"ಸಲ್ಮಾನ್ ಖಾನ್ ಹಂದಿ ರೀತಿ ತಿನ್ನುತ್ತಾನೆ": ವಿಂದು ದಾರಾ ಸಿಂಗ್ ಕಾಮೆಂಟ್ಸ್ ವೈರಲ್

ನಟ ಸಲ್ಮಾನ್ ಖಾನ್ ಫಿಟ್ನೆಸ್ ಬಗ್ಗೆ ಬಿಡಿಸಿ ಹೇಳುವುದೇ ಬೇಕಿಲ್ಲ. ಬಾಲಿವುಡ್‌ನಲ್ಲಿ ಸಿಕ್ಸ್‌ಪ್ಯಾಕ್ ಟ್ರೆಂಡ್ ಹುಟ್ಟುಹಾಕಿದ್ದೇ ಭಾಯ್ಜಾನ್. ವಯಸ್ಸು 50 ದಾಟಿದ್ರು ಸಲ್ಲು ಇವತ್ತಿಗೂ ವರ್ಕೌಟ್‌ ಮಾಡುವುದು ಮರೆಯುವುದಿಲ್ಲ. ಹೊಸ ನಟರಿಗೂ ಫಿಟ್ನೆಸ್ ವಿಚಾರದಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸ್ಫೂರ್ತಿಯಾಗಿದ್ದಾರೆ.

ಇತ್ತೀಚೆಗೆ ಸಲ್ಲು ಸಿನಿಮಾಗಳ ಸಕ್ಸಸ್ ರೇಟ್ ಕಮ್ಮಿ ಆಗಿದೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ಮಸಲ್‌ಮ್ಯಾನ್ ಸೋತು ಗೆದ್ದು ಬಂದಿದ್ದು ಇದೆ. ಇನ್ನು ಸಲ್ಲು ತೆರೆಮೇಲೆ ಶರ್ಟ್ ಬಿಚ್ಚಿ ದರ್ಶನ ಕೊಟ್ಟರೆ ಸಿನಿಮಾ ಸಕ್ಸಸ್ ಎನ್ನುವ ಮಾತಿದೆ. ಅಷ್ಟರಮಟ್ಟಿಗೆ ಬಾಲಿವುಡ್‌ ಬಾಕ್ಸಾಫೀಸ್ ಸುಲ್ತಾನ್ ಹುರಿಗಟ್ಟಿದ ದೇಹ ಪ್ರದರ್ಶನಕ್ಕೆ ಹೆಸರಾಗಿದ್ದಾರೆ.

Vindu Dara Singh interesting comments on friend Salman khan s food habit and workout

ಸಲ್ಮಾನ್ ಖಾನ್ ವರ್ಕೌಟ್‌, ಅದಕ್ಕಾಗಿ ಆತನ ಡೆಡಿಕೇಷನ್ ಹೇಗಿರುತ್ತದೆ ಎನ್ನುವುದ ಬಗ್ಗೆ ಆತನ ಆಪ್ತ ಸ್ನೇಹಿತ ನಟ ವಿಂದು ದಾರಾ ಸಿಂಗ್ ಮಾತನಾಡಿದ್ದಾರೆ. ಸಿದ್ದಾರ್ಥ್ ಕಣ್ಣನ್ ಯೂಟ್ಯೂಬ್ ಸಂದರ್ಶನದಲ್ಲಿ ಸಲ್ಲು ಕುರಿತು ವಿಂದು ದಾರಾ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಸಲ್ಲು ಫುಡ್ಡಿ, ಬಹಳ ತಿನ್ನುತ್ತಾರಂತೆ. ಆದರೂ ಫಿಟ್ನೆಸ್ ಕಾಯ್ದುಕೊಂಡಿರುವುದು, ಸಿಕ್ಸ್‌ಪ್ಯಾಕ್ ಮಾಡಿರುವುದು ಹೇಗೆ ಎನ್ನುವ ಬಗ್ಗೆ ಆಪ್ತಮಿತ್ರ ಮಾತನಾಡಿದ್ದಾರೆ.

ಅಂದಹಾಗೆ ಸಲ್ಲುಗೆ ಕಾಲೇಜು ಸ್ನೇಹಿತ ವಿಂದು ದಾರಾ ಸಿಂಗ್. ಚಿತ್ರರಂಗಕ್ಕೆ ಬರುವುದಕ್ಕೆ ಮೊದಲಿನಿಂದಲೂ ಆತನೊಟ್ಟಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. "ಸಲ್ಮಾನ್ ಖಾನ್ ನನ್ನನ್ನು ನೋಡಿ ವರ್ಕೌಟ್ ಮಾಡಲು ಪ್ರಾರಂಭಿಸಿದ. ನನಗಿಂತ ಹೆಚ್ಚು ಜಿಮ್‌ನಲ್ಲಿ ಕರಸತ್ತು ನಡೆಸುತ್ತಾನೆ. ಆತ ಹಂದಿಯಂತೆ ತಿನ್ನುವುದು ನಾಯಿಯಂತೆ ವ್ಯಾಯಾಮ ಮಾಡುವುದು ಆತನಿಗೆ ಅಭ್ಯಾಸವಾಗಿಬಿಟ್ಟಿದೆ." ಎಂದಿದ್ದಾರೆ.

