ಮಂಬೈ ಸಮೀಪ 8 ಎಕರೆ ಜಮೀನು ಖರೀದಿಸಿದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ: ಬೆಲೆ ಎಷ್ಟು?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬಾಲಿವುಡ್‌ ಹಾಗೂ ಕ್ರಿಕೆಟ್ ಜಗತ್ತಿನ ಟಾಪ್ ಸೆಲೆಬ್ರಿಟಿಗಳು. ಇಬ್ಬರೂ ತಮ್ಮ-ತಮ್ಮ ವೃತ್ತಿಗಳಲ್ಲಿ ಟಾಪ್ ಸ್ಥಾನದಲ್ಲಿರುವವರು.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವಿವಾಹವಾಗಿ ಐದು ವರ್ಷಗಳಾಗಿವೆ, ಇಬ್ಬರಿಗೂ ಮುದ್ದಾದ ಮಗಳು ಜನಿಸಿದ್ದಾಳೆ. ಈ ಜೋಡಿ ತಮ್ಮತಮ್ಮ ವೃತ್ತಿ ಜೀವನದಲ್ಲಿ ಸಕ್ರಿಯರಾಗಿರುವ ಜೊತೆಗೆ ಹಲವು ಉದ್ದಿಮೆಗಳಲ್ಲಿಯೂ ತೊಡಗಿಕೊಂಡಿದ್ದಾರೆ.

ವ್ರೋಂಗ್ ಹೆಸರಿನ ಸ್ವಂತ ಬ್ರ್ಯಾಂಡ್ ಹೊಂದಿರುವ ವಿರಾಟ್ ಕೊಹ್ಲಿ ಅದರ ಜೊತೆಗೆ ಎಲೆಕ್ಟ್ರಾನಿಕ್ ಗೆಜೆಟ್‌ ಉತ್ಪಾದನಾ ಸಂಸ್ಥೆಯೊಂದನ್ನು ಸಹ ಹೊಂದಿದ್ದಾರೆ. ಇನ್ನು ಅನುಷ್ಕಾ ಶರ್ಮಾ ಸಹ ನಿರ್ಮಾಣ ಸಂಸ್ಥೆಯ ಜೊತೆಗೆ ಒಂದು ಪ್ರಮುಖ ಬ್ಯೂಟಿ ಪ್ರಾಡೆಕ್ಟ್ ಉತ್ಪಾದನಾ ಸಂಸ್ಥೆಯಲ್ಲಿ ಬಂಡವಾಳ ತೊಡಗಿಸಿದ್ದಾರೆ. ಜೊತೆಗೆ ಕೆಲವು ಮೌಲ್ಯಯುತ ಆಸ್ತಿಗಳ ಮೇಲೂ ಈ ಜೋಡಿ ಬಂಡವಾಳ ಹೂಡಿದೆ. ಇತ್ತೀಚೆಗೆ ತಮ್ಮ ಆಸ್ತಿಯ ಪಟ್ಟಿಗೆ ಎಂಟು ಎಕರೆ ಫಾರ್ಮ್‌ ಹೌಸ್ ಅನ್ನು ಸೇರಿಸಿಕೊಂಡಿದೆ ಈ ಜೋಡಿ.

Virat Kohli And Anushka Sharma Purchased 8 Acre Land Near Mumbais Alibhag

ಮುಂಬೈನ ಐಶಾರಾಮಿ ಏರಿಯಾ ಆಲಿಬಾಗ್‌ನ ತುಸು ಹೊರವಲಯದಲ್ಲಿ ಎಂಟು ಎಕರೆ ಕೃಷಿ ಭೂಮಿಯನ್ನು ಅನುಷ್ಕಾ ಶೆಟ್ಟಿ ಹಾಗೂ ವಿರಾಟ್ ಕೊಹ್ಲಿ ಖರೀದಿಸಿದ್ದಾರೆ. ಈ ಕೃಷಿ ಭೂಮಿಯಲ್ಲಿ ಫಾರ್ಮ್‌ ಹೌಸ್ ಸಹ ಈಗಾಗಲೇ ಇದೆ. ಈ ಎಂಟು ಎಕರೆ ಜಾಗಕ್ಕೆ ಈ ದಂಪತಿ 19.20 ಕೋಟಿ ಹಣ ತೆತ್ತಿದ್ದಾರೆ.

ಈಗಾಗಲೇ ಮುಂಬೈನಲ್ಲಿ ಕೆಲವು ಮೌಲ್ಯಯುತ ಆಸ್ತಿಗಳನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶೆಟ್ಟಿ ಹೊಂದಿದ್ದಾರೆ. ಖಾಸಗಿ ಫ್ಲ್ಯಾಟ್‌, ಬಾಡಿಗೆ ಅಪಾರ್ಟ್‌ಮೆಂಟ್‌ಗಳನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶೆಟ್ಟಿ ಹೊಂದಿದ್ದಾರೆ. ಇದೀಗ ಕೃಷಿ ಜಮೀನು ಸಹ ಖರೀದಿ ಮಾಡಿದ್ದಾರೆ.

ಆರು ತಿಂಗಳ ಹಿಂದೆ ವಿರಾಟ್ ಹಾಗೂ ಅನುಷ್ಕಾ ಈ ಜಾಗಕ್ಕೆ ಬಂದು ಜಾಗವನ್ನು ವೀಕ್ಷಿಸಿ ಡೀಲ್ ಲಾಕ್ ಮಾಡಿದ್ದರು. ವಿರಾಟ್ ಕೊಹ್ಲಿ ಪ್ರಸ್ತುತ ದುಬೈನಲ್ಲಿ ಏಷ್ಯಾ ಕಪ್ ಆಡುತ್ತಿರುವ ಕಾರಣ ಅನುಷ್ಕಾ ಶರ್ಮಾ ಮುಂದಾಳತ್ವದಲ್ಲಿ ಈ ಖರೀದಿ ನಡೆದಿದೆ.

ಅಲಿಭಾಗ್ ಹಾಗೂ ಸುತ್ತಮುತ್ತ ಹಲವು ಸೆಲೆಬ್ರಿಟಿಗಳು ಜಮೀನು ಖರೀದಿ ಮಾಡುತ್ತಿದ್ದಾರೆ. ದೀಪಿಕಾ-ರಣ್ವೀರ್ ಸಹ ಇದೇ ಪ್ರದೇಶದಲ್ಲಿ ಫ್ಲ್ಯಾಟ್ ಒಂದನ್ನು ಇತ್ತೀಚೆಗೆ ಖರೀದಿಸಿದ್ದಾರೆ. ಕ್ರಿಕೆಟಿಗ ರವಿಶಾಸ್ತ್ರಿಯೂ ಈ ಭಾಗದಲ್ಲಿ ಫ್ಲ್ಯಾಟ್ ಹೊಂದಿದ್ದಾರೆ.

More from Filmibeat

English summary
Virat Kohli and Anushka Sharma purchased 8 acre land near Mumbai's Alibhag. They Paid 19.20 crore rs for the property.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X