twitter
    For Quick Alerts
    ALLOW NOTIFICATIONS  
    For Daily Alerts

    ಸುದ್ದಿವಾಹಿನಿಗಳ ವಿರುದ್ಧ ಗೆದ್ದ ರಕುಲ್ ಪ್ರೀತ್ ಸಿಂಗ್: ನಟಿ ಬಳಿ ಕ್ಷಮೆ ಕೇಳಿ ಎಂದ ಎನ್‌ಬಿಎಸ್ಎ

    |

    ಬಾಲಿವುಡ್‌ ಡ್ರಗ್ಸ್‌ ಪ್ರಕರಣಗಳ ತನಿಖೆ ಆರಂಭವಾದಾಗ ನಟಿ ರಕುಲ್ ಪ್ರೀತ್ ಸಿಂಗ್‌ ಹೆಸರು ಸಹ ಅದರಲ್ಲಿ ಕೇಳಿ ಬಂದಿತ್ತು. ನಟಿಗೆ ನೊಟೀಸ್ ನೀಡಿದ್ದ ಎನ್‌ಸಿಬಿ ವಿಚಾರಣೆಯನ್ನು ಸಹ ನಡೆಸಿತ್ತು.

    ಆ ಸಂದರ್ಭದಲ್ಲಿ ರಕುಲ್ ವಿರುದ್ಧ ಸುದ್ದಿವಾಹಿನಿಗಳಲ್ಲಿ ಕೆಲವು ವರದಿಗಳು ಪ್ರಕಟವಾಗಿದ್ದವು. ಕೆಲವು ವರದಿಗಳಲ್ಲಿ ರಕುಲ್ ಅಪರಾಧಿ ಎಂಬಂತೆ ಬಿಂಬಿಸಲಾಗಿತ್ತು. ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ್ದ ಕೆಲವು ಮಾಧ್ಯಗಳ ವಿರುದ್ಧ ದೂರು ನೀಡಿದ್ದರು ರಾಕುಲ್ ಪ್ರೀತ್ ಸಿಂಗ್, ಈ ಪ್ರಕರಣದಲ್ಲಿ ರಕುಲ್‌ ಗೆ ಜಯವಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಕುಕ್ಕುತ್ತಿದೆ ರಕುಲ್ ಪ್ರೀತ್ ಬಿಕಿನಿ ಫೋಟೋಸಾಮಾಜಿಕ ಜಾಲತಾಣದಲ್ಲಿ ಕಣ್ಣು ಕುಕ್ಕುತ್ತಿದೆ ರಕುಲ್ ಪ್ರೀತ್ ಬಿಕಿನಿ ಫೋಟೋ

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ನಿಂದನಾತ್ಮಕ ಸುದ್ದಿಯನ್ನು ಪ್ರಕಟಿಸಿದ್ದಾರೆ ಎಂದು ರಕುಲ್ ಪ್ರೀತ್ ಸಿಂಗ್ ದೂರು ನೀಡಿದ್ದರು. ಇದರ ವಿಚಾರಣೆ ನಡೆಸಿದ , ಎನ್‌ಬಿಎಸ್‌ಎ (ಸುದ್ದಿ ಪ್ರಸಾರ ಮಾನದಂಡಗಳ ಪ್ರಾಧಿಕಾರ), ಮೂರು ಸುದ್ದಿವಾಹಿನಿಗಳ ವಿರುದ್ಧ ಶಿಸ್ತು ಕ್ರಮ ಪ್ರಕಟಿಸಿದೆ.

    ಮೂರು ಸುದ್ದಿವಾಹಿನಿಗಳಿಗೆ ತಪರಾಕಿ ಹಾಕಿದ ಎನ್‌ಬಿಎಸ್‌ಎ

    ಮೂರು ಸುದ್ದಿವಾಹಿನಿಗಳಿಗೆ ತಪರಾಕಿ ಹಾಕಿದ ಎನ್‌ಬಿಎಸ್‌ಎ

    ಝೀ ಚಾನೆಲ್‌ನ ಮೂರು ಸುದ್ದಿ ವಾಹಿನಿಗಳು ರಕುಲ್ ಪ್ರೀತ್ ಸಿಂಗ್‌ಗೆ ಕ್ಷಮಾಪಣೆ ಕೇಳಬೇಕು, ಕ್ಷಮೆ ವರದಿಯನ್ನು ಡಿಸೆಂಬರ್ 17 ರಂದು ಟಿವಿಯಲ್ಲಿ ಪ್ರದರ್ಶಿಸಬೇಕು ಎಂದು ಎನ್‌ಬಿಎಸ್‌ಎ ಆದೇಶ ನೀಡಿದೆ.

