ಮೂರನೇ ಪತ್ನಿ ಎಂದಿದ್ದಕ್ಕೆ ಕೆರಳಿದ ಪವರ್ ಸ್ಟಾರ್ ; ಪಾರ್ಟಿಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನ
ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಸಾಕು ಆ ಸ್ಟಾರ್ ಹಂಗೆ, ಈ ಸ್ಟಾರ್ ಹಿಂಗೇ ಎನ್ನುವಂತಹ ಬರಹಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರುವುದು ಸರ್ವೇ ಸಾಮಾನ್ಯ. ಚಿತ್ರರಂಗದ ತಾರೆಯರನ್ನು ಅಷ್ಟೂ ಕಾಡದೇ ಇದ್ದರೆ ಹೇಗೆ ? ಎನ್ನುವುದು ಅನೇಕರ ಆಲೋಚನೆ. ಇನ್ನು ಇಂತಹ ಸಾಕಷ್ಟು ವಿಚಾರಗಳು ಕಣ್ಣಿಗೆ ಕಂಡಾಗ ತಮ್ಮ ಕುರಿತು....
ವಿವಾದಾತ್ಮಕವಾದ ಟ್ರೋಲ್ ಮಾಡಿದಾಗ ಅಥವಾ ತಮ್ಮನ್ನು ಹೀಯಾಳಿಸಿದಾಗ ಅನೇಕ ತಾರೆಯರು ಉರಿದು ಬೀಳುತ್ತಾರೆ. ಟ್ರೋಲ್ ಮಾಡಿದವರ ವಿರುದ್ದ, ಕಾಲೆಳದೆವರ ವಿರುದ್ದ, ಮನಸೋ ಇಚ್ಚೆ ಕಾಮೆಂಟ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದಲ್ಲದೇ ಕೆಲವರು ಕಾನೂನಿನ ಮೊರೆ ಹೋಗುತ್ತಾರೆ. ಸೈಬರ್ ಕ್ರೈಮ್ ಅಡಿ ಪ್ರಕರಣವನ್ನು ಕೂಡ ದಾಖಲಿಸುತ್ತಾರೆ.

ಒಟ್ನಲ್ಲಿ ಚಿತ್ರರಂಗದಲ್ಲಿರುವ ಅನೇಕರು ಏನೇ ಮಾಡಿದರು ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ಹಾಕಿಕೊಂಡರು ಸುದ್ದಿ, ಅಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮೂರಾ ಬಟ್ಟೆಯಾಗಿರುತ್ತೆ. ಇನ್ನು ಮದುವೆ ಆಗಿ ಆ ನಂತರ ವಿಚ್ಛೇದನವಾಗಿದ್ದರಂತೂ ಮುಗೀತು. ಕಾಲೆಳೆಯಲು ಅಂತಾನೇ ಇರುವ ಒಂದು ಗುಂಪು ಇವರ ಮೇಲೆ ನಿಗಾ ವಹಿಸಿರುತ್ತೆ. ಸಮಯ ಬಂದಾಗ ವ್ಯೆಯಕ್ತಿಕ ನಿಂದನೆಗೆ ಮುಂದಾಗುತ್ತೆ. ಸದ್ಯ ಇಂತಹದ್ದೇ ಒಂದು ಪ್ರಸಂಗ ನಡೆದಿದ್ದು ಭೋಜ್‌ಪುರಿಯಲ್ಲಿ ಪವರ್ ಸ್ಟಾರ್ ಎಂದೇ ಕರೆಯಲ್ಪಡುವ ಪವನ್ ಸಿಂಗ್ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ವ್ಯಕ್ತಿಯೊಬ್ಬನನ್ನು ಹೊಡೆಯಲು ಮುಂದಾಗಿದ್ದಾರೆ.
