ್ರೊಜೆಕ್ಟ್ ಗೆ ಜೀವ ಬಂದಿದೆ. ಈಗಾಗಲೆ ಮಹಾಭಾರತ ಸಿನಿಮಾದ ಬಗ್ಗೆ ಮಾತುಕತೆ ಪ್ರಾರಂಭವಾಗಿದೆ. ಈ ಬಗ್ಗೆ ಬಾಹುಬಲಿ ರಚನೆಕಾರ ವಿಜಯೇಂದ್ರ ಪ್ರಸಾದ್ ಮಾಹಿತಿ ಬಹಿರಂಗಪಡಿಸಿದ್ದಾರೆ.
ಹೌದು, ಮಹಾಭಾರತ ಸಿನಿಮಾದ ಬಗ್ಗೆ ವಿಜಯೇಂದ್ರ ಪ್ರಸಾದ್ ಬಾಲಿವುಡ್ ನಟ ಆಮೀರ್ ಖಾನ್ ಜೊತೆ ಮೊದಲ ಹಂತದ ಮಾತುಕತೆ ನಡೆಸಿದ್ದಾರಂತೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಮಹಾಭಾರತ ಸಿನಿಮಾಗೆ ಸದ್ಯ ಆಮೀರ್ ಖಾನ್ ಒಬ್ಬರು ಮಾತ್ರ ಫಿಕ್ಸ್ ಆಗಿದ್ದಾರೆ. ಬಾಹುಬಲಿ ಮತ್ತು ಭಜರಂಗಿ ಭಾಯ್ ಜಾನ್ ಸಿನಿಮಾದ ರಚನೆಕಾರ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ.

ಎಲ್ಲವು ಅಂದುಕೊಂಡಂತೆ ಆದರೆ ಸಿನಿಮಾ ಸಧ್ಯದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇರಲಿದೆ. ಆದರೆ ಯಾರೆಲ್ಲ ಇರಲಿದ್ದಾರೆ ಎನ್ನುವುದು ಅಧಿಕೃತವಾಗಿಲ್ಲ. ಸದ್ಯ ಮಾತುಕತೆ ಪ್ರಾರಂಭವಾಗಿ, ಸ್ಕ್ರಿಪ್ಟ್ ಕೆಲಸವು ಆರಂಭವಾಗಿದೆಯಷ್ಟೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಮಹಾಭಾರತ ಯಾವಾಗ ಸೆಟ್ಟೇರಲಿದೆ ಎನ್ನುವುದೇ ಅಭಿಮಾನಿಗಳ ಕಾತರ.


Click it and Unblock the Notifications











