ಮಣಿ ಮಾರುತ್ತಿದ್ದ ಮಹಾಕುಂಭದ ಮೊನಾಲಿಸಾ ಈಗ 'ಮಾಡೆಲ್', ಲಕ್ ಅಂದರೆ ಇದೆ ಅಲ್ವಾ..?

ಯಾವತ್ತು, ಎಲ್ಲಿ, ಯಾರಿಗೆ, ಹೇಗೆ ಅದೃಷ್ಟ ಒಲಿಯುತ್ತೆ ಎನ್ನುವುದನ್ನು ಯಾರಿಂದ ಕೂಡ ಊಹಿಸಲು ಸಾಧ್ಯವಾಗುವುದಿಲ್ಲ. ಕುರಿ ಕಾಯುತ್ತಾ ತನಗೆ ಇಷ್ಟಬಂದಂತೆ ಹಾಡುತ್ತಿದ್ದ ಹನುಮಂತ ಸರಿಪಮಪ ಸೀಸನ್ 15ರ ರನ್ನರ್ ಅಪ್ ಆಗುವುದಲ್ಲದೇ ಬಿಗ್ ಬಾಸ್ ಮನೆಯನ್ನು ಕೂಡ ಪ್ರವೇಶ ಮಾಡುತ್ತಾರೆ ಅಂದರೆ ತಮಾಷೆನಾ ?

ಇನ್ನು ಮಲಯಾಳಂ ಚಿತ್ರದಲ್ಲಿ ಕಣ್ಸನ್ನೆಯಿಂದನೇ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ಪ್ರಕಾಶ್ ವಾರಿಯರ್ ಅವರದ್ದು ಕೂಡ ಅದೃಷ್ಟನೇ. ಇಷ್ಟೇ ಯಾಕೆ ರೇಲ್ವೆ ಸ್ಟೇಷನ್‌ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹಾಡುತ್ತಿದ್ದ ರಾಣು ಮಂಡಾಲ್ ಅವರದ್ದು ಕೂಡ ಅದೃಷ್ಟವಲ್ಲದೇ ಮತ್ತೇನು ? ಈ ಸಾಲಿಗೆ ಈಗ ಮಹಾಕುಂಭ ಮೇಳದ ಮೊನಾಲಿಸಾ ಕೂಡ ಸೇರಿಕೊಂಡಿದ್ದಾರೆ. ಕುಂಭ ಮೇಳಕ್ಕೆ ಬಂದವರನ್ನೆಲ್ಲ ತನ್ನ ಕಣ್ಣುಗಳ ಮೂಲಕವೇ ಸೆಳೆದ ಮೊನಾಲಿಸಾ ಸದ್ಯ ಸೆಲ್ಫಿ, ಜನರ ಕಿರಿಕಿರಿ ಮತ್ತು ಸಂದರ್ಶನಗಳಿಂದ ಬೇಸತ್ತು ಪ್ರಯಾಗ್ ರಾಜ್‌ದಿಂದ ಮರಳಿ ಇಂಧೋರ್‌ಗೆ ಬಂದಿದ್ದಾರೆ. ಆದರೆ ಹೀಗೆ ಬಂದ ಮೊನಾಲಿಸಾ ಈಗ ಮಣಿ ಮಾರುವ ಹುಡುಗಿಯಾಗಿ ಉಳಿದಿಲ್ಲ. ಬದಲಿಗೆ ಮಾಡೆಲ್ ಆಗಿದ್ದಾರೆ. ಬಣ್ಣದ ಮೋಹಕ್ಕೆ ಸಿಲುಕಿದ್ದಾರೆ.

viral-girl-monalisa-from-maha-kumbh-turned-model-created-her-own-channel-now-wants-to-act-in-movies

ಹೌದು, ಇಂಧೋರ್‌ಗೆ ಬಂದ ಮೊನಾಲಿಸಾ ಪಾರ್ಲರ್‌ನಲ್ಲಿ ಕುಳಿತು ಮೇಕಪ್ ಮಾಡಿಕೊಂಡಿದ್ದಾರೆ. ಶಿಪ್ರಾ ಮೇಕ್ ಓವರ್ ಬ್ಯೂಟಿ ಸಲೂನ್‌ನಲ್ಲಿ ಹೇರ್ ಸ್ಟ್ರೈಟನಿಂಗ್ ಮಾಡಿಸಿಕೊಂಡಿದ್ದಾರೆ. ಸದ್ಯ ಮೊನಾಲಿಸಾ ಅವರ ಈ ಮೇಕಪ್ ವಿಡಿಯೋ ವೈರಲ್ ಆಗಿದೆ. ಮಾಡೆಲಿಂಗ್ ಪ್ರಪಂಚದಲ್ಲಿ ಮೊನಾಲಿಸಾ ಹೆಸರು ಮಾಡ್ತಾರಾ, ಅವರನ್ನು ಯಾರಾದರೂ ಮಾಡೆಲ್ ಆಗುವಂತೆ ಹೇಳಿದ್ದಾರಾ ? ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ.

