For Quick Alerts
  ALLOW NOTIFICATIONS  
  For Daily Alerts

  ಕಿಶೋರ್ ಕುಮಾರ್ ಮನೆಯನ್ನು ರೆಸ್ಟೋರೆಂಟ್ ಮಾಡಲಿರುವ ಅನುಷ್ಕಾ- ವಿರಾಟ್ ದಂಪತಿ!

  |

  ಏಷ್ಯಾ ಕಪ್‌ ಸರಣಿಯಲ್ಲಿ ಬ್ಯುಸಿ ಇರುವ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ದಂಪತಿ ಹೊಸ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಈ ದಂಪತಿ ಹೊಸ ಪ್ರಾಪರ್ಟಿ ವಿಚಾರವಾಗಿ ಸುದ್ದಿಯಾಗಿದ್ದಾರೆ.

  ಫಾರ್ಮ್ ಹೌಸ್ ಜೊತೆಗೆ ಹೊಸದೊಂದು ರೆಸ್ಟೋರೆಂಟ್ ತೆರೆಯಲು ಈ ಜೋಡಿ ಮುಂದಾಗಿದೆ. ಅನುಷ್ಕಾ ಮತ್ತು ವಿರಾಟ್ ದಂಪತಿ ಅತ್ಯಂತ ದುಬಾರಿ ಬೆಲೆಯ ಫಾರ್ಮ್ ಹೌಸ್ ನಿರ್ಮಾಣಕ್ಕಾಗಿ, ಜಾಗ ಖರೀದಿ ಮಾಡಿದ್ದಾರೆ. ಜೊತೆಗೆ ಈ ಜೋಡಿ ಹೊಸ ರೆಸ್ಟೋರೆಂಟ್ ತೆರೆಯಲು ಯೋಜನೆ ಮಾಡಿದೆ.

  Anushka Sharma: ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾAnushka Sharma: ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ

  ಇವರ ರೆಸ್ಟೋರೆಂಟ್ ಬಗ್ಗೆ ವಿಶೇಷವಾದ ವಿಚಾರವೊಂದು ಈಗ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇವರ ಈ ಹೊಸ ರೆಸ್ಟೋರೆಂಟ್‌ಗೂ ಮತ್ತು ಮೇರು ಗಾಯಕ ಕಿಶೋರ್ ಕುಮಾರ್‌ಗೂ ಒಂದು ನಂಟಿದೆ. ಅದರ ಬಗ್ಗೆಯೇ ಈಗ ಸುದ್ದಿ ಹರಿದಾಡುತ್ತಿದೆ. ಅದೇನು ಎನ್ನುವುದನ್ನು ಮುಂದೆ ಓದಿ....

  ಮುಂಬೈನಲ್ಲಿ ರೆಸ್ಟೊರೆಂಟ್!

  ಮುಂಬೈನಲ್ಲಿ ರೆಸ್ಟೊರೆಂಟ್!

  ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೋಹ್ಲಿ ಕ್ರಿಕೆಟ್ ಮತ್ತು ಸಿನಿಮಾಗಳಲ್ಲಿ ಮಾತ್ರ ಬ್ಯುಸಿಯಾಗಿಲ್ಲ. ಇವರು ಬೇರೆ ಬೇರೆ ಬ್ಯುಸಿನೆಸ್‌ಗಳಲ್ಲೂ ಸಕ್ರಿಯಾ. ವಿರಾಟ್ ಕೋಹ್ಲಿ ಅವರದ್ದೇ ಆದ ರೆಸ್ಟೋರೆಂಟ್ ಇದೆ. 'ಒನ್8 ಕಮ್ಯೂನ್' ಎನ್ನುವ ರೆಸ್ಟೋರೆಂಟ್ ಇದೆ. ಈಗಾಗಲೇ ಇದರ ಶಾಖೆಗಳು ಮುಂಬೈ ಮತ್ತು ಪುಣೆಯಲ್ಲಿ ಇವೆ. ಇನ್ನು ಇದು ಈಗ ಮುಂಬೈಗೂ ಬರ್ತಿದೆ. ಇದಕ್ಕೂ ಬಾಲಿವುಡ್‌ಗೂ ಒಂದು ನಂಟಿದೆ.

  ಜಗತ್ತು ನಮ್ಮನ್ನು ಅರ್ಥ ಮಾಡಿಕೊಳ್ಳಲ್ಲ: ಕೊಹ್ಲಿ ಪತ್ನಿ ಅನುಷ್ಕಾ ಬೇಸರಜಗತ್ತು ನಮ್ಮನ್ನು ಅರ್ಥ ಮಾಡಿಕೊಳ್ಳಲ್ಲ: ಕೊಹ್ಲಿ ಪತ್ನಿ ಅನುಷ್ಕಾ ಬೇಸರ

  ಕಿಶೋರ್ ಕುಮಾರ್ ಮನೆಯೇ ರೆಸ್ಟೋರೆಂಟ್!

  ಕಿಶೋರ್ ಕುಮಾರ್ ಮನೆಯೇ ರೆಸ್ಟೋರೆಂಟ್!

