ಲಿಪ್ ಸರ್ಜರಿ ಸೈಡ್ ಎಫೆಕ್ಟ್, ಊದಿಕೊಂಡ ಖ್ಯಾತ ನಟಿಯ ಮುಖ, ಶಾಕ್ ಆದ ಫ್ಯಾನ್ಸ್

ಕ್ಷೇತ್ರ ಯಾವುದೇ ಇರಲಿ ಚಾಲ್ತಿಯಲ್ಲಿ ಇದ್ದರಷ್ಟೇ ಬೆಲೆ. ಇಲ್ಲದೇ ಇದ್ದರೆ ಎಷ್ಟೇ ಜಾಣನಾದರೂ ಜಗತ್ತು ಕೋಣ ಎಂದೇ ಅಂದುಕೊಳ್ಳುತ್ತೆ. ಗೆದ್ದೆತ್ತಿನ ಬಾಲವನ್ನೇ ಹಿಡಿಯುತ್ತೆ. ಈ ಕಾರಣಕ್ಕೆ ಚಲಾವಣೆಯಲ್ಲಿರಲು ಅನೇಕರು ಅನೇಕ ತರಹದ ಸರ್ಕಸ್ ಗಳನ್ನ ಇಲ್ಲಿ ಮಾಡ್ತಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಂತೂ ನಾನಾ ತರಹದ ಕಸರತ್ತುಗಳನ್ನ ಅನೇಕರು ಮಾಡಲು ಮುಂದಾಗುತ್ತಾರೆ. ತೀರಾ ತಮ್ಮ ಖಾಸಗಿ ವಿಚಾರಗಳ..

ಕುರಿತು ಬಹಿರಂಗವಾಗಿಯೇ ಮಾತನಾಡುವ ಮೂಲಕ ಪ್ರಚಾರದಲ್ಲಿರಲು ಬಯಸುತ್ತಾರೆ. ಆ ಪೈಕಿ ಉರ್ಫಿ ಜಾವೇದ್ ಕೂಡ ಒಬ್ಬರು. ಹೌದು, ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಅರ್ಧ ಮರ್ಧ ಬಟ್ಟೆ ಹಾಕಿಕೊಳ್ಳುವುದು ಮತ್ತು ಅದೇ ಅವತಾರದಲ್ಲಿ ಕ್ಯಾಮರಾಗಳಿಗೆ ಪೋಸು ಕೊಡುವುದನ್ನೇ ಫುಲ್ ಟೈಮ್ ಕೆಲಸವನ್ನಾಗಿಸಿಕೊಂಡಿರುವ ಉರ್ಫಿ ಜಾವೇದ್ ಅವರಿಗೆ ಸದ್ಯ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾಗಿದೆ.

Viral Uorfi Javed s Face Swollen After Ditching Fillers - The Jaw-Dropping Before amp amp After

ಹೀಗಾಗಿಯೇ ಲಿಪ್ ಫಿಲ್ಲರ್ ಅಂದರೆ ಲಿಪ್ ಸರ್ಜರಿಯನ್ನು ಉರ್ಫಿ ಮಾಡಿಸಿಕೊಂಡಿದ್ದಾರೆ. ತಾವು ಲಿಪ್ ಫಿಲ್ಲರ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಕೂಡ ಮಾಡಿರುವ ಉರ್ಫಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಹೀಗೆ ಹಂಚಿಕೊಂಡ ವಿಡಿಯೋದಲ್ಲಿ ದೇವರೇ, ಫಿಲ್ಲರ್ ಮಾಡುವಾಗ ನನ್ನ ತುಟಿಗಳು ತುಂಬಾ ಊದಿಕೊಂಡವು ಎಂದು ಹೇಳಿರುವ ಉರ್ಫಿ ನಾನು ನನ್ನ ಮುಖವನ್ನು ನೋಡಿ ಈ ಸಮಯದಲ್ಲಿ ನಗುತ್ತಿದ್ದೆ ಎಂದು ಹೇಳಿದ್ದಾರೆ. ನನ್ನ ಸ್ಥಿತಿ ತುಂಬಾನೇ ಭಯಂಕರವಾಗಿತ್ತು ಆದರೆ ಇದರ ಫಲಿತಾಂಶವನ್ನು ನಾನು ಮುಂಬರುವ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಲಿಪ್ ಫಿಲ್ಲರ್‌ ಮಾಡಿಸಿಕೊಳ್ಳಲು ಇಂಜೆಕ್ಷನ್‌ನ ಉರ್ಫಿ ತೆಗೆದುಕೊಂಡಿದ್ದು ಇಂಜೆಕ್ಷನ್ ನೀಡಿದ ನಂತರ ಉರ್ಫಿಯ ಸಂಪೂರ್ಣ ಮುಖ ಊದಿಕೊಂಡಿರುವುದನ್ನು, ಅವರ ತುಟಿಗಳು ಹಾಳಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಸದ್ಯ ಉರ್ಫಿ ಹಂಚಿಕೊಂಡ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವಾರು ಜನ ಉರ್ಫಿಯ ಈ ಹುಚ್ಚುತನಕ್ಕೆ ಕಿಡಿ ಕಾರಿದ್ದಾರೆ. ಸಹಜ ಸೌಂದರ್ಯವನ್ನು ಯಾಕೆ ಹೀಗೆ ಹಾಳು ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ನೋಡಲು ಈಗಾಗಲೇ ಸುಂದರವಾಗಿದ್ದೀರಿ ಇದರ ಅವಶ್ಯಕತೆ ಏನಿತ್ತು ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ನಾಯಕಿಯರಿಗೆ ಮತ್ತು ಪ್ಲಾಸ್ಟಿಕ್ ಸರ್ಜರಿಗೆ ಅವಿನಾಭಾವ ಸಂಬಂಧ ಇದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಕೂಡ ಹಲವರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

