India
  For Quick Alerts
  ALLOW NOTIFICATIONS  
  For Daily Alerts

  ಪ್ಯಾನ್ ಇಂಡಿಯಾ ಸಿನಿಮಾ ಬಂದಿದ್ದಕ್ಕೆ ನಾವು ಈ ಸಿನಿಮಾ ಮಾಡಿಲ್ಲ: ಮುಂಬೈನಲ್ಲಿ 'ವಿಕ್ರಾಂತ್ ರೋಣ' ರಣ ಕಹಳೆ

  |

  ನಿನ್ನೆ( ಜೂನ್ 22) ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾ ಟ್ರೈಲರ್ ಅನ್ನು ಕನ್ನಡ ಮೀಡಿಯಾಗಳಿಗೆ ತೋರಿಸಿದ್ದರು. ಈ ವೇಳೆ ಕನ್ನಡ ಸ್ಟಾರ್ ನಟರು ಕಿಚ್ಚ ಸುದೀಪ್‌ಗೆ ಜೊತೆಯಾಗಿದ್ದರು. ರವಿಚಂದ್ರನ್, ಶಿವಣ್ಣ, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್ ಸೇರಿದಂತೆ ಹಲವು ಮಂದಿ ಸ್ಟಾರ್ ನಟರು ಈ ಸ್ಪೆಷಲ್ ಇವೆಂಟ್‌ನಲ್ಲಿದ್ದರು. ಕರ್ನಾಟಕದ ಬಳಿಕ ಈಗ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ.

  ಮುಂಬೈನ ಜೂಹುವಿನಲ್ಲಿ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಭಾಗಿಯಾಗಿದ್ದಾರೆ. 'ಕೆಜಿಎಫ್ 2', '777 ಚಾರ್ಲಿ' ಬಳಿಕ ಈಗ 'ವಿಕ್ರಾಂತ್ ರೋಣ' ಸಿನಿಮಾ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಸಿನಿಮಾ ಪ್ರಚಾರಕ್ಕೆ ಕಿಚ್ಚ ಸುದೀಪ್ ಮುಂಬೈಗೆ ತೆರಳಿದ್ದಾರೆ.

  'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್ ಮಾಡೋರು ಯಾರು? ಇಂಗ್ಲಿಷ್ ಟ್ರೈಲರ್‌ ಬಗ್ಗೆನೇ ಡೌಟು! 'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್ ಮಾಡೋರು ಯಾರು? ಇಂಗ್ಲಿಷ್ ಟ್ರೈಲರ್‌ ಬಗ್ಗೆನೇ ಡೌಟು!

  ಜಾಕ್ ಮಂಜು ನಿರ್ಮಿಸುತ್ತಿರುವ ಈ ಸಿನಿಮಾ 6ಕ್ಕೂ ಅಧಿಕ ಭಾಷೆಯಲ್ಲಿ ರಿಲೀಸ್ ಆಗಲಿದೆ. ಪ್ರಮುಖವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಮುಂಬೈನಲ್ಲಿ 'ವಿಕ್ರಾಂತ್ ರೋಣ' ರಿಲೀಸ್‌ಗೂ ಮುನ್ನ ಬಾಲಿವುಡ್ ಮಾಧ್ಯಮಗಳನ್ನು ಭೇಟಿ ಮಾಡಿದ್ದು, 'ವಿಕ್ರಾಂತ್ ರೋಣ' ಬಿಗ್ ಸಿನಿಮಾ ಅಂತ ಹೇಳಿದ್ದಾರೆ.

  ರೀ ಅನುಪ್ ಭಂಡಾರಿ, ಸುದೀಪ್ ನನ್ನ ಮಗರೀ.. ಅವನಿಗ್ಯಾಕೆ ಭಯ?- ರವಿಚಂದ್ರನ್ ರೀ ಅನುಪ್ ಭಂಡಾರಿ, ಸುದೀಪ್ ನನ್ನ ಮಗರೀ.. ಅವನಿಗ್ಯಾಕೆ ಭಯ?- ರವಿಚಂದ್ರನ್

  ಮುಂಬೈನಲ್ಲಿ ಕಿಚ್ಚ ರಣ ಕಹಳೆ

  ಮುಂಬೈನಲ್ಲಿ ಕಿಚ್ಚ ರಣ ಕಹಳೆ

  ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ಕಾನ್ಫಿಡೆಂಟ್ ಆಗಿದ್ದಾರೆ. ಮುಂಬೈ ಮಾಧ್ಯಮಗಳ ಮುಂದೆ ಸುದೀಪ್ ರಣಕಹಳೆ ಊದಿದ್ದಾರೆ. ಗ್ರ್ಯಾಂಡ್ ಟ್ರೈಲರ್ ಲಾಂಚ್‌ನಲ್ಲಿ ಸುದೀಪ್ 'ವಿಕ್ರಾಂತ್ ರೋಣ' ಬಿಗ್ ಸಿನಿಮಾ ಅಂತ ಘೋಷಣೆ ಮಾಡಿದ್ದಾರೆ. "ನಾವು ನಮ್ಮ ಸಿನಿಮಾಗಳಿಗೆ ಗೌರವ ಕೊಡದೆ ಇದ್ದರೆ ಹೇಗೆ? ನಾನು ಬದುಕನ್ನು ದೊಡ್ಡದಾಗಿ ನೋಡದೇ ಇದ್ದರೆ ಹೇಗೆ? 'ವಿಕ್ರಾಂತ್ ರೋಣ' ಕೂಡ ಬಿಗ್ ಸಿನಿಮಾ. ನಾವು ದೊಡ್ಡದಾಗಿಯೇ ಶುರು ಮಾಡಿದ್ದೆವು. ನಮ್ಮ ದೊಡ್ಡ ಐಡಿಯಾ ಇತ್ತು. ಹಾಗೆಯೇ ನಾವು ಸಿನಿಮಾ ಮಾಡಿದ್ದೇವೆ. ಹೀಗಾಗಿ ದೊಡ್ಡ ಫಲಿತಾಂಶವನ್ನೇ ಎದುರು ನೋಡುತ್ತಿದ್ದೇವೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

  ಪ್ಯಾನ್ ಇಂಡಿಯಾ ಸಿನಿಮಾ ಯಾಕೆ?

