'ಧುರಂಧರ್'-2 ಸಿನಿಮಾ ನೋಡಿ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ ರಿವ್ಯೂ

ಬಾಕ್ಸಾಫೀಸ್‌ನಲ್ಲಿ 'ಧುರಂಧರ್-2' ಆರ್ಭಟ ಮುಂದುವರೆದಿದೆ. ಮತ್ತೊಂದು ಕಡೆ ಐಪಿಎಲ್ ಫೀವರ್ ಜೋರಾಗಿದೆ. ಐಪಿಎಲ್ ಆರ್ಭಟದ ನಡುವೆ ಕೂಡ ಆದಿತ್ಯಧರ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈ ಸ್ಪೈ ಥ್ರಿಲ್ಲರ್ ಸಿನಿಮಾ ಕ್ರೇಜ್ ಹೇಗಿದೆ ಅಂದ್ರೆ, ಐಪಿಎಲ್ ಟೂರ್ನಿ ನಡುವೆ ಕೂಡ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಸಿನಿಮಾ ವೀಕ್ಷಿಸಿದ್ದಾರೆ.

ವಿರಾಟ್ ಕೊಹ್ಲಿ ಈ ಬಾರಿ ಆರ್‌ಸಿಬಿ ತಂಡದ ಪರ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ತಮ್ಮ ಅದ್ಭುತ ಆಟದಿಂದ ತಂಡದ ಗೆಲುವಿಗೆ ನೆರವಾಗಿದ್ದರು. 2ನೇ ಪಂದ್ಯದಲ್ಲಿ ಚೆನ್ನೈ ಎದುರು ನಿರಾಸೆ ಮೂಡಿಸಿದ್ದರು. 3ನೇ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಕೊಹ್ಲಿ ಈ ನಡುವೆ ಪತ್ನಿ ಸಮೇತ 'ಧುರಂಧರ್-2' ಸಿನಿಮಾ ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದಂಪತಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Virat Kohli and Anushka Sharma watched and Praised Dhurandhar-2 Amid IPL Fever

ನಟಿ ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ "ಆದಿತ್ಯಧರ್ ನೀವು ಎಂತಹ ಅದ್ಭುತ ಚಿತ್ರ ಮಾಡಿದ್ದೀರಿ. ಸುಮಾರು 4 ಗಂಟೆಗಳ ಕಾಲಾವಧಿಯ ಸಿನಿಮಾ ಮಾಡಲು ತುಂಬಾ ದೃಢನಿಶ್ಚಯ ಬೇಕು. ಹಿಡಿದಿಟ್ಟುಕೊಳ್ಳುವ ಮತ್ತು ತಲ್ಲೀನಗೊಳಿಸುವ, ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವ ಸಿನಿಮಾ ನೋಡುಗರ ಗಮನವನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುತ್ತದೆ. ನೀವು ಅದ್ಭುತ ಮತ್ತು ಭರವಸೆಯ ಫಿಲ್ಮ್ ಮೇಕರ್.. ನೀವು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಇಂತಹ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದೀರಿ ರಣ್‌ವೀರ್ ಸಿಂಗ್. ಮಾಧವನ್, ರಾಮ್‌ಪಾಲ್, ರಾಕೇಶ್ ಬೇಡಿ ಸರ್ ಹೀಗೆ ಪ್ರತಿಯೊಬ್ಬರ ಅಭಿನಯವು ಪರಿಪೂರ್ಣವಾಗಿ ಮೂಡಿಬರುತ್ತದೆ. ನಿಮ್ಮಲ್ಲಿ ಯಾರೊಬ್ಬರನ್ನು ಹೊರತುಪಡಿಸಿ ಈ ಚಿತ್ರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲದೆ ಚಿತ್ರವು ಯೋಚಿಸಲಾಗದು. ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.

