ಮೊನಾಲಿಸಾ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ ಪತಿ ಫರ್ಮಾನ್

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಭೊಸ್ಲೆ ಮದುವೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಕೆ ಇನ್ನು ಅಪ್ರಾಪ್ತೆ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಇದೆಲ್ಲದರ ನಡುವೆ ಮೊನಾಲಿಸಾ ಈಗ ಗರ್ಭಿಣಿ ಎಂದು ಖುದ್ದು ಪತಿ ಫರ್ಮಾನ್ ಖಾನ್ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ಮೊನಾಲಿಸಾ ಮದುವೆ ಸಮಯದಲ್ಲಿ ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು NCST ತೀರ್ಮಾನಿಸಿ ಫರ್ಮಾನ್ ಖಾನ್ ವಿರುದ್ಧ POCSO ಪ್ರಕರಣ ದಾಖಲಿಸಲಾಗಿದೆ. ಈಗ ಪ್ರಕರಣದ ವಿಚಾರಣೆ ನಡೆಯಬೇಕಿದ್ದು ಮೊನಾಲಿಸಾ ಗರ್ಭಿಣಿ ಆಗಿರುವುದರಿಂದ ಆಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪತಿ ಫರ್ಮಾನ್ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ News18 ಹಿಂದಿ ಮಾಧ್ಯಮ ವರದಿ ಮಾಡಿದೆ.

Viral Girl Monalisa Bhosle Marriage Row Deepens as Pregnancy Claim Emerges Amid POCSO Case

ವಿಚಾರಣೆಯಲ್ಲಿ ಮೊನಾಲಿಸಾ ಹೇಳಿಕೆಯನ್ನು ದಾಖಲಿಸಬೇಕಿದೆ. ಸದ್ಯ ಆಕೆ ಹೇಳಿಕೆ ದಾಖಲಿಸಲು ಮಧ್ಯಪ್ರದೇಶಕ್ಕೆ ಹೋಗಬೇಕಿದೆ. ಕೇರಳದಲ್ಲಿರುವ ಮೊನಾಲಿಸಾ ಗರ್ಭಿಣಿ ಆಗಿರುವುದರಿಂದ ದೂರ ಪ್ರಯಾಣ ಮಾಡಬಾರದು. ಹಾಗಾಗಿ ಆಕೆ ನೇರವಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಲು ಕಷ್ಟವಾಗುತ್ತದೆ ಎಂದು ಪತಿ ಫರ್ಮಾನ್ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗ್ತಿದೆ.

ತಮ್ಮ ಸಂಬಂಧಿಕರಲ್ಲೇ ಒಬ್ಬರನ್ನು ಮದುವೆ ಅಗುವಂತೆ ಮೊನಾಲಿಸಾಗೆ ಪೋಷಕರು ಬಲವಂತ ಮಾಡಿದ್ದರು ಎಂದು ಆಕೆ ಆರೋಪಿಸಿದ್ದರು. ಆದರೆ ಮಲಯಾಳಂ ಸಿನಿಮಾ ಚಿತ್ರೀಕರಣದ ವೇಳೆ ಚಿತ್ರತಂಡದಲ್ಲಿದ್ದ ಫರ್ಮಾನ್ ಖಾನ್ ಜೊತೆ ಪ್ರೀತಿಯಾಗಿತ್ತು. ಬಳಿಕ ಇಬ್ಬರೂ ಮದುವೆಗೆ ನಿರ್ಧರಿಸಿದ್ದರು. ಪೋಷಕರ ವಿರೋಧದ ನಡುವೆ ಪೊಲೀಸರು ಭದ್ರತೆ ಪಡೆದು ಕೇರಳದ ದೇವಸ್ಥಾನದಲ್ಲಿ ಇಬ್ಬರೂ ಮದುವೆ ಆಗಿದ್ದರು.

