ಬಾಲಿವುಡ್‌ನ ಖ್ಯಾತ ಖಳನಾಯಕ ಪ್ರೇಮ್ ಚೋಪ್ರಾ ಆಸ್ಪತ್ರೆಗೆ ದಾಖಲು, ಚಿತ್ರರಂಗದಲ್ಲಿ ಆತಂಕ

ಭಾರತೀಯ ಚಿತ್ರರಂಗದ ಅತ್ಯದ್ಭುತ ಖಳನಾಯಕರಲ್ಲಿ ಪ್ರೇಮ್ ಚೋಪ್ರಾ ಕೂಡ ಒಬ್ಬರು. ಆ ಕಾಲದಲ್ಲಿ ಕೇವಲ ಬೆಳ್ಳಿತೆರೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ಪ್ರೇಮ್ ಚೋಪ್ರಾ ಎದುರಾದರೆ ಅನೇಕ ಹೆಣ್ಣು ಮಕ್ಕಳು ಭಯ ಪಡುತ್ತಿದ್ದರು. ಜನ್ಮ ಪಡೆದಿದ್ದು ಪಾಕಿಸ್ತಾನದ ಲಾಹೋರ್‌ನಲ್ಲಿ ಆದರೂ ಭಾರತದಲ್ಲಿಯೇ ಬದುಕು ರೂಪಿಸಿಕೊಂಡ ಪ್ರೇಮ್ ಚೋಪ್ರಾ, ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಾಯಕ ಧರ್ಮೇಂದ್ರ...

ಅವರಂತೆಯೇ 65 ವರ್ಷ ಕಲಾ ಸೇವೆಯನ್ನು ಮಾಡಿದವರು. 1960ರಲ್ಲಿ ಪಂಜಾಬಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಪ್ರೇಮ್ ಚೋಪ್ರಾ ಅದೇ ವರ್ಷ ''ಹಮ್ ಹಿಂದೂಸ್ತಾನಿ'' ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಕೂಡ ಪ್ರವೇಶ ಮಾಡಿದರು. ಇಲ್ಲಿಂದಾಚೆ ''ವೋ ಕೌನ್ ಥೀ''.. ''ಶಹೀದ್''.. ''ತೀಸರಿ ಮಂಜಿಲ್''.. ''ಉಪಕಾರ್''.. ''ದೋ ರಾಸ್ತೆ''.. ''ಬಾಬಿ''.. ''ಅಂಜಾನಾ''.. ''ವಾರಿಸ್''.. ''ಪಗ್ಲಾ ಕಹಿಂ ಕಾ''.. ''ಕಟಿ ಪತಂಗ್''.. ''ರಾಜಾ ಜಾನಿ''.. ''ಡ್ರೀಮ್ ಗರ್ಲ್''.. ''ತ್ರಿಶೂಲ್''.. ''ಕಾಲಾ ಪತ್ತರ್''.. ''ದೋಸ್ತಾನಾ''.. ''ಲೂಟ್ಮಾರ್'' ''ಅಂಧಾ ಕಾನೂನ್''.. ''ಫೂಲ್ ಬನೆ ಅಂಗಾರೆ''.. ''ರಾಜಾ ಬಾಬು''.. ''ಏಜೆಂಟ್ ವಿನೋದ್''..

Viral Scare for Prem Chopra Bollywood Legend Hospitalized Doctors Say He is Stable Recovering Well

ಹೀಗೆ ಸರಿ ಸುಮಾರು 380ಕ್ಕೂ ಅಧಿಕ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನರ ಹೃದಯ ಗೆದ್ದ ಪ್ರೇಮ್ ಚೋಪ್ರಾ ಅವರ ''ಪ್ರೇಮ್ ನಾಮ್ ಹೈ ಮೇರಾ.. ಪ್ರೇಮ್ ಚೋಪ್ರಾ'' ಡೈಲಾಗ್‌ನ ಚಿತ್ರ ರಸಿಕರು ಯಾವತ್ತೂ ಮರೆಯಲಾರರು.