viral-uorfi-javeds-face-swollen-after-ditching-fillers-the-jaw-dropping-before-after

ಇನ್ನುಳಿದಂತೆ ಉರ್ಫಿ ಜಾವೇದ್ ಇತ್ತೀಚೆಗೆ '' ದಿ ಟ್ರೇಟರ್ಸ್'' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವಿನ್ನರ್ ಆಗಿ ಕೂಡ ಹೊರ ಹೊಮ್ಮಿದ್ದರು. ಇನ್ನು ಬಾಲಿವುಡ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ತಮ್ಮ ಕಾಸ್ಟೂಮ್‌ಗಳಿಂದನೇ ಎಲ್ಲರ ಕಣ್ಮನವನ್ನು ಉರ್ಫಿ ಸೆಳೆಯುತ್ತಾ ಬಂದಿದ್ದರು.

ಆದರೆ ಈಗೀಗ ಉರ್ಫಿಗೆ ತನಿಷಾ ಮುಖರ್ಜಿ ಅವರಿಂದ ಹಿಡಿದು ಹಲವಾರು ಜನ ತೀವೃ ಸ್ಫರ್ಧೆಯನ್ನು ನೀಡುತ್ತಿದ್ದಾರೆ. ಹೀಗಾಗಿಯೇ ಸಾರ್ವಜನಿಕ ಸಭೆ ಸಮಾರಂಭದಲ್ಲಿ ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳದ ಉರ್ಫಿ ಸದ್ಯ ಈ ಲಿಪ್ ಸರ್ಜರಿ ಅವಾಂತರದ ಮೂಲಕ ಸುದ್ದಿಯಾಗುವ ಪ್ರಯತ್ನವನ್ನು ಮಾಡಿದಂತೆ ಇದೆ ಎನ್ನುವುದು ಹಲವು ಬಾಲಿವುಡ್ ಪಂಡಿತರ ಅಭಿಪ್ರಾಯ.

ಇಂಥಾ ಉರ್ಫಿ ಜಾವೇದ್ ಮುಂಬೈನಾದ್ಯಂತ 150 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ www.magicbricks.com ವರದಿಯನ್ನು ಕೂಡ ಮಾಡಿದ್ದು ಉರ್ಫಿ ಬಳಿ ಸುಮಾರು 25 ಲಕ್ಷ ರೂ. ಮೌಲ್ಯದ ಜೀಪ್ ಕೂಡ ಇದೆ ಎಂದು ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸದ್ಯ 'ದಿ ಟ್ರೇಟರ್ಸ್' ರಿಯಾಲಿಟಿ ಶೋವನ್ನು ಗೆದ್ದಿರುವ ಉರ್ಫಿ 2016ರಿಂದ ಚಿತ್ರರಂಗದಲ್ಲಿದ್ದಾರೆ. ಆದರೆ.. ಬಟ್ಟೆಯ ವಿಚಾರದಿಂದ ಸದ್ದು ಮಾಡಿರುವ ಉರ್ಫಿ ಚಿತ್ರರಂಗದಲ್ಲಿ ಸಾಧಿಸಿ ಭೇದಿಸಿದ್ದು ಅಷ್ಟರಲ್ಲಿಯೇ ಇದೆ.

More from Filmibeat

English summary
filler journey. Her face swelled painfully after removal treatment. Don't miss her candid account & viral photos.
Read more about: urfi javed plastic surgery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X