ಮುಂಬೈನ ಬೀದಿಗಳಲ್ಲಿ ಸಮಂತಾಗೆ ಕಿರುಕುಳ ; ವಿಡಿಯೋ ವೈರಲ್..!

ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವೃತೆ ಈಗೀಗ ಕೆಲವರ ಅನುಭವಕ್ಕೆ ಬರುತ್ತಿದೆ.

ಇದಕ್ಕೆ ಸಮಂತಾಗೆ ಆದ ಸದ್ಯದ ಉದಾಹರಣೆ. ಹೌದು, ನಾಗಚೈತನ್ಯ ಅವರಿಂದ ದೂರವಾದ ನಂತರ ವ್ಯೆಯಕ್ತಿಕ ಜೀವನದಿಂದ ಸದಾ ಸುದ್ದಿಯಾಗುತ್ತಿರುವ ಸಮಂತಾ, ಸದ್ಯ .. ಮುಂಬೈನಲ್ಲಿ ಬಿಡಾರ ಹೂಡಿದ್ದಾರೆ. ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್‌ನಲ್ಲಿ ಬೆವರು ಕೂಡ ಸುರಿಸುತ್ತಿದ್ದಾರೆ.

viral-a-visibly-frustrated-samantha-ruth-prabhu-had-an-outburst-at-paparazzi-post-gym

ಹೀಗೆ ಜಿಮ್‌ಗೆ ಹೋದ ಸಮಂತಾ ಮೊನ್ನೆ ಕಸರತ್ತು ಮುಗಿಸಿಕೊಂಡು ಹೊರ ಬರುತ್ತಿದ್ದರು. ಈ ಸಮಯದಲ್ಲಿ ಅಲ್ಲಿದ್ದ ಪಾಪರಾಜಿಗಳು ಸಮಂತಾ ಅವರನ್ನು ಸುತ್ತುವರೆದಿದ್ದಾರೆ. ಇನ್ನು, ಸಾಮಾನ್ಯವಾಗಿ ಹೀಗೆ ಪಾಪರಾಜಿಗಳು ಸುತ್ತುವರೆದಾಗ ಕೆಲವರು ಕ್ಯಾಮರಾಗೆ ಫೋಸ್ ಕೊಡುತ್ತಾರೆ. ಆ ನಂತರ ಅಲ್ಲಿಂದ ಕಾಲ್ಕಿಳುತ್ತಾರೆ.

ಇನ್ನು, ಜನಸಾಮಾನ್ಯರಾದರೇನು.. ಸ್ಟಾರ್‌ಗಳಾದರೇನು.. ಮನಸ್ಥಿತಿ ದಿನವೂ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಕೆಲವರು ಆಗಾಗ ಈ ಪಾಪರಾಜಿಗಳ ವಿರುದ್ಧ ಕಿಡಿ ಕಾರುತ್ತಾರೆ. ಸಮಂತಾ ಅವರ ಮೂಡ್ ಕೂಡ
ಬಹುಶಃ ಸರಿ ಇದ್ದಂತೆ ಇರಲಿಲ್ಲ.

viral-a-visibly-frustrated-samantha-ruth-prabhu-had-an-outburst-at-paparazzi-post-gym

ಹೀಗಾಗಿಯೇ ಪಾಪರಾಜಿಗಳ ಈ ವರ್ತನೆಯಿಂದ ಸಮಂತಾ ಕೋಪ ಮಾಡಿಕೊಂಡಿದ್ದಾರೆ. ಸಾಕು ನಿಲ್ಲಿಸಿ ಎಂದು ಗದರಿದ್ದಾರೆ. ಆದರೂ ಕೂಡ ಪಾಪಾರಾಜಿಗಳು ತಮ್ಮ ಕೆಲಸವನ್ನು ನಿಲ್ಲಿಸಲಿಲ್ಲ. ಇನ್ನು ಸಮಂತಾ ಮೊದಲ ಬಾರಿ ಜಿಮ್‌ನಿಂದ ಕೆಳಗೆ ಇಳಿದು ಬಂದಾಗ ಅವರ ಕಾರು ಬಂದು ನಿಂತಿರಲಿಲ್ಲ. ಹೀಗಾಗಿಯೇ ಸಮಂತಾ ಮತ್ತೆ ಮರಳಿ ಹೋಗಿದ್ದರು. ಎರಡನೇ ಬಾರಿಯಾದರೂ ಪಾಪರಾಜಿಗಳು ತಮ್ಮ ಮಾತುಗಳಿಗೆ ಬೆಲೆ ನೀಡಿ ಸುಮ್ಮನೆ ಇರುತ್ತಾರೆ ಎಂದುಕೊಂಡಿದ್ದರು.