  ಹೆಸರಾಂತ ಗಾಯಕ ದಿವಂಗತ ಕಿಶೋರ್ ಕುಮಾರ್ ಮನೆಯ ಒಂದು ಭಾಗವನ್ನು ವಿರಾಟ್ ಕೋಹ್ಲಿ ಭೋಗ್ಯಕ್ಕೆ ತೆಗೆದುಕೊಂಡಿದ್ದಾರಂತೆ. 5 ವರ್ಷ ಈ ಜಾಗವನ್ನು ಲೀಸ್‌ಗೆ ಹಾಕಿಸಿಕೊಂಡಿದ್ದಾರಂತೆ. ಇಲ್ಲಿ ಅವರು ತಮ್ಮ ರೆಸ್ಟೋರೆಂಟ್‌ನ ಒಂದು ಶಾಖೆಯನ್ನು ತೆರೆಯಲು ಯೋಜನೆ ರೂಪಿಸಿದ್ದಾರಂತೆ. ಸದ್ಯದಲ್ಲಿಯೇ, ರೆಸ್ಟೋರೆಂಟ್ 'ಒನ್8 ಕಮ್ಯೂನ್' ಯೋಜನೆಗಳು ಅಂತಿಗೊಳ್ಳಲಿವೆ ಎಂದು ಕಿಶೋರ್ ಕುಮಾರ್ ಕುಟುಂಬಸ್ಥರು ಖಚಿತ ಪಡಿಸಿದ್ದಾರೆ.

  ಅನುಷ್ಕಾ- ವಿರಾಟ್ ಫಾರ್ಮ್ ಹೌಸ್ ಖರೀದಿ!

  ಅನುಷ್ಕಾ- ವಿರಾಟ್ ಫಾರ್ಮ್ ಹೌಸ್ ಖರೀದಿ!

  ಅಲಿಬಾಘ್‌ನಲ್ಲಿ ಫಾರ್ಮ್‌ ಹೌಸ್‌ ಒಂದನ್ನು ಖರೀದಿಸಿದ್ದಾರೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ದಂಪತಿ. ಗಣೇಶ ಚತುರ್ಥಿ ಹಬ್ಬದ ದಿನವೇ ಈ ಫಾರ್ಮ್‌ ಹೌಸನ್ನು ಖರೀದಿ ಮಾಡಿದ್ದಾರೆ. ಎಂಟು ಎಕರೆ ವ್ಯಾಪ್ತಿಯನ್ನು ಹೊಂದಿರುವ ಫಾರ್ಮ್‌ ಹೌಸ್‌ ಇದಾಗಿದ್ದು ಒಟ್ಟೂ ಮೌಲ್ಯ 19.24 ಕೋಟಿ ರೂಪಾಯಿಗಳಾಗಿದ್ದು, ರಿಜಿಸ್ಟ್ರೇಷನ್‌ಗೆಂದೇ 1.15 ಕೋಟಿ ರೂ ಕಟ್ಟಿದ್ದಾರೆ. ರೂ 3.35 ಲಕ್ಷ ಅಂಚೆ ಮೌಲ್ಯವನ್ನೂ ಪಾವತಿಸಿದ್ದಾರೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ತಿಳಿಸಿದೆ.

  ದೀಪಿಕ- ರಣ್ವೀರ್ ಕೂಡ ಫಾರ್ಮ್ ಹೌಸ್!

  ದೀಪಿಕ- ರಣ್ವೀರ್ ಕೂಡ ಫಾರ್ಮ್ ಹೌಸ್!

  ವಿಶೇಷ ಎಂದರೆ ಇದರ ಪಕ್ಕದಲ್ಲೇ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್‌ ಕೂಡ ಈ ಹಿಂದೆ ಫಾರ್ಮ್‌ ಹೌಸ್‌ ಖರೀದಿಸಿದ್ದರು. ಕಳೆದ ತಿಂಗಳು ಇದೇ ಪ್ರದೇಶದಲ್ಲಿ ರಣ್ವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಫಾರ್ಮ್‌ ಹೌಸ್‌ ಗೃಹ ಪ್ರವೇಶ ಮಾಡಿದ್ದರು. 2021ರಲ್ಲಿ ದೀಪಿಕಾ ಮತ್ತು ರಣ್ವೀರ್ ಜೋಡಿ ಐದು ಬಿಎಚ್‌ಕೆ ನಿವಾಸವನ್ನು ಬರೋಬ್ಬರಿ 22 ಕೋಟಿ ರೂ. ಕೊಟ್ಟು ಖರೀದಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಇವರಷ್ಟೇ ಅಲ್ಲದೇ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್‌ - ಗೌರಿ ಖಾನ್‌ ದಂಪತಿ ಕೂಡ ಅಲಿಬಾಘ್‌ನಲ್ಲಿ ಫಾರ್ಮ್‌ ಹೌಸ್‌ ಹೊಂದಿದ್ದಾರೆ.

  English summary
  Virat Kohli And Anusha Sharma All Set To Open Restaurant In Late Singer, Kishore Kumar's Mumbai Home, know more,
  Friday, September 2, 2022, 19:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X