ಆಕ್ಟಿಂಗ್ ಹುಚ್ಚಿಗೆ 35 ಲಕ್ಷದ ಕೆಲಸ ಬಿಟ್ಟ ನಟ ; ಪಾತಾಳಕ್ಕೆ ಕುಸಿದಾಗ ಕೈ ಹಿಡಿದ ಅರ್ಧಾಂಗಿ..!

ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ, ಆದರೆ ಸೆಲೆಬ್ರೆಟಿಗಳು ಸದ್ಯಕ್ಕೆ ಪಡೆಯುತ್ತಿರುವ ಸಂಭಾವನೆಯ ಕುರಿತು ಮಾತನಾಡದಿದ್ದರೂ, ತಾವು ಪಡೆದಿದ್ದ ಮೊದಲ ಸಂಭಾವನೆ ಬಗ್ಗೆ ಅಥವಾ ಆರಂಭದಲ್ಲಿ ತಮಗಾದ ಅವಮಾನ ಅಥವಾ ಬಂದಿದ್ದ ಸುವರ್ಣ ಅವಕಾಶಗಳ ಬಗ್ಗೆ ಕುತೂಹಲಕಾರಿ ಸಂಗತಿಯನ್ನ ಒಂದಿಲ್ಲೊಂದು ಸಂದರ್ಭಗಳಲ್ಲಿ ಬಹಿರಂಗಗೊಳಿಸಿರುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ವಿಕ್ರಾಂತ್ ಮೆಸ್ಸಿ.

ಹೌದು. 12th ಫೇಲ್ ಚಿತ್ರದ ಮೂಲಕ ಜನ ಮನ ಗೆದ್ದವರು ವಿಕ್ರಾಂತ್ ಮೆಸ್ಸಿ. ಸದ್ಯಕ್ಕೆ ಭಾರತದೆಲ್ಲೆಡೆ ತನ್ನ ಹೆಸರಿನ ಬಾವುಟವನ್ನ ಹಾರಿಸಿರುವ ವಿಕ್ರಾಂತ್ ಮೆಸ್ಸಿ, ತಮ್ಮ ಸಂಭಾವನೆಯ ಗುಟ್ಟನ್ನ ರಟ್ಟು ಮಾಡಿದ್ದಾರೆ. ಆ ದಿನಗಳಲ್ಲಿ ಅನುಭವಿಸಿದ್ದ ವೇದನೆ, ಯಾತನೆಯನ್ನ ಹೊರ ಹಾಕಿದ್ದಾರೆ.

Vikrant Massey reveals he left Rs 35 lakh per month TV contract

ನಿಮಗೆ ಗೊತ್ತಿರಲಿ, ವಿಕ್ರಾಂತ್ ಮೆಸ್ಸಿ ಏಕಾಏಕಿ ಸ್ಟಾರ್ ಆದವರಲ್ಲ. ಬೆಳ್ಳಿ ತೆರೆಯತ್ತ ಮುಖ ಮಾಡುವ ಮುನ್ನ, ಕಿರುತೆರೆಯಲ್ಲಿ ಬೆವರನ್ನ ಸುರಿಸಿದವರು ವಿಕ್ರಾಂತ್ ಮೆಸ್ಸಿ. ವೀರ್', 'ಬಾಲಿಕಾ ವಧು', 'ಕಬೂಲ್ ಹೇ', ಯೇ ಹೈ ಆಶಿಕಿ, ಹೀಗೆ ಒಂದಾದ ಮೇಲೊಂದು ಧಾರಾವಾಹಿಗಳಿಗೆ ಬಣ್ಣ ಹಚ್ತಾನೇ ಬದುಕು ಕಟ್ಟಿಕೊಂಡ ವಿಕ್ರಾಂತ್ ಮೆಸ್ಸಿ ಗೆ ಕಿರುತೆರೆ ತೊರೆಯದಂತೆ ಆಮಿಷ ಒಡ್ಡಲಾಗಿತ್ತು. ಕಿರುತೆರಯಲ್ಲಿಯೇ ತಿಂಗ್ಳಿಗೆ 35 ಲಕ್ಷ ದುಡಿಯುವ ಸುವರ್ಣ ಅವಕಾಶ ಕೂಡ ವಿಕ್ರಾಂತ್ ಮೆಸ್ಸಿಗೆ ಇತ್ತು.

ಆದರೆ, ಅದಾಗಲೇ ಬದುಕು ನಡೆಸಲು ಒಂದಷ್ಟು ಹಣವನ್ನ ಸಂಪಾದಿಸಿದ್ದ ವಿಕ್ರಾಂತ್ ಮೆಸ್ಸಿ, ಬಂದಿದ್ದ ಈ ಅವಕಾಶವನ್ನ ಎಡಗಾಲಿನಲ್ಲಿ ಒದ್ದರು. ಯಾಕೆಂದರೆ ವಿಕ್ರಾಂತ್ ಮೆಸ್ಸಿ ಕನಸು ದೊಡ್ಡದಿತ್ತು. ಬೆಳ್ಳಿ ತೆರೆ ಆಕರ್ಷಿಸುತ್ತಿತ್ತು. ಚಿತ್ರದ ನಾಯಕನಾಗಬೇಕೆಂದು ಮನಸು ಹಾತೊರೆಯುತ್ತಿತ್ತು.

