Viral News: ಪಾಕಿಸ್ತಾನಿ ಯೂಟ್ಯೂಬರ್ ಖಾಸಗಿ ವಿಡಿಯೋ ಲೀಕ್: ತನಿಖಾ ಸಂಸ್ಥೆ ಮೊರೆ ಹೋದ ಅಲಿಜಾ ಸಹರ್

By ಫಿಲ್ಮಿಬೀಟ್ ಡೆಸ್ಕ್

ಇಂಟರ್‌ನೆಟ್, ಸೋಶಿಯಲ್ ಮೀಡಿಯಾ ದಿನದಿಂದ ದಿನಕ್ಕೆ ಅಪಾಯಕಾರಿ ಎನಿಸುತ್ತಿದೆ. ತಮ್ಮ ಖಾಸಗಿತನಕ್ಕೆ ಧಕ್ಕೆ ತರುವಂತಹ ಅದೆಷ್ಟೋ ಘಟನೆಗಳು ದಿನ ಬೆಳಕಾದರೆ ನಡೆಯುತ್ತಿವೆ. ಈಗ ಪಾಕಿಸ್ತಾನದ ಫೇಮಸ್ ಯೂಟ್ಯೂಬರ್ ಅಲಿಜಾ ಸಹರ್ ಪ್ರಸಕ್ತ ಉದಾಹರಣೆಯಾಗಿದ್ದಾರೆ.

ಅಲಿಜಾ ಸಹರ್ ಪಾಕಿಸ್ತಾನ ಮೂಲದ ಜನಪ್ರಿಯ ಯೂಟ್ಯೂಬರ್. ಪಾಕಿಸ್ತಾನ ಹಳ್ಳಿ ಜೀವನವನ್ನು ಅಲಿಜಾ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತೋರಿಸುತ್ತಿದ್ದರು. ಇದೇ ಯೂಟ್ಯೂಬರ್ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೀಗ ಲೀಕ್ ಆಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

pakistani-youtuber-aliza-sahar

ಪಾಕ್ ಯೂಟ್ಯೂಬರ್ ಖಾಸಗಿ ವಿಡಿಯೋ ವೈರಲ್

ಪಾಕಿಸ್ತಾನ ಗ್ರಾಮೀಣ ಬದುಕನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಬಿತ್ತರಿಸುತ್ತಿದ್ದರು. ಈ ಚಾನೆಲ್ ಮೂಲಕ ಅಲಿಜಾ ಸಹರ್ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು. ಸುಮಾರು ಒಂದು ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಕೇವಲ ಯೂಟ್ಯೂಬ್ ಹಾಗೂ ಟಿಕ್‌ಟಾಕ್ ಮೂಲಕ ಗಳಿಸಿದ್ದರು. ಪಾಕಿಸ್ತಾನ ಹಳ್ಳಿ ಜನರ ಬದುಕು, ಅಡುಗೆ ಮಾಡುವ ವಿಧಾನ, ಸಂಸ್ಕೃತಿ ಇಂತಹ ಕಂಟೆಂಟ್ ಅನ್ನು ತೋರಿಸುತ್ತಿದ್ದರು.

ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದ ಅಲಿಜಾ ಸಹರ್ ಈಗ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಆಕೆ ಖಾಸಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ವೈರಲ್ ಅಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಅಲಿಜಾ ಸಹರ್ ವಿಡಿಯೋ ಕಾಲ್ ಮೂಲಕ ವ್ಯಕ್ತಿಯೊಬ್ಬರ ಜೊತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ನಡೆದ ಕೆಲವು ಚಟುವಟಿಕೆಗಳು ವಿಡಿಯೋ ಕಾಲ್‌ನಲ್ಲಿ ರೆಕಾರ್ಡ್ ಆಗಿದ್ದು, ಅದನ್ನು ಆ ವ್ಯಕ್ತಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾನೆಂದು ವರದಿಗಳಾಗಿದೆ.

ವಿಡಿಯೋ ಕಾಲ್‌ನಲ್ಲಿ ಅಲಿಜಾ ಸಹರ್ ದೇಹವನ್ನು ಪ್ರದರ್ಶಿಸುವ ದೃಶ್ಯಗಳು ಹಾಗೂ ಕೆಲವು ಪೋಲಿ ಮಾತುಗಳಿವೆ ಎಂದು ಹೇಳಲಾಗುತ್ತಿದೆ. ಇದು ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಸ್ಟಾರ್ ಅನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ, ಈ ಬಗ್ಗೆ ಇನ್ನೂ ಅಲಿಜಾ ಸಹರ್ ಪ್ರತಿಕ್ರಿಯೆ ನೀಡಿದ್ದು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮೊರೆ ಹೋಗಿದ್ದಾರೆ.

ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮೊರೆ

ಸೋಶಿಯಲ್ ಮೀಡಿಯಾ ಸ್ಟಾರ್ ಅಲಿಜಾ ಸಹರ್ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA) ಮೊರೆ ಹೋಗಿದ್ದಾರೆ. ತನ್ನ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ ವ್ಯಕ್ತಿಯ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಕತಾರ್‌ನಲ್ಲಿ ನೆಲೆಸಿರುವ ಕಿರಾತಕನನ್ನು ಪತ್ತೆ ತೆಹಚ್ಚಲು ಏಜೆನ್ಸಿಗೆ ಸಾಧ್ಯವಾಗಿದೆ. ಹಾಗೇ ಅವನ ಗುರುತನ್ನು ಬಹಿರಂಗಪಡಿಸಲಾಗಿದೆ ಎಂದು ಅಲಿಜಾ ತನ್ನ ವೀಕ್ಷಕರಿಗೆ ತಿಳಿಸಿದ್ದಾರೆ.

ಸೈಬರ್ ಕ್ರೈಂ ತಂಡ ತನ್ನ ನೆರವಿಗೆ ಬಂದಿದೆ ಎಂದೂ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ತನ್ನ ಸಂಕಷ್ಟ ದಿನಗಳಲ್ಲಿ ತನಗೆ ಬೆಂಬಲ ನೀಡಿದ್ದಕ್ಕೆ ಅನ್‌ಲೈನ್ ಕಮ್ಯೂನಿಟಿಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

More from Filmibeat

English summary
Pakistani YouTuber Aliza Sahar's Private Video leaked went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X