ಇನ್ನು ಮೊನಾಲಿಸಾಗೆ ಬಾಲಿವುಡ್‌ನಲ್ಲಿ ಮಿಂಚುವ ಆಸೆ ಬೇರೆ ಇದೆ. ಯಾರಾದರೂ ನಿಮ್ಮನ್ನು ಚಿತ್ರದ ನಾಯಕಿಯನ್ನಾಗಿ ಮಾಡುವುದಾಗಿ ಹೇಳಿ ಅವಕಾಶವನ್ನು ನೀಡಿದರೆ ನೀವೇನು ಮಾಡ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರವನ್ನು ನೀಡಿರುವ ಮೊನಾಲಿಸಾ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಐಶ್ವರ್ಯ ರೈ ಅವರಂತೆ ಮಿಂಚುವ ಆಸೆ ಇದೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಮೊನಾಲಿಸಾ ಇಲ್ಲಿಯವರೆಗೆ ಸೋಶಿಯಲ್ ಮೀಡಿಯಾ ಸ್ಟಾರ್ ಮಾತ್ರ ಆಗಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಖಾತೆಗಳನ್ನು ಕೂಡ ತೆರೆದಿದ್ದಾರೆ. ಹಿಂದೊಮ್ಮೆ ಓಪನ್ ಮಾಡಿದ್ದ ಖಾತೆಗೆ ಮತ್ತೆ ಜೀವ ತುಂಬಿದ್ದಾರೆ. ಟ್ವಿಟರ್‌ {ಎಕ್ಸ್‌}ನಲ್ಲಿ ಇವರನ್ನುಈ ಎರಡು ದಿನಗಳಲ್ಲಿ 9000 ಜನ ಫಾಲೋ ಮಾಡಿದ್ದಾರೆ.

ಇನ್ನೂ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಈಗ ಮೊನಾಲಿಸಾ ಮಾಡೆಲ್ ಮಾತ್ರ ಅಲ್ಲ ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದಾರೆ.ಯೂಟ್ಯೂಬ್ ಚಾನೆಲ್‌ನವರ ಹಾವಳಿಯಿಂದ ಬೇಸತ್ತು ಪ್ರಯಾಗ್‌ರಾಜ್‌ದಿಂದ ನೊಂದು ಬೆಂದು ಕಣ್ಣೀರು ಹಾಕುತ್ತಾ ತಮ್ಮ ಮನೆಗೆ ಬಂದ ಮೊನಾಲಿಸಾ ಈಗ ತಮ್ಮದೇ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಎಲ್ಲರೂ ನನ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವಾಗ ನಾನ್ಯಾಕೇ ನನ್ನದೇ ಒಂದು ಯೂಟ್ಯೂಬ್ ಚಾನೆಲ್ ಮಾಡಬಾರದೆಂದು ಯೂಟ್ಯೂಬ್ ತೆರೆದ ಮೊನಾಲಿಸಾ ತಮ್ಮ ಚಾನೆಲ್‌ನ ಸಬ್‌ಸ್ಕ್ರೈಬ್ ಮಾಡುವಂತೆ ಎಲ್ಲರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಮೊನಾಲಿಸಾ ಜನಪ್ರಿಯತೆ ಸದ್ಯ ಹೇಗಿದೆ ಎಂದರೆ ಇವರ ಹೆಸರು ಮತ್ತು ಇವರ ಭಾವ ಚಿತ್ರಗಳನ್ನು ಉಪಯೋಗಿಸಿಕೊಂಡು ಒಂದೈವತ್ತು ಚಾನೆಲ್‌ಗಳನ್ನು ಯೂಟ್ಯೂಬ್‌ನಲ್ಲಿ ತೆರೆಯಲಾಗಿದೆ. ಒಟ್ನಲ್ಲಿ ಸದ್ಯ ಒಂದು ವಿಡಿಯೋ ಮೂಲಕ ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿದ ಮೊನಾಲಿಸಾ ಬದುಕು ಬದಲಾಗಿದೆ. ಸಿಕ್ಕ ಈ ಅಪಾರವಾದ ಜನಪ್ರಿಯತೆಯಿಂದ ಇವರ ಬದುಕು ಮುಂದೆ ಬೀದಿಗೆ ಬರದೇ ಇರಲಿ ಎನ್ನುವುದೇ ಅನೇಕರ ಆಶಯ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X