  ಪ್ಯಾನ್ ಇಂಡಿಯಾ ಸಿನಿಮಾ ಯಾಕೆ?

  'ವಿಕ್ರಾಂತ್ ರೋಣ' ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಅಂತ ಮಾಡಿದ್ದು ಏಕೆ? ಅನ್ನುವ ಪ್ರಶ್ನೆ ಕೂಡ ಎದುರಾಗಿತ್ತು. ಅದಕ್ಕೂ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. "ಕೆಲವು ಸಿನಿಮಾಗಳು ಪ್ಯಾನ್ ಇಂಡಿಯಾ ಆಯ್ತು ಅಂತ ನಾವು ಈ ಸಿನಿಮಾ ಮಾಡಲು ನಿರ್ಧಾರ ಮಾಡಿದ್ದಲ್ಲ. ನಾವು ಮೊದಲೇ ಹೀಗೆ ಬರಬೇಕು ಅಂತ ಆಲೋಚನೆ ಮಾಡಿದ್ದೆವು. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ." ಎಂದಿದ್ದಾರೆ ಸುದೀಪ್.

  ಎಲ್ಲಾ ಸಿನಿಮಾಗಳೂ ಪ್ಯಾನ್ ಇಂಡಿಯಾ ಆಗ್ಬಹುದು!

  ಎಲ್ಲಾ ಸಿನಿಮಾಗಳೂ ಪ್ಯಾನ್ ಇಂಡಿಯಾ ಆಗ್ಬಹುದು!

  ತೆಲುಗು ಸಿನಿಮಾಗಳ ಗೆಲವು ಹಾಗೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿರುವ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೂ ಕಿಚ್ಚನ ತಿರುಗೇಟು ನೀಡಿದ್ದಾರೆ. " ಪ್ರತಿಯೊಂದು ರಾಜ್ಯದಲ್ಲಿಯೂ ವ್ಯಾಪಾರೀಕರಣ ಅನ್ನೋದು ಇದೆ. ನಾವು ಎಲ್ಲಾ ಒಟಿಟಿ ವೇದಿಕೆಗಳನ್ನು ನೋಡುತ್ತಿದ್ದೇವೆ. ಒಂದು ವೇಳೆ ಕೋವಿಡ್ ಬಾರದೆ ಹೋದರೆ, ಕೊರಿಯಾದ ಶೋಗಳು ಗೊತ್ತಿರುತ್ತಿರುತ್ತಿರಲಿಲ್ಲ. ಬೇರೆ ಚಿತ್ರರಂಗಗಳು ಒಳ್ಳೆ ಸಿನಿಮಾ ಮಾಡುತ್ತಿವೆ ಎನ್ನುವುದು ದಿಢೀರನೇ ಅರ್ಥ ಆಯಿತು. ಕನ್ನಡ ಚಿತ್ರರಂಗ ಬಹಳ ದಿನಗಳಿಂದ ಉಳಿದುಕೊಂಡಿದೆ. ಕೇವಲ ದಕ್ಷಿಣ ಭಾರತದ ಸಿನಿಮಾ ಅಂತಷ್ಟೇ ಅಲ್ಲ. ಎಲ್ಲಾ ಸಿನಿಮಾ ಪ್ಯಾನ್ ಇಂಡಿಯಾ ಆಗುವ ಅರ್ಹತೆ ಇದೆ." ಎಂದಿದ್ದಾರೆ ಸುದೀಪ್.

  ಕನ್ನಡ ಚಿತ್ರರಂಗದ ಬಗ್ಗೆ ಜಾಕ್ ಹೇಳಿದ್ದೇನು?

  ಕನ್ನಡ ಚಿತ್ರರಂಗದ ಬಗ್ಗೆ ಜಾಕ್ ಹೇಳಿದ್ದೇನು?

  ಬಾಲಿವುಡ್‌ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗದ ಬಗ್ಗೆ ನಟಿ ಖುಷಿ ವ್ಯಕ್ತಪಡಿಸಿದ್ದಾರೆ. " ರಾರಾ ರಕ್ಕಮ್ಮ ಹಾಡನ್ನು ಶೂಟ್ ಮಾಡಿದ ಅನುಭವ ಅದ್ಭುತವಾಗಿತ್ತು. ಸೆಟ್‌ನಲ್ಲಿ ಸೆಲೆಬ್ರೆಷನ್ ಇತ್ತು. ಕನ್ನಡ ಚಿತ್ರರಂಗಕ್ಕೆ ಅದ್ಭುತ ಎಂಟ್ರಿ ಆಗಿದೆ ಎಂದು ಹೇಳಿದ್ದಾರೆ.

  English summary
  Vikrant Rona Trailer Launch Event in Mumbai. Sudeep, Salman Khan, Jacqueline Fernandez Will be attending the event, know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X