ಇಂದು ಕೊಹ್ಲಿ ಅನುಷ್ಕಾ ಆರತಕ್ಷತೆ : ಪ್ರಧಾನಿ ಮೋದಿಗೆ ಆಮಂತ್ರಣ ನೀಡಿದ ನವ ಜೋಡಿ
Recommended Video

ಇಟಲಿಯಲ್ಲಿ ವಿವಾಹವಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತಕ್ಕೆ ಮರಳಿದ್ದಾರೆ. ಅವರ ಆರತಕ್ಷತೆ ಕಾರ್ಯಕ್ರಮ ಇಂದು ಸಂಜೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನವ ಜೋಡಿ ಆಹ್ವಾನ ನೀಡಿದೆ.
ಪ್ರಧಾನಿ ಮೋದಿ ಅವರನ್ನು ನಿನ್ನೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬೇಟಿ ಮಾಡಿ ತಮ್ಮ ಆರತಕ್ಷತೆ ಕಾರ್ಯಕ್ರಮ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಅವರನ್ನು ಸ್ವಾಗತ ಮಾಡಿದ್ದಾರೆ. ಮೋದಿ ಕೂಡ ಹೊಸದಾಗಿ ಮದುವೆ ಆದ ಇಬ್ಬರಿಗೆ ಶುಭ ಕೋರಿದ್ದಾರೆ. ಜೊತೆಗೆ ಪ್ರಧಾನಿಗಳ ಜೊತೆ ವಿರಾಟ್ ಅನುಷ್ಕಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಅಂದಹಾಗೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಆರತಕ್ಷತೆ ಇಂದು ಮತ್ತು ಡಿಸೆಂಬರ್ 26ರಂದು ಎರಡು ದಿನಗಳು ನಡೆಯಲಿದೆ. ಇಂದು ದೆಹಲಿಯಲ್ಲಿ ಮತ್ತು ಮುಂದಿನ ಮಂಗಳವಾರ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ. ಇಂದು ರಾತ್ರಿ 8.30ಕ್ಕೆ ಕಾರ್ಯಕ್ರಮ ಶುರು ಆಗಲಿದ್ದು, ಬಾಲಿವುಡ್ ಚಿತ್ರರಂಗ ಮತ್ತು ಭಾರತ ಕ್ರಿಕೆಟ್ ತಂಡದ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇಟಲಿಯಲ್ಲಿ ಮದುವೆ ಆದ ಕಾರಣ ಇಂದು ಮತ್ತು ಮುಂದಿನ ಮಂಗಳವಾರ ನಡೆಯುವ ಆರತಕ್ಷತೆಗೆ ಹೆಚ್ಚಿನ ಸಂಖ್ಯೆಯ ಆಪ್ತರು ಸ್ನೇಹಿತರು ಆಗಮಿಸಿಲಿದ್ದಾರೆ. ಇಟಲಿಯಲ್ಲಿ ಮದುವೆ ಆಗಿ ಹನಿಮೂನ್ ಮುಗಿಸಿದ ಈ ಜೋಡಿಗೆ ಈಗ ಆರತಕ್ಷತೆಯ ಸಂಭ್ರಮ ಶುರುವಾಗಿದೆ.


Click it and Unblock the Notifications