ಮಾರ್ಚ್ 11ರಂದು ಕೇರಳದ ಪೂವಾರ್ ಬಳಿಯ ಅರುಮನೂರ್ ದೇವಸ್ಥಾನದಲ್ಲಿ ಮೊನಲಿಸಾ ಹಾಗೂ ಫರ್ಮಾನ್ ಜೋಡಿ ಮದುವೆ ಆಗಿದ್ದರು. ಇವರದ್ದು ಲವ್ ಜಿಹಾದ್ ಎಂದು ಕೆಲವರು ಆರೋಪಿಸಿದ್ದರು. ನಿರ್ದೇಶಕ ಸನೋಜ್ ಮಿಶ್ರಾ ಬಹಿರಂಗವಾಗಿ ಮೊನಾಲಿಸಾಳದ್ದು ಲವ್ ಜಿಹಾದ್ ಎಂದಿದ್ದರು. ಆದರೆ ಸನೋಜ್ ವಿರುದ್ಧ ಮೊನಾಲಿಸಾ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಒಟ್ಟಾರೆ ಮೊನಲಿಸಾ ಹಾಗೂ ಫರ್ಮಾನ್ ಮದುವೆ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.

ಸದ್ಯ ಮೊನಾಲಿಸಾ ಗರ್ಭಿಣಿ ಆಗಿರುವ ವೈದ್ಯಕೀಯ ವರದಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆ ಬಳಿಕ ಪ್ರಕರಣದ ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಕಳೆದ ವರ್ಷ ನಡೆದ ಕುಂಭಮೇಳದಲ್ಲಿ ಹಾರಗಳನ್ನು ಮಾರುತ್ತಿದ್ದ ಸುಂದರ ಕಣ್ಣಿನ ಚೆಲುವೆ ನೋಡ ನೋಡುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಳು. ಮೊನಾಲಿಸಾ ಕಣ್ಣುಗಳ ಮೋಡಿಗೆ ನೆಟ್ಟಿಗರು ಫಿದಾ ಆಗಿದ್ದರು. ಫೋಟೊ, ವೀಡಿಯೋಗಳು ವೈರಲ್ ಆಗಿ ಸಿನಿಮಾ, ಆಲ್ಬಮ್ ಸಾಂಗ್ಸ್ ಅವಕಾಶ ಸಿಕ್ಕಿತ್ತು.

ಇಂದೋರ್ ಮೂಲದ ಹುಡುಗಿ ಮೊನಾಲಿಸಾ. ಮಧ್ಯಪ್ರದೇಶದ ಯುವಕ ಫರ್ಮಾನ್. ಸಿನಿಮಾ ಸೆಟ್‌ನಲ್ಲೇ ಇಬ್ಬರ ನಡುವೆ ಸ್ನೇಹ, ಪ್ರೀತಿ ಶುರುವಾಗಿತ್ತು. 6 ತಿಂಗಳ ಪರಿಚಯ, ಸ್ನೇಹ, ಪ್ರೀತಿ ಬಳಿಕ ಇಬ್ಬರೂ ಮದುವೆಗೆ ಮುಂದಾಗಿದ್ದರು. ಅಂತರ್‌ಧರ್ಮೀಯ ಮದುವೆಗೆ ಕೇರಳದ ರಾಜಕೀಯ ನಾಯಕರ ಬೆಂಬಲ ಸಿಕ್ಕಿತ್ತು. ಮೊನಾಲಿಸಾ ತಂದೆ ಈ ಮದುವೆಗೆ ಒಪ್ಪಿರಲಿಲ್ಲ. ಹಾಗಾಗಿ ಜೋಡಿ ಕೇರಳದಲ್ಲಿ ಮದುವೆ ಆಗಲು ನಿರ್ಧರಿಸಿತ್ತು.

ಮೊನಾಲಿಸಾ ಮದುವೆ ಆಗುವಾಗ ದಾಖಲೆಗಳ ಪ್ರಕಾರ ಆಕೆಗೆ ಕೇವಲ 16 ವರ್ಷ, 2 ತಿಂಗಳು ವಯಸ್ಸಾಗಿತ್ತು. ಅಂದರೆ ಇನ್ನು ಅಪ್ರಾಪ್ತೆ ಆಗಿದ್ದಳು ಎಂದು ಹೇಳಲಾಗ್ತಿದೆ. ನಕಲಿ ದಾಖಲೆ ನೀಡಿ ಫರ್ಮಾನ್ ಮದುವೆ ಆಗಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಈ ಸಂಬಂಧ ಮಧ್ಯಪ್ರದೇಶದ ಖಾರ್ಗೋನ್ ಪೊಲೀಸರು ಆತನ ವಿರುದ್ಧ ಫೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ.

Read more about: actress controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X