For Quick Alerts
  ALLOW NOTIFICATIONS  
  For Daily Alerts

  ದಕ್ಷಿಣದ ಸಿನಿಮಾಗಳ ಮುಂದೆ ಮಂಕಾದ ಹೃತಿಕ್-ಸೈಫ್ ಅಲಿ ಖಾನ್ ಸಿನಿಮಾ

  |

  ನಿನ್ನೆ (ಸೆಪ್ಟೆಂಬರ್ 30) ಸಿನಿಪ್ರೇಮಿಗಳಿಗೆ ಭರ್ಜರಿ ಶುಕ್ರವಾರ. ಕೆಲವು ಅತ್ಯುತ್ತಮ ಸಿನಿಮಾಗಳು ನಿನ್ನೆ ಬಿಡುಗಡೆ ಆಗಿವೆ.

  ಕನ್ನಡದಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ', ಜಗ್ಗೇಶ್ ನಟನೆಯ 'ತೋತಾಪುರಿ', ಮಣಿರತ್ನಂ ನಿರ್ದೇಶಿಸಿ ವಿಕ್ರಂ, ಐಶ್ವರ್ಯಾ ರೈ, ಕಾರ್ತಿ ನಟಿಸಿರುವ 'ಪೊನ್ನಿಯಿನ್ ಸೆಲ್ವನ್', ಧನುಶ್ ನಟನೆಯ 'ನಾನೇ ವರುವೇನ್' (ಸೆಪ್ಟೆಂಬರ್ 29), ಹಿಂದಿಯಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ನಟಿಸಿರುವ 'ವಿಕ್ರಂ ವೇದ' ಸಿನಿಮಾ ಬಿಡುಗಡೆ ಆಗಿವೆ.

  ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ಹಿನ್ನೆಡೆ ಅನುಭವಿಸುತ್ತಿದ್ದರೂ ಸಹ ನಿನ್ನೆ ಹೃತಿಕ್ ರೋಷನ್-ಸೈಫ್ ಅಲಿ ಖಾನ್‌ರ 'ವಿಕ್ರಂ ವೇದ' ದಕ್ಷಿಣ ಭಾರತದ ಸಿನಿಮಾಗಳು ಎದುರು ಬಿಡುಗಡೆ ಆಗಿದೆ. ನಿರೀಕ್ಷೆಯಂತೆಯೇ ಈ ಸಿನಿಮಾ ಬಹುನಿಧಾನಗತಿಯ ಓಪನಿಂಗ್ ಪಡೆದುಕೊಂಡಿದೆ.

  ಭಾರತದಲ್ಲಿ 'ವಿಕ್ರಂ ವೇದ' ಸಿನಿಮಾವು ಪೊನ್ನಿಯಿನ್ ಸೆಲ್ವನ್ ಸಿನಿಮಾದಿಂದ ದೊಡ್ಡ ಸ್ಪರ್ಧೆ ಎದುರಿಸಿದೆ. ಹಾಗಿದ್ದರು ಸುಮಾರು 10 ರಿಂದ 12 ಕೋಟಿ ಮೊದಲ ದಿನ ಗಳಿಸಿ ಸಾಧಾರಣ ಓಪನಿಂಗ್ ಅನ್ನು ಪಡೆದುಕೊಂಡಿದೆ. ಆ ಮೂಲಕ ಬಾಕ್ಸ್ ಆಫೀಸ್‌ ರೇಸ್‌ನಲ್ಲಿ ಉಳಿದುಕೊಂಡಿದೆ.

  ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಭರ್ಜರಿ ಸಿನಿಮಾಗಳು ಈ ವಾರ ತೆರೆಗೆ ಬಂದಿರುವ ಕಾರಣ ದಕ್ಷಿಣದಿಂದ 'ವಿಕ್ರಂ ವೇದ' ಸಿನಿಮಾಕ್ಕೆ ಹೆಚ್ಚಿನ ಕಲೆಕ್ಷನ್ ಬಂದಿಲ್ಲ. ಹೆಚ್ಚು ಸಂಖ್ಯೆಯ ಚಿತ್ರಮಂದಿರಗಳು ಸಹ ಈ ಸಿನಿಮಾಕ್ಕೆ ದೊರೆತಿಲ್ಲ. ಹಾಗಾಗಿ ದಕ್ಷಿಣ ಭಾರತದಿಂದ ತೀವ್ರ ನಿರಾಸೆಯನ್ನು ವಿಕ್ರಂ ವೇದ ಅನುಭವಿಸಿದೆ.

  ಆದರೆ ಮೊದಲ ದಿನ ಹತ್ತು ಕೋಟಿ ಕಲೆಕ್ಷನ್ ತೀರಾ ನಿರಾಸೆ ಮೂಡಿಸುವ ಕಲೆಕ್ಷನ್ ಏನೂ ಅಲ್ಲ. ಈ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ಅಲ್ಲದೆ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಸಹ ಕೇಳಲು ಸಿಕ್ಕಿವೆಯಾದ್ದರಿಂದ ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

  'ವಿಕ್ರಂ-ವೇದ' ಸಿನಿಮಾವು ತಮಿಳಿನ ಇದೇ ಹೆಸರಿನ ಸಿನಿಮಾದ ರೀಮೇಕ್ ಆಗಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್ ರೋಷನ್ ನಟಿಸಿದ್ದಾರೆ. ಆರ್ ಮಾಧವನ್ ನಟಿಸಿದ್ದ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಮೂಲ ಸಿನಿಮಾವನ್ನು ನಿರ್ದೇಶಿಸಿದ್ದ ಪುಷ್ಕರ್-ಗಾಯತ್ರಿ ಅವರುಗಳೇ ಹಿಂದಿ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಮೂಲ ಸಿನಿಮಾಕ್ಕೂ ಹಿಂದಿ ಸಿನಿಮಾಕ್ಕೂ ಕೆಲವು ಅಂಶಗಳನ್ನು ಬದಲಾವಣೆ ಮಾಡಿಕೊಂಡಿದ್ದಾರೆ.

  'ವಿಕ್ರಂ ವೇದ' ಜೊತೆಗೇ ಬಿಡುಗಡೆ ಆದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಮೊದಲ ದಿನ ವಿಶ್ವದಾದ್ಯಂತ ಅತಿ ಹೆಚ್ಚು ಹಣ ಗಳಿಸಿದ ತಮಿಳು ಸಿನಿಮಾ ಎಂಬ ಖ್ಯಾತಿಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾ ಪಾತ್ರವಾಗಿದೆ.

  English summary
  Vikram Vedha Hindi movie first day box office collections. Hritik-Saif Ali Khan starer movie collected 10-12 crore on first day of its release.
  Saturday, October 1, 2022, 11:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X