    ರಕುಲ್ ಬಗೆಗಿನ ಸುದ್ದಿ ಲಿಂಕ್‌ಗಳನ್ನು ಡಿಲೀಟ್ ಮಾಡಲು ಆದೇಶ

    ರಕುಲ್ ಬಗೆಗಿನ ಸುದ್ದಿ ಲಿಂಕ್‌ಗಳನ್ನು ಡಿಲೀಟ್ ಮಾಡಲು ಆದೇಶ

    ಅಷ್ಟೇ ಅಲ್ಲದೆ, ಟೈಮ್ಸ್‌ ನೌ, ಇಂಡಿಯಾ ಟಿವಿ, ಆಜ್ ತಕ್, ಇಂಡಿಯಾ ಟುಡೆ, ಟೈಮ್ಸ್ ನೇಷನ್, ಎಬಿಪಿ ನ್ಯೂಸ್‌ಗಳು ರಕುಲ್ ವಿರುದ್ಧ ಪ್ರಕಟಿಸಿರುವ ನಿಂದನಾತ್ಮಕ ಅಥವಾ ಸುಳ್ಳು ಸುದ್ದಿಗಳನ್ನು ತಮ್ಮ ವೆಬ್‌ಸೈಟ್‌ನಿಂದ ಡಿಲೀಟ್ ಮಾಡಬೇಕು, ಡಿಲೀಟ್ ಮಾಡಿದ ನಂತರ ಪತ್ರ ಮುಖೇನ ಅದನ್ನು ದೃಢೀಕರಿಸಬೇಕು ಎಂದಿದೆ ಎನ್‌ಬಿಎಸ್‌ಎ.

    ರಕುಲ್ ಬೇಡ ಎಂದ ಆ ಚಿತ್ರ ರಶ್ಮಿಕಾ ಮಾಡಿದ್ರು: ಆಮೇಲೆ ಸ್ಟಾರ್ ಆದ್ರು! ಯಾವುದು ಚಿತ್ರ?ರಕುಲ್ ಬೇಡ ಎಂದ ಆ ಚಿತ್ರ ರಶ್ಮಿಕಾ ಮಾಡಿದ್ರು: ಆಮೇಲೆ ಸ್ಟಾರ್ ಆದ್ರು! ಯಾವುದು ಚಿತ್ರ?

    ತಪ್ಪೊಪ್ಪಿಗೆ ಪತ್ರ ಪ್ರಸಾರ ಮಾಡಲು ಸೂಚನೆ

    ತಪ್ಪೊಪ್ಪಿಗೆ ಪತ್ರ ಪ್ರಸಾರ ಮಾಡಲು ಸೂಚನೆ

    ಎನ್‌ಬಿಎಸ್‌ಎ ಸ್ವತಃ ಹೇಳಿಕೆಯೊಂದನ್ನು ಝೀ ಚಾನೆಲ್‌ಗೆ ನೀಡಿದ್ದು, ಅದೇ ತಪ್ಪೊಪ್ಪಿಗೆ ಹೇಳಿಕೆಯನ್ನು ಡಿಸೆಂಬರ್ 17 ರಂದು ಟಿವಿಯನ್ನು ಪ್ರಸಾರ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ.

    Recommended Video

    ಕಳೆದು ಹೋದದನ್ನ ಪುನಃ ಪಡೆದುಕೊಂಡ ಮೇಘಾ ಶೆಟ್ಟಿ | Filmibeat Kannada
    ವಿಚಾರಣೆಗೆ ಹಾಜರಾಗಿದ್ದ ರಕುಲ್ ಪ್ರೀತ್ ಸಿಂಗ್

    ವಿಚಾರಣೆಗೆ ಹಾಜರಾಗಿದ್ದ ರಕುಲ್ ಪ್ರೀತ್ ಸಿಂಗ್

    ಸುಶಾಂತ್ ಸಿಂಗ್ ಸಾವಿನ ನಂತರ ಹೊರಬಂದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಕುಲ್ ಪ್ರೀತ್ ಸಿಂಗ್ ಅನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ರಾಕುಲ್ ಜೊತೆಗೆ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆಯನ್ನೂ ಸಹ ವಿಚಾರಣೆ ಮಾಡಲಾಗಿತ್ತು.

    English summary
    Vilifying news about actress Rakul Preet Singh, NBSA orders to air an apology and delete the news links related to Rakul Preeth Singh.
    Tuesday, December 15, 2020, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X