ಒಂದ್ಕಾಲದಲ್ಲಿ ಬಾಲಿವುಡ್ ಸ್ಟಾರ್ ನಟಿಯಾಗಿ ಅನುಷ್ಕಾ ಶರ್ಮಾ ಮಿಂಚಿದ್ದರು. ಮದುವೆ ಬಳಿಕ ಫ್ಯಾಮಿಲಿ, ಮಕ್ಕಳು ಎಂದು ಬ್ಯುಸಿಯಾಗಿಬಿಟ್ಟರು. ಪತಿ ಕೊಹ್ಲಿ ಜೊತೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗಾಗ್ಗೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ವಿರಾಟ್ ಆಟಕ್ಕೆ ಹುರಿದುಂಬಿಸುತ್ತಾರೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಜೋಡಿಯ ಚಿತ್ರದಲ್ಲಿ ಅನುಷ್ಕಾ ನಟಿಸುತ್ತಾರೆ ಎಂದು ಗುಲ್ಲಾಗಿದೆ.

Virat Kohli and Anushka Sharma watched and Praised Dhurandhar-2 Amid IPL Fever

ಸಿನಿಮಾ ನೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. "ಇಂದು 'ಧುರಂದರ್-2' ಚಿತ್ರವನ್ನು ನೋಡಿದೆ. ಭಾರತದಲ್ಲಿ ತಯಾರಿಸಿದ ಇಂತಹ ಸಿನಿಮೀಯ ಅನುಭವವನ್ನು ನಾನು ಎಂದಿಗೂ ನೋಡಿಲ್ಲ ಎಂದು ಧೈರ್ಯವಾಗಿ ಹೇಳ್ತೀನಿ. ಸಿನಿಮಾ ಇದು ಎಲ್ಲಾ ರೀತಿಯ ಭಾವನೆಗಳನ್ನು ಹೊರಹಾಕಿತು, ನಾನು ಸುಮಾರು 4 ಗಂಟೆಗಳ ಕಾಲ ಕಣ್ಣು ರೆಪ್ಪೆ ಮಿಟುಕಿಸಲಿಲ್ಲ. ಆದಿತ್ಯಧರ್ ನಿಮ್ಮ ಪ್ರತಿಭೆ ಮತ್ತು ಬದ್ಧತೆಯು ಸಿನಿಮಾದಲ್ಲಿ ಹೊಳೆಯುತ್ತಿದೆ, ನಿಮಗೆ ಹ್ಯಾಟ್ಸ್ ಆಫ್. ನೀವು ಒಬ್ಬ ಜೀನಿಯಸ್. ಎಲ್ಲಾ ನಟರು ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ರಣ್‌ವೀರ್ ಸಿಂಗ್ ಈ ಚಿತ್ರದ ನಂತರ ನೀವು ದೊಡ್ಡ ಹಂತಕ್ಕೆ ಏರಿದ್ದೀರಿ. ನಿಮ್ಮ ಅಭಿನಯ ಅದ್ಭುತವಾಗಿದೆ. ನಿಜಕ್ಕೂ ಅದ್ಭುತ" ಎಂದು ಪೋಸ್ಟ್ ಮಾಡಿದ್ದಾರೆ.

'ಧುರಂಧರ್'-2 ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಭಾರತದಲ್ಲೇ ಸಿನಿಮಾ 1023 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk ವರದಿ ಮಾಡಿದೆ. ಒಟ್ಟಾರೆ ಗ್ರಾಸ್ ಕಲೆಕ್ಷನ್ 1600 ಕೋಟಿ ರೂ. ದಾಟಿದೆ. ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 'ಧುರಂಧರ್'-2 ಈಗ 4ನೇ ಸ್ಥಾನಕ್ಕೇರಿದೆ. ಇನ್ನೊಂದು ವಾರದಲ್ಲಿ 'ಪುಷ್ಪ'-2 ದಾಖಲೆ ಮುರಿದು 3ನೇ ಸ್ಥಾನಕ್ಕೆ ಏರಲಿದೆ. ಬಾಹುಬಲಿ-2 ಕಲೆಕ್ಷನ್ ದಾಖಲೆಯನ್ನು ಮೀರಿಸುತ್ತಾ ಕಾದು ನೋಡಬೇಕಿದೆ.

More from Filmibeat

Read more about: Dhurandhar 2 anushka sharma
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X