ಇಂಥಾ ಪ್ರೇಮ್ ಚೋಪ್ರಾ ಸದ್ಯ ವಯೋಸಹಜ ಖಾಯಿಲೆಯಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈರಲ್ ಸೋಕಿನಿಂದ ಪ್ರೇಮ್ ಚೋಪ್ರಾ ಆಸ್ಪತ್ರೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೃದ್ರೋಗ ತಜ್ಞ ಡಾ. ನಿತಿನ್ ಗೋಖಲೆ ಅವರು ಚೋಪ್ರಾ ಆಸ್ಪತ್ರೆಗೆ ದಾಖಲಾಗಿರುವುದನ್ನು ದೃಢಪಡಿಸಿದ್ದಾರೆ. ಪ್ರೇಮ್ ಚೋಪ್ರಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಪ್ರೇಮ್ ಚೋಪ್ರಾ ಅವರ ಆರೋಗ್ಯದ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಆಸ್ಪತ್ರೆಯ ವೈದ್ಯ ಡಾ. ಜಲೀಲ್ ಪಾರ್ಕರ್, ಬಾಲಿವುಡ್‌ನ ಹಿರಿಯ ನಟ ಪ್ರೇಮ್ ಚೋಪ್ರಾ ಅವರಿಗೆ ಹೃದಯ ಸಂಬಂಧಿ ಸಮಸ್ಯೆಗಳಿದ್ದು, ವೈರಲ್ ಸೋಂಕು ತಗುಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಮೂರರಿಂದ ನಾಲ್ಕು ದಿನ ಆಸ್ಪತ್ರೆಯಿಂದ ಗುಣಮುಖರಾಗಿ ಪ್ರೇಮ್ ಚೋಪ್ರಾ ಮನೆಗೆ ಬರುತ್ತಾರೆ ಎಂದು ಹೇಳಿದ್ದಾರೆ.

ಇನ್ನು ಧರ್ಮೇಂದ್ರ ಈಗಾಗಲೇ ಆಸ್ಪತ್ರೆಯಲ್ಲಿದ್ದಾರೆ. ಧರ್ಮೇಂದ್ರ ಬೆನ್ನಲ್ಲಿಯೇ ಪ್ರೇಮ್ ಚೋಪ್ರಾ ಕೂಡ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ, ವೈದ್ಯರು ಬೇಡ ಎಂದು ಹೇಳಿದ್ದರು ಕೂಡ ಚಿತ್ರರಂಗದಲ್ಲಿ ಆತಂಕ ಮನೆ ಮಾಡಿದೆ. ಎರಡು ಹಿರಿಯ ಜೀವಗಳ ಚೇತರಿಕೆಗೆ ಬಾಲಿವುಡ್ ಸದ್ಯ ಪ್ರಾರ್ಥನೆ ಮಾಡುತ್ತಿದೆ.

Viral Scare for Prem Chopra Bollywood Legend Hospitalized Doctors Say He is Stable Recovering Well

ಪ್ರೇಮ್ ಚೋಪ್ರಾ ಅವರ ಆರೋಗ್ಯದ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಪುತ್ರಿ ಪ್ರೇರಣಾ ಮತ್ತು ಅಳಿಯ ನಟ ಶರ್ಮನ್ ಜೋಶಿ, ಪ್ರೇಮ್ ಚೋಪ್ರಾ ಅವರ ಆರೋಗ್ಯ ಸ್ಥಿರವಾಗಿದೆ. ಕೆಲವು ಪರೀಕ್ಷೆಗಳನ್ನು ಮಾಡಲಾಗಿದೆ. ನಾಳೆ ಅಥವಾ ನಾಡಿದ್ದು ಮನೆಗೆ ಮರಳಿ ಬರುತ್ತಾರೆ ಎಂದು ಹೇಳಿದ್ದಾರೆ.

90 ವರ್ಷದ ಪ್ರೇಮ್ ಚೋಪ್ರಾ ಅವರಿಗೆ ಪ್ರೇರಣಾ ಚೋಪ್ರಾ, ಪುನಿತಾ ಚೋಪ್ರಾ, ರಕಿತಾ ಚೋಪ್ರಾ ಎಂಬ ಮೂವರು ಪುತ್ರಿಯರಿದ್ದು, ರಾಹುಲ್ ನಂದಾ, ವಿಕಾಸ್ ಭಲ್ಲಾ ಮತ್ತು ಶರ್ಮನ್ ಜೋಶಿ ಇವರ ಅಳಿಯಂದಿರು. ಪ್ರೇಮ್ ಚೋಪ್ರಾ ಅವರಿಗೆ ಆರು ಮೊಮ್ಮಕ್ಕಳು ಇದ್ದಾರೆ. ಪ್ರೇಮ್ ಚೋಪ್ರಾ ಅವರ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ಧಾರೆ.

More from Filmibeat

English summary
Bollywood legend Prem Chopra is currently hospitalized and stable after a viral infection. Lilavati Hospital doctors predict a quick recovery, stating he should be fine in 3-4 days
Read more about: hospitalised filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X