Vikrant Massey reveals he left Rs 35 lakh per month TV contract

ಈ ಕಾರಣಕ್ಕೆ ಸೀರಿಯಲ್ ಪ್ರಪಂಚಕ್ಕೆ ಸೀರಿಯಸ್ಸಾಗಿ ಗುಡ್ ಬೈ ಹೇಳಿದ ವಿಕ್ರಾಂತ್ ಮೆಸ್ಸಿ, ಕನಸೆಂಬ ಕುದುರೆಯ ಬೆನ್ನತ್ತಿ ಅವಕಾಶಕ್ಕೆ ಅಲೆದಾಡತೊಡಗಿದರು. ವಿಕ್ರಾಂತ್ ಮೆಸ್ಸಿಯ ಈ ಅಲೆಮಾರಿ ಜೀವನದಿಂದ, ಅಲ್ಲಿಯವರೆಗೆ ಕೂಡಿಟ್ಟಿದ್ದ ಹಣವೆಲ್ಲ ಖಾಲಿಯಾಯಿತು. ದಿಕ್ಕು ತೋಚದಂತೆ ಆಯಿತು.

ಮುಂದೇನು..? ಎಂದು ವಿಕ್ರಾಂತ್ ಮೆಸ್ಸಿ ತಲೆ ಮೇಲೆ ಕೈ ಹೊತ್ತು ಕುಳಿತಾಗ್ಲೇ ವಿಕ್ರಾಂತ್ ಮೆಸ್ಸಿಯನ್ನ ಅವರ ಪತ್ನಿ ಶೀತಲ್ ಮೇಲಕ್ಕೆತಿದರು. ನಿರಾಸೆಯಲ್ಲಿದ್ದಾಗ ಕೈ ಹಿಡಿದು ಧೈರ್ಯ ತುಂಬಿದರು. ಆಡಿಷನ್ ಗೆ ತೆರಳಲು ವಿಕ್ರಾಂತ್ ಮೆಸ್ಸಿ ಗೆ ಪತ್ನಿ ಶೀತಲ್ ಹಣವನ್ನೂ ಕೊಟ್ಟರು.

Vikrant Massey reveals he left Rs 35 lakh per month TV contract

ತನ್ನ ಬದುಕಿನ ಈ ಕಥೆ ಹಾಗೂ ವ್ಯಥೆಯನ್ನ ವಿಕ್ರಾಂತ್ ಮೆಸ್ಸಿ, ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆ ದಿನಗಳನ್ನ ನೆನೆದು ಭಾವುಕರಾಗಿದ್ದಾರೆ. ಇವತ್ತು 12th ಫೇಲ್ ಚಿತ್ರದ ನಂತರ ವಿಕ್ರಾಂತ್ ಮೆಸ್ಸಿ ಹೆಸರು, ಪ್ರತಿಯೊಬ್ಬ ಸಿನಿಮಾ ಪ್ರೇಮಿಗಳ ಬಾಯಲ್ಲಿ ನಲಿದಾಡುತ್ತಿದೆ.

ಆರಂಭದಲ್ಲಿ ಚಿತ್ರವೊಂದಕ್ಕೆ 75 ಲಕ್ಷದಿಂದ 1 ಕೋಟಿ ರೂಪಾಯಿ ಪಡೆಯುತ್ತಿದ್ದ ವಿಕ್ರಾಂತ್ ಮೆಸ್ಸಿ ಇಂದು 12th ಫೇಲ್ ಚಿತ್ರದ ನಂತರ 1.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಮಾತು ಇದೆ. ಇನ್ನೂ ಚಿತ್ರವನ್ನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದೇ, ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ ವಿಕ್ರಾಂತ್ ಮೆಸ್ಸಿಗೆ 1.5 ಕೋಟಿ ರೂಪಾಯಿ ಸಂಭಾವನೆ ಜೊತೆ ಹೆಚ್ಚುವರಿಯಾಗಿ ಇನ್ನೂ 1.5 ಕೋಟಿ ಕೊಡಬೇಕು ಎಂಬ ಮಾತು ಮುಂಬೈನಲ್ಲಿ ಸದ್ಯಕ್ಕೆ ಗುಲ್ಲಾಗಿದೆ

ಒಟ್ಟಿನಲ್ಲಿ ಸಿನಿಮಾವನ್ನು ಉಸಿರಾಗಿಸಿಕೊಂಡು, ಎಂಥದ್ದೇ ಅಡೆತಡೆ ಬಂದರೂ ಬಿಡದೆ ಪ್ರಯತ್ನಿಸುತ್ತಾ ಸಿನಿಮಾ ಬಿಟ್ಟು ಬೇರೇನೂ ಮಾಡಲಾರೆ ಅಂತಾ ಹೋರಾಟ ನಡೆಸಿದರೆ, ಪಟ್ಟ ಪರಿಶ್ರಮಕ್ಕೆ, ಅನುಭವಿಸಿದ ಯಾತನೆಗಳಿಗೆ ಒಂದಲ್ಲೊಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತೆ ಅನ್ನುವುದಕ್ಕೆ ವಿಕ್ರಾಂತ್ ಮೆಸ್ಸಿ ಅತ್ಯುತ್ತಮ ಉದಾಹರಣೆ.

More from Filmibeat

English summary
Vikrant Massey , 12th Fail Actor Reveals He Quit TV When He Had ₹ 35 Lakh Per Month Contract In Hand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X