ಹೌದು, ಪವನ್ ಸಿಂಗ್ ಭೋಜ್‌ಪುರಿಯ ಪವರ್ ಸ್ಟಾರ್. ''ಪ್ರತಿಗ್ಯಾ''.. ''ಸತ್ಯ''.. ''ಗದ್ದಾರ್''.. ''ವಾಟೆಂಡ್''.. ''ಭೋಜ್‌ಪುರಿಯಾ ರಾಜಾ''.. ಹೀಗೆ ಹಲವು ಚಿತ್ರಗಳ ಮೂಲಕ ಉತ್ತರ ಪ್ರದೇಶ ಮತ್ತು ಬಿಹಾರದ ಸುತ್ತ ಮುತ್ತ ಜನರ ಹೃದಯ ಗೆದ್ದ ಪವನ್ ಸಿಂಗ್ ರಾಜಕಾರಣಿ ಕೂಡ ಹೌದು. ಗಾಯಕ ಕೂಡ ಹೌದು.
ಇಂಥಾ ಪವನ್ ಸಿಂಗ್ ಜೊತೆ ಭೋಜ್‌ಪುರಿಯ ನಾಯಕಿ ಮಹಿಮಾ ಸಿಂಗ್ ಹೆಸರು ತಳುಕು ಹಾಕಿಕೊಂಡಿದೆ. ಮಹಿಮಾ ಸಿಂಗ್ ಜೊತೆ ಸದ್ದಿಲ್ಲದೇ ಪವನ್ ಸಿಂಗ್ ಮೂರನೇ ಮದುವೆಯಾಗಿದ್ದಾರೆ ಎನ್ನುವ ಪುಕಾರು ಹಬ್ಬಿದೆ.
ಇದಕ್ಕೆ ಪೂರಕವಾಗಿ ಈ ವರ್ಷಾರಂಭದಲ್ಲಿ ನಡೆದ ಪವನ್ ಸಿಂಗ್ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಮಹಿಮಾ ಸಿಂಗ್ ಕಾಣಿಸಿಕೊಂಡಿದ್ದರು. ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ಪವನ್ ಸಿಂಗ್ ಅವರನ್ನು ಸಂಭಾಳಿಸುತ್ತಿದ್ದರು. ಇನ್ನು ಈ ಬರ್ತ್‌ಡೇಯಲ್ಲಿ ಮಹಿಮಾ ಹಣೆಯ ಮೇಲೆ ಕುಂಕುಮ ಬೇರೆ ಇತ್ತು.
ಈ ಹಿನ್ನೆಲೆ ಹಲವರಲ್ಲಿ ಇವರ ಸಂಬಂಧದ ಕುರಿತು ಅನುಮಾನ ಇದೆ. ಕಳೆದ ಎರಡು ಮೂರು ವಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ.
ಹೀಗಿರುವಾಗ ಪವನ್ ಸಿಂಗ್ ಲಕ್ನೋದಲ್ಲಿ ಗಾಯಕ ಗುಂಜನ್ ಸಿಂಗ್ ಹುಟ್ಟುಹಬ್ಬದ ಪಾರ್ಟಿಗೆ ತಮ್ಮ ತಾಯಿ ಜೊತೆ ಬಂದಿದ್ದರು. ಅಚ್ಚರಿ ಎಂಬಂತೆ ಮಹಿಮಾ ಸಿಂಗ್ ಕೂಡ ಜೊತೆಯಲ್ಲಿದ್ದರು. ಕೈ ಕೈ ಹಿಡಿದುಕೊಂಡೇ ಬಂದ ಇಬ್ಬರು ಪಾರ್ಟಿಯಲ್ಲಿ ಹಾಡಿದರು. ಜೊತೆಯಲ್ಲಿಯೇ ಕುಣಿದರು.
ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ಮಹಿಮಾ ಸಿಂಗ್, ಪವನ್ ಸಿಂಗ್‌ನ ಮೂರನೇ ಪತ್ನಿ ಎಂದು ಕೂಗಿದ್ದಾನೆ. ಈ ಮಾತು ಕೇಳಿದ ಕೂಡಲೇ ಕೆರಳಿದ ಪವನ್ ಸಿಂಗ್ ಆ ವ್ಯಕ್ತಿಯತ್ತ ನುಗ್ಗಿದ್ದಾರೆ. ಬಹು ದಿನಗಳಿಂದ ಇದೇ ಮಾತು ಕೇಳಿ ಬರುತ್ತಿದೆ ಎಂದು ತಾಳ್ಮೆ ಕಳೆದುಕೊಂಡು ಆ ವ್ಯಕ್ತಿಯನ್ನು ಹೊಡೆಯಲು ಮುಂದಾಗಿದ್ದಾರೆ. ಆ ವ್ಯಕ್ತಿಯ ಅದೃಷ್ಟ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡ ಬಾಡಿಗಾರ್ಡ್‌ಗಳು ಕೂಡಲೇ ಮಧ್ಯ ಪ್ರವೇಶ ಆ ವ್ಯಕ್ತಿಯನ್ನು ಹೊರಗಡೆ ಎಳೆದೊಯ್ದಿದ್ದಾರೆ.
ಅಂದ್ಹಾಗೇ ಪವನ್ ಸಿಂಗ್‌ಗೆ ಈಗಾಗಲೇ ಎರಡು ಮದುವೆಯಾಗಿವೆ. 2014ರಲ್ಲಿ ನೀಲಂ ಸಿಂಗ್ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಮೂರೇ ತಿಂಗಳಿಗೆ ನೀಲಂ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ನೀಲಂ ನಿಧನದ ನಂತರ 2018ರಲ್ಲಿ ಜ್ಯೋತಿ ಸಿಂಗ್ ಅವರನ್ನು ಪವನ್ ಸಿಂಗ್ ಮದುವೆಯಾಗಿದ್ದರು.ಆದರೆ ಈ ಸಂಬಂಧ ಕೇವಲ ನಾಲ್ಕೇ ವರ್ಷಕ್ಕೆ ಹಳಸಿತ್ತು. 2022ರಿಂದ ಶುರುವಾದ ಇವರ ದಾಂಪತ್ಯದ ಕಲಹ ಇವತ್ತಿನವರೆಗೆ ಮುಂದುವರೆದಿದೆ.
ಎರಡು ಬಾರಿ ಬಲವಂತದಿಂದ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪದಿಂದ ಹಿಡಿದು ಪವನ್ ಸಿಂಗ್ ಅವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನ ಮಾಡಿರುವದಾಗಿನವರೆಗೆ ಹಲವು ಆರೋಪಗಳನ್ನು ಜ್ಯೋತಿ ಸಿಂಗ್ ತಮ್ಮ ಪತಿ ಪವನ್ ಸಿಂಗ್ ಅವರ ಮೇಲೆ ಮಾಡಿದ್ದಾರೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ.
ಸದ್ಯ ಪವನ್ ಸಿಂಗ್ ಆ ವ್ಯಕ್ತಿಯ ಮೇಲೆ ಹಲ್ಲೆಗೆ ಮುಂದಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪವನ್ ಸಿಂಗ್ ಮತ್ತು ಮಹಿಮಾ ಸಿಂಗ್ ಹೇಗೆ ಪ್ರತಿಕ್ರಿಯಿಸುತ್ತಾರೆ..? ನಿಜಕ್ಕೂ ಸದ್ದಿಲ್ಲದೇ ಇಬ್ಬರ ಮದುವೆ ಆಗಿದೆಯಾ ಎನ್ನುವುದಕ್ಕೆ ಉತ್ತರ ಮುಂಬರುವ ದಿನಗಳಲ್ಲಿ ಸಿಗುವ ನಿರೀಕ್ಷೆ ಇದೆ.


Click it and Unblock the Notifications











