ಕೇವಲ ₹1ಲಕ್ಷಕ್ಕೆ ಹೈದರಾಬಾದ್‌ನ ನಿರ್ಮಾಪಕರಿಗೆ ಆ ವ್ಯಕ್ತಿ ನನ್ನ ಮಾರಿದ ; ಕಹಿ ಅನುಭವ ಹಂಚಿಕೊಂಡ ನಟಿ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತದೆ.
ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ.ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಸಮಯ ಸಂದರ್ಭ ಬಂದಾದ ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಖುಷಿ ಮುಖರ್ಜಿ.

ಹೌದು.. ಖುಷಿ ಮುಖರ್ಜಿ .. ಅಂಗಾಗ ಪ್ರದರ್ಶನ ಮಾಡುವುದನ್ನೇ ಅಭಿನಯ ಎಂದುಕೊಂಡಿರುವ ಚೆಲುವೆ. ಉರ್ಫಿ ಜಾವೇದ್‌ಗೆ ಸೆಡ್ಡು ಹೊಡೆಯುವಂತೆ ಬಟ್ಟೆಗಳನ್ನು ಧರಿಸಿಕೊಂಡು ಮುಂಬೈನ ಬೀದಿ ಬೀದಿಗಳಲ್ಲಿ ಓಡಾಡುವ ಖುಷಿ ಮುಖರ್ಜಿ ಸದ್ಯ ಟ್ರೋಲಿಗರ ಪಾಲಿನ ತಾಂಬೂಲವು ಹೌದು.
ತಮ್ಮ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಚಿತ್ರವನ್ನು ಮಾಡದ ಖುಷಿ ಮುಖರ್ಜಿ ಬಿ ಗ್ರೇಡ್ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. 2013ರಲ್ಲಿ ಒಂದು ತಮಿಳು ಮತ್ತು 2014ರಲ್ಲೊಂದು ತೆಲುಗು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ದಕ್ಷಿಣದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ.
ಇಂಥಾ ಖುಷಿ ಮುಖರ್ಜಿ ಸದ್ಯ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬ ನಿರ್ಮಾಪಕರಿಗೆ ನನ್ನನ್ನೂ ಒಂದು ಲಕ್ಷಕ್ಕೆ ಮಾರಿ ಬಿಟ್ಟಿದ್ದ ಎಂದು ಹೇಳಿದ್ದಾರೆ. ಈ ಕುರಿತು ''ಜೀ ನ್ಯೂಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಖುಷಿ ಮುಖರ್ಜಿ ಅವಕಾಶವನ್ನು ಅರಸುತ್ತಾ ನಾನೊಮ್ಮೆ ಹೈದರಾಬಾದ್‌ಗೆ ಹೋಗಿದ್ದೇ ಆ ಸಮಯದಲ್ಲಿ ಅಲ್ಲಿನ ಕಾಸ್ಟಿಂಗ್ ಡೈರೆಕ್ಟರ್ ಒಬ್ಬ ನಿರ್ಮಾಪಕರಿಗೆ ನನ್ನನ್ನು ಮಾರಲು ಪ್ರಯತ್ನ ಮಾಡಿದ್ದ ಎಂದು ಹೇಳಿದ್ದಾರೆ.

ನಿನಗೆ ಅವಕಾಶ ಸಿಗುವುದು ನೂರಕ್ಕೆ ನೂರು ಸತ್ಯ ನಿರ್ಮಾಪಕರನ್ನು ಹೋಗಿ ಭೇಟಿ ಮಾಡು ಎಂದು ಆತ ನನಗೆ ಹೇಳಿದ, ನನ್ನ ಬೆನ್ನ ಹಿಂದೆ ನನಗೆ ಗೊತ್ತಿರದಂತೆ ಆ ನಿರ್ಮಾಪಕರಿಂದ ಒಂದು ಲಕ್ಷ ಹಣವನ್ನು ಕೂಡ ಪಡೆದಿದ್ದ ಎಂದು ಹೇಳಿರುವ ಖುಷಿ ಆ ನಂತರ ನಾನು ನಿರ್ಮಾಪಕರ ಬಳಿ ಹೋದೆ ಆಗ ಅವರು ಇಂದು ರಾತ್ರಿ ನನ್ನ ಜೊತೆ ನೀವು ಇರಲಿದ್ದೀರಾ ಎಂದಾಗ ನನಗೆ ಶಾಕ್ ಆಯ್ತು ಎಂದು ಹೇಳಿದ್ದಾರೆ. ನನಗೆ ಈ ಯಾವ ವಿಚಾರ ಗೊತ್ತಿಲ್ಲ.. ನಿಮ್ಮ ನಡುವೆ ಆದ ಒಪ್ಪಂದವೇನು ಎನ್ನುವುದು ನನಗೆ ಗೊತ್ತಿಲ್ಲ ಅದಕ್ಕೆ ನನ್ನ ಸಮ್ಮತಿ ಕೂಡ ಇಲ್ಲ ಎಂದು ನಾನು ಆ ನಿರ್ಮಾಪಕನಿಗೆ ಧೈರ್ಯ ಮಾಡಿ ಹೇಳಿದೆ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು ಆ ನಿರ್ಮಾಪಕ ತುಂಬಾ ಒಳ್ಳೆಯವರಾಗಿದ್ದರು ನನ್ನ ಮಾತು ಕೇಳಿ ಆ ವ್ಯಕ್ತಿ ನನ್ನ ಮೇಲೆ ಕೂಗಾಡಲಿಲ್ಲ.. ದೌರ್ಜನ್ಯ ಎಸಗಲು ಪ್ರಯತ್ನವನ್ನು ಕೂಡ ಮಾಡಲಿಲ್ಲ ಎಂದಿರುವ ಖುಷಿ ಆ ನಂತರ ಅವರೇ ಆಯ್ತು ಇನ್ನೂ ನೀವು ಹೊರಡಬಹುದು ಎಂದು ಹೇಳಿ ಫ್ಲೈಟ್ ಟಿಕೆಟ್ ಬುಕ್ ಮಾಡಿ ನನ್ನ ಹೈದರಾಬಾದ್‌ದಿಂದ ಮುಂಬೈಗೆ ಕಳುಹಿಸಿದರು ಎಂದು ಹೇಳಿದ್ದಾರೆ. ಆ ನಿರ್ಮಾಪಕ ನನ್ನ ಟಚ್ ಕೂಡ ಮಾಡಲಿಲ್ಲ ಎಂದು ಹೇಳಿದ್ದಾರೆ. ಈ ತರಹದ ಹಲವು ಅನುಭವಗಳು ನನಗಾಗಿವೆ ಎಂದು ಹೇಳಿದ್ದಾರೆ ಖುಷಿ ಮುಖರ್ಜಿ. ಎಂದಿನಂತೆ ಎಲ್ಲರಂತೆ ಆ ಕಾಸ್ಟಿಂಗ್ ಡೈರೆಕ್ಟರ್ ಯಾರು ? ಆ ನಿರ್ಮಾಪಕ ಯಾರು ? ಎನ್ನುವುದನ್ನು ಖುಷಿ ಹೇಳಿಲ್ಲ.


Click it and Unblock the Notifications