"ಇಷ್ಟೊಂದು ತಿನ್ನುತ್ತೀಯಾ ಅದು ಎಲ್ಲಿ ಹೋಗುತ್ತೆ ಎಂದು ಕೇಳಿದರೆ ವ್ಯಾಯಾಮದ ಮೂಲಕ ಕರಗಿಸುತ್ತೇನೆ ಎನ್ನುತ್ತಾನೆ. ಒಟ್ನಲ್ಲಿ ಆತ ಗಂಟೆಗಟ್ಟಲೆ ವ್ಯಾಯಾಮ ಮಾಡುತ್ತಾನೆ. ಇನ್ನು ಆತನಿಗೆ ಒಳ್ಳೆ ಗುಣಗಳಿವೆ. ಆತ ಅಂದ್ರೆ ಬಹಳ ಇಷ್ಟ, ಯಾರದರೂ ಕಷ್ಟದಲ್ಲಿದ್ದರೆ ಹುಡುಕಿಕೊಂಡು ಹೋಗಿ ಸಹಾಯ ಮಾಡುತ್ತಾನೆ. ತಂದೆ ಕೊಡುವ ಪಾಕೆಟ್ ಮನಿಯನ್ನು ತಮ್ಮ ಬಳಿ ಕೆಲಸ ಮಾಡುವವರಿಗೆ ಕೊಟ್ಟುಬಿಡುತ್ತಿದ್ದ ಎಂದಿದ್ದಾರೆ.

Vindu Dara Singh interesting comments on friend Salman khan s food habit and workout

"ಸಲ್ಮಾನ್ ತಂದೆ (ಬಾಲಿವುಡ್ಚಿತ್ರಕಥೆಗಾರ ಸಲೀಂ ಖಾನ್) ಅವನಿಗೆ ಪ್ರತಿದಿನ ಪಾಕೆಟ್ ಮನಿ ನೀಡುತ್ತಿದ್ದರು. ಆ ಹಣವನ್ನು ಸಲ್ಮಾನ್ ತನ್ನ ಸಹಾಯಕ ನದೀಮ್‌ಗೆ ನೀಡುತ್ತಿದ್ದ. ಖರ್ಚಿಗೆಂದು ಸಲ್ಮಾನ್ ತಂದೆ ನೀಡುವ ಹೆಚ್ಚಿನ ಹಣ ಬಡವರಿಗೆ ದಾನ ಮಾಡುತ್ತಿದ್ದ. ಆತ ಈಗಲೂ ತಿಂಗಳಿಗೆ ರೂ. 25 ರಿಂದ 30 ಲಕ್ಷ ದಾನ ಮಾಡುತ್ತಾನೆ. ಈಗ ಸಹ ತಂದೆ ಕೊಡುವ ಪಾಕೆಟ್ ಮನಿ ಇದೇ ರೀತಿ ಕೊಟ್ಟುಬಿಡುತ್ತಾನೆ. ಆದ್ದರಿಂದಲೇ ನನಗೆ ಸಲ್ಮಾನ್ ಎಂದರೆ ತುಂಬಾ ಇಷ್ಟ" ಎಂದು ವಿಂದು ಧಾರಾ ಹೇಳಿದ್ದಾರೆ.

ಸಲ್ಮಾನ್ ಖಾನ್‌ಗೆ ಬಡವರ ಬಗ್ಗೆ ತುಂಬಾ ಕರುಣೆ ಇದೆ ಎಂದು ವಿಂದು ದಾರಾ ಸಿಂಗ್ ಬಹಿರಂಗಪಡಿಸಿದ್ದಾರೆ. ಸಹಾಯಕ್ಕಾಗಿ ಇಂದಿಗೂ ಅನೇಕರು ಆತನ ನಿವಾಸಕ್ಕೆ ಬರುತ್ತಿದ್ದು, ಖಂಡಿತ ಅವರಿಗೆ ಕೈಲಾದ ಸಹಾಯ ಮಾಡುತ್ತಾನೆ. ಸಲ್ಮಾನ್ ಖಾನ್ ಅವರಂತಹವರನ್ನು ನನ್ನ ಸ್ನೇಹಿತ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ" ಎಂದು ವಿಂದು ದಾರಾ ಸಿಂಗ್ ವಿವರಿಸಿದ್ದಾರೆ. ಸದ್ಯ ಈ ಕಾಮೆಂಟ್ಸ್ ವೈರಲ್ ಆಗುತ್ತಿದೆ.

ಒಂದಷ್ಟು ಹಿಂದಿ ಹಾಗೂ ಪಂಜಾಬಿ ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ವಿಂದು ದಾರಾ ಸಿಂಗ್ ಕಾಣಿಸಿಕೊಂಡಿದ್ದಾರೆ. 90ರ ದಶಕದಲ್ಲಿ ಬಂದ 'ಜೈ ವೀರ್ ಹನುಮಾನ್' ಧಾರಾವಾಹಿಯಲ್ಲಿ ಹನುಮಂತ ಪಾತ್ರದಲ್ಲಿ ಗಮನ ಸೆಳೆದಿದ್ದರು. ಸಲ್ಲು ನಟನೆಯ 'ಮುಜ್‌ಸೆ ಶಾದಿ ಕರೋಗಿ' ಹಾಗೂ 'ಮೈನೆ ಪ್ಯಾರ್‌ಕಿಯಾ' ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.

More from Filmibeat

English summary
Vindu Dara Singh on Salman khan's helping nature and fitness
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X