ಆದರೆ, ಕಾರು ಬಂದ ನಂತರ ಮತ್ತೆ ಸಮಂತಾ ಕೆಳಗೆ ಬಂದಾಗ ಕೂಡ ಪಾಪರಾಜಿಗಳು ಬಿಡಲಿಲ್ಲ. ಇದರಿಂದ ಸಹನೆಯನ್ನು ಸಮಂತಾ ಕಳೆದುಕೊಂಡಿರುವುದು ಸ್ಪಷ್ಟವಾಗಿ ಕಂಡು ಬಂತು. ಸದ್ಯ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅನೇಕರು.. ಪಾಪರಾಜಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸೆಲೆಬ್ರಿಟಿಗಳಿಗೂ ಕೂಡ ವ್ಯೆಯಕ್ತಿಕ ಬದುಕು ಇರುತ್ತೆ ಅವರನ್ನು ಬದುಕಲು ಬಿಡಿ ಎನ್ನುತ್ತಿದ್ದಾರೆ. ಅವರ ಖಾಸಗಿತನವನ್ನು ಕೂಡ ಗೌರವಿಸಿ ಎಂದು ಹೇಳುತ್ತಿದ್ದಾರೆ. ಪಾಪರಾಜಿಗಳ ಈ ವರ್ತನೆಯನ್ನು ಕಿರುಕುಳ ಎಂದು ಕೂಡ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನುಳಿದಂತೆ ಸಮಂತಾ ವ್ಯೆಯಕ್ತಿಕ ವಿಚಾರಕ್ಕೆ ಬರುವುದಾದರೆ ಸಮಂತಾ ಅವರ ಹೆಸರು ಸದ್ಯ ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕ-ನಿರ್ಮಾಪಕ ರಾಜ್ ನಿಡಿಮೋರು ಅವರ ಜೊತೆ ತಳುಕು ಹಾಕಿಕೊಂಡಿದೆ. ಇಬ್ಬರು ಅನೇಕ ಕಡೆ ಜೊತೆ ಜೊತೆಯಾಗಿ ಓಡಾಡಿದ್ದಾರೆ. ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಆದರೆ.. ಇಲ್ಲಿಯವರೆಗೆ ತಮ್ಮ ಬಗ್ಗೆ ಹಲವು ಸುದ್ದಿಗಳು ಓಡಾಡಿದರೂ ಕೂಡ ಸಮಂತಾ ಆಗಲಿ ರಾಜ್ ಆಗಲಿ ಯಾವ ವಿಚಾರಕ್ಕೂ ಪ್ರತಿಕ್ರಿಯೆಯನ್ನು ನೀಡಲು ಹೋಗಿಲ್ಲ. ತಮ್ಮ ನಡುವೆ ಇರುವುದು ಪ್ರೇಮ ಅಲ್ಲ ಬದಲಿಗೆ ಕೇವಲ ಸ್ನೇಹ ಎಂದು ಕೂಡ ಇಬ್ಬರು ಹೇಳಿಲ್ಲ.

ಇನ್ನು ಸಮಂತಾ ಅವರಂತೆಯೇ ರಾಜ್ ನಿಡಿಮೋರು ಹಿಂದೊಮ್ಮೆ ಸಂಸಾರಸ್ಥರಾಗಿದ್ದರು. ಶ್ಯಾಮಲಿ ದೇ ಅವರ ಜೊತೆ ರಾಜ್ ಮದುವೆಯಾಗಿದ್ದರು. ಆದರೆ ಈ ಸಂಬಂಧ ಮುರಿದು ಬಿತ್ತು. ಹಾಗಂಥ ಶ್ಯಾಮಲಿ ದೇ ಸುಮ್ಮನೆ ಕುಳಿತುಕೊಂಡಿಲ್ಲ. ತನ್ನ ಮಾಜಿ ಪತ್ನಿಯ ಜೊತೆ ಸಮಂತಾ ಕಾಣಿಸಿಕೊಂಡಾಗೆಲ್ಲ ಶ್ಯಾಮಲಿ ನಿಗಿ ನಿಗಿ ಕೆಂಡವಾಗುತ್ತಿದ್ದಾರೆ. ಕರ್ಮ-ಪಾಪ-ಪುಣ್ಯ ಎಂದೆಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಫೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಸಮಂತಾ ಮತ್ತು ರಾಜ್ ನಿಡಿಮೋರು ಮದುವೆಯಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Watch the viral moment as a visibly frustrated Samantha Ruth Prabhu confronts paparazzi outside her gym, demanding they 'stop it' after her workout
Read more about: samantha paparazzi viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X