ಕಸದ ತೊಟ್ಟಿಯಲ್ಲಿ ಬಿಸಾಡಿದ ಹೆಣ್ಣು ಮಗುವನ್ನು ದತ್ತು ಪಡೆದ ನಿರ್ದೇಶಕ

ಬಾಲಿವುಡ್ ನ ಖ್ಯಾತ ನಿರ್ದೇಶಕ ವಿನೋದ್ ಕಪ್ರಿ ಇತ್ತೀಚಿಗೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಅಷ್ಟಕ್ಕೂ ಈ ನಿರ್ದೇಶಕರು ಈ ಮಗುವನ್ನು ದತ್ತು ಪಡೆಯಲು ಕಾರಣ ಆ ಮಗುವಿನ ಅಸಹಾಯಕತೆ ಹೌದು, ಈ ಮುದ್ದಾದ ಹೆಣ್ಣು ಮಗು ಅಸಹಾಯಕವಾಗಿ ಕಸದ ತೊಟ್ಟಿಯಲ್ಲಿ ಅಳುತ್ತಾ ಮಲಗಿತ್ತು. ಯಾರೋ ಹೆತ್ತವರು ಈ ಹೆಣ್ಣು ಮಗುವನ್ನು ಕಸದ ತೊಟ್ಟಿಗೆ ಬಿಸಾಡಿ ಕೈತೊಳೆದುಕೊಂಡಿದ್ದಾರೆ.

ಹೆಣ್ಣು ಮಗು ಎನ್ನುವ ಕಾರಣಕ್ಕೆ ತೊಟ್ಟಿಗೆ ಎಸೆದಿದ್ದ ಈ ಮಗು ಬಾಲಿವುಡ್ ನಿರ್ದೇಶಕ ವಿನೋದ್ ಅವರ ಕಣ್ಣಿಗೆ ಬಿದ್ದಿದೆ. ಈ ಘಟನೆ ನಡೆದಿದ್ದು ರಾಜಸ್ಥಾನದಲ್ಲಿ. ಈ ಮಗುವಿನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವೀಡಿಯೋ ನೋಡಿದ ವಿನೋದ್ ಆಸ್ಪತ್ರೆಗೆ ದಾವಿಸಿ ಮಗುವನ್ನು ದತ್ತು ಪಡಿಸಿದ್ದಾರೆ.

ಸದ್ಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ದತ್ತು ಪಡೆಯುವ ಸಂದರ್ಭದಲ್ಲಿ ಮಗುವಿಗೆ ಉಸಿರಾಡಲು ಸಮಸ್ಯೆಯಾಗುತ್ತಿತ್ತಂತೆ ಆದ್ರೀಗ ಚೇತರಿಸಿ ಕೊಳ್ಳುತ್ತಿರುವುದಾಗಿ ವಿನೋದ್ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಈ ಮಗುವಿಗೆ 'ಪಿಹು' ಎಂದು ನಾಮಕರಣ ಮಾಡಿದ್ದಾರೆ.

Vinod Kapri has decided to adopt a girl child left abandoned in Rajasthan

'ಪಿಹು' ವಿನೋದ್ ನಿರ್ದೇಶನದ ಸಿನಿಮಾ. ಅವರ ಸಿನಿಮಾದ ಹೆಸರನ್ನೆ ಮುದ್ದು ಮಗುವಿಗೂ ಇಟ್ಟಿದ್ದಾರೆ. ಇನ್ನು "ನಾನು ಈ ಪುಟಾಣಿ ರಾಜಕುಮಾರಿಯ ಪ್ರೀತಿಯಲ್ಲಿ ಬಿದ್ದಿದ್ದೇನೆ" ಎಂದು ವಿನೋದ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮಗು ಸದ್ಯ 1.6 ಕೆಜಿ ತೂಕ ಇದೆಯಂತೆ. ಮಗು ಮನೆಗೆ ಬರುವವರೆಗೂ ಏನೂ ಹೇಳಲು ಸಾಧ್ಯವಿಲ್ಲ. ಈಗ ಚೇತರಿಸಿಕೊಳ್ಳುತ್ತಿದೆ ಎಂದು ವಿನೋದ್ ಹೇಳಿದ್ದಾರೆ. ವಿನೋದ್ ಸದ್ಯ '155 Hours' ಚಿತ್ರದಲ್ಲಿ ಬ್ಯುಜಿಯಾಗಿದ್ದಾರೆ. ಈ ಹಿಂದೆ 'ಪಿಹು' ಚಿತ್ರವನ್ನು ನಿರ್ದೇಶನ ಮಾಡಿದ್ದರು.

More from Filmibeat

English summary
Bollywood Filmmaker Vinod Kapri has decided to adopt a girl child left abandoned in Rajasthan. Vinod has named adapted child Pihu his film name.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X