For Quick Alerts
  ALLOW NOTIFICATIONS  
  For Daily Alerts

  ಕೊಹ್ಲಿ, ಅಕ್ಷಯ್ ಕುಮಾರ್ ಹಾಗೂ ಇತರರು: ಯಾರ ಬ್ರ್ಯಾಂಡ್ ಮೌಲ್ಯ ಎಷ್ಟು ಕೋಟಿ?

  |

  ಬಾಲಿವುಡ್ ಹಾಗೂ ಕ್ರಿಕೆಟ್ ಎಂಬ ಸಾವಿರಾರು ಕೋಟಿ ಮೌಲ್ಯದ 'ಉದ್ಯಮ'ವುಳ್ಳ ಭಾರತದಲ್ಲಿ ಈ ಎರಡು ರಂಗಕ್ಕೆ ಸೇರಿದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ತಾರಾ ಮೌಲ್ಯ ಅಥವಾ ಬ್ರ್ಯಾಂಡ್ ಮೌಲ್ಯವಿದೆ. ಈ ಬ್ರ್ಯಾಂಡ್ ಮೌಲ್ಯವನ್ನು ಲೆಕ್ಕ ಹಾಕಿ ವರದಿ ಪ್ರಕಟಿಸಿದೆ ಡಫ್ ಆಂಡ್ ಫಿಲಫ್ಸ್ ಸಂಸ್ಥೆ.

  'ಸೆಲೆಬ್ರಿಟಿ ಬ್ರ್ಯಾಂಡ್ ವಾಲ್ಯುವೇಶನ್ ಸ್ಟಡಿ-2020' ಹೆಸರಿನಲ್ಲಿ ಡಫ್ ಆಂಡ್ ಫಿಲಫ್ಸ್ ವರದಿಯೊಂದನ್ನು ಪ್ರಕಟಿಸಿದ್ದು, ಭಾರತದ ಕ್ರಿಕೆಟ್ ಹಾಗೂ ಬಾಲಿವುಡ್‌ನ ಸೆಲೆಬ್ರಿಟಿಗಳಲ್ಲಿ ಯಾರ ಬ್ರ್ಯಾಂಡ್ ಮೌಲ್ಯ ಎಷ್ಟು ಎಂದು ಬಹಿರಂಗಗೊಳಿಸಿದೆ.

  ವರ್ಷಕ್ಕೆ ಅತಿ ಹೆಚ್ಚು ಸಂಭಾವನೆ ಗಳಿಸುವ ಭಾರತದ ನಟರಲ್ಲಿ ಮೊದಲ ಸ್ಥಾನದಲ್ಲಿರುವ ಅಕ್ಷಯ್ ಕುಮಾರ್ ಅವರನ್ನು ಹಿಂದಕ್ಕೆ ತಳ್ಳಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಹೆಚ್ಚು ಬ್ರ್ಯಾಂಡ್ ಮೌಲ್ಯವುಳ್ಳ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ಹಾಗಿದ್ದರೆ ಯಾರಾ ಬ್ರ್ಯಾಂಡ್ ಮೌಲ್ಯ ಎಷ್ಟು ಕೋಟಿ? ಮುಂದಿದೆ ಮಾಹಿತಿ.

  ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯವೆಷ್ಟು?

  ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯವೆಷ್ಟು?

  ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಮೌಲ್ಯ 237 ಮಿಲಿಯನ್ ಡಾಲರ್. ಭಾರತೀಯ ರುಪಾಯಿ ಲೆಕ್ಕದಲ್ಲಿ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯ 1726 ಕೋಟಿಗೂ ಹೆಚ್ಚು. ಅತಿ ಹೆಚ್ಚು ಬ್ರ್ಯಾಂಡ್ ಮೌಲ್ಯ ಹೊಂದಿರುವ ಭಾರತದ ಸೆಲೆಬ್ರಿಟಿ ಆಗಿ ಸತತ ನಾಲ್ಕನೇ ವರ್ಷ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

  ಎರಡನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್

  ಎರಡನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್

  ವಿರಾಟ್ ಕೊಹ್ಲಿ ನಂತರ ಎರಡನೇ ಸ್ಥಾನದಲ್ಲಿರುವುದು ನಟ ಅಕ್ಷಯ್ ಕುಮಾರ್. ಈ ನಟನ ಬ್ರ್ಯಾಂಡ್‌ ಮೌಲ್ಯ 859 ಕೋಟಿ ರುಪಾಯಿಗೂ ಹೆಚ್ಚು. ಅಕ್ಷಯ್ ನಂತರದ ಸ್ಥಾನದಲ್ಲಿ ನಟ ರಣ್ವೀರ್ ಸಿಂಗ್ ಇದ್ದು, ರಣ್ವೀರ್‌ ಸಿಂಗ್ ರ ಬ್ರ್ಯಾಂಡ್ ಮೌಲ್ಯ 742 ಕೋಟಿ ರುಪಾಯಿಗೂ ಹೆಚ್ಚು.

  ರೋಹಿತ್ ಶರ್ಮಾ ಗೆ ಎಷ್ಟನೇ ಸ್ಥಾನ?

  ರೋಹಿತ್ ಶರ್ಮಾ ಗೆ ಎಷ್ಟನೇ ಸ್ಥಾನ?

  ವಿಶೇಷವೆಂದರೆ ವಿರಾಟ್ ಕೊಹ್ಲಿ ಹೊರತುಪಡಿಸಿ ಇನ್ನಾವ ಕ್ರಿಕೆಟಿಗರೂ ಸಹ ಟಾಪ್ ಹತ್ತರ ಪಟ್ಟಿಯಲ್ಲಿಲ್ಲ. ಕ್ರಿಕೆಟಿಗ ರೋಹಿತ್ ಶರ್ಮಾ 17 ನೇ ಸ್ಥಾನದಲ್ಲಿದ್ದಾರೆ. ಇನ್ನು ನಟ ಟೈಗರ್ ಶ್ರಾಫ್ 15ನೇ ಸ್ಥಾನದಲ್ಲಿ, ನಟ ಕಾರ್ತಿಕ್ ಆರ್ಯನ್ 20 ನೇ ಸ್ಥಾನದಲ್ಲಿದ್ದಾರೆ.

  ಸಂಜಯ್ ದತ್ ದಾಂಪತ್ಯದಲ್ಲಿ ಮತ್ತೆ ಬಿರುಕು ಮೂಡಿದ್ಯಾ..? | Sanjay Dutt | Manyata Sanjay Dutt
  ಆಯುಷ್ಮಾನ್ ಖುರಾನಾ ಮೌಲ್ಯ ಹೆಚ್ಚಿದೆ

  ಆಯುಷ್ಮಾನ್ ಖುರಾನಾ ಮೌಲ್ಯ ಹೆಚ್ಚಿದೆ

  ನಟ ಆಯುಷ್ಮಾನ್ ಖುರಾನ ಆಶ್ಚರ್ಯಕರ ರೀತಿಯಲ್ಲಿ ಆರನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷವಷ್ಟೆ ಅವರು ಬ್ರ್ಯಾಂಡ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಷ್ಟು ಶೀಘ್ರವಾಗಿ ಅವರು ಟಾಪ್ 10 ರ ಒಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಬ್ರ್ಯಾಂಡ್ ಮೌಲ್ಯ 209 ಕೋಟಿ.

  English summary
  Virat Kohli,Akshay Kumar, Rohit Sharma and many Indian celebrities brand value report published by Duff And Phelps.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X