For Quick Alerts
  ALLOW NOTIFICATIONS  
  For Daily Alerts

  ವಿರಾಟ್-ಅನುಷ್ಕಾ ಜೋಡಿಯ 'ಫ್ಲ್ಯಾಟ್' ನೋಡಿ

  By Bharath Kumar
  |
  ವಿರಾಟ್-ಅನುಷ್ಕಾ ಜೋಡಿಯ 'ಫ್ಲ್ಯಾಟ್' ನೋಡಿ

  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮದುವೆ ನಂತರ ತಮ್ಮ ಕನಸಿನ ಮನೆಯಲ್ಲಿ ಸಂಸಾರ ನಡೆಸುತ್ತಿದ್ದಾರೆ.

  ಸತತ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದ ವಿರಾಟ್ ಸದ್ಯ ಶ್ರೀಲಂಕಾ ತ್ರಿಕೋನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿರುವ ಅನುಷ್ಕಾ ಶರ್ಮಾ ಸದ್ಯ ಪತಿ ಜೊತೆಯಲ್ಲಿ ಕಾಲಕಳೆಯುತ್ತಿದ್ದಾರೆ.

  ಇದೀಗ, ಇವರಿಬ್ಬರು ಮುಂಬೈನಲ್ಲಿ ಖರೀದಿಸಿದ್ದ ಫ್ಲ್ಯಾಟ್ ನಲ್ಲಿ ಟೈಂಪಾಸ್ ಮಾಡ್ತಿದ್ದಾರೆ. 34 ಕೋಟಿ ವೆಚ್ಚದ ಐಷಾರಾಮಿ ಫ್ಲ್ಯಾಟ್ ನಿಂದ ಹೊರಗೆ ಹೇಗೆ ಕಾಣಿಸುತ್ತೆ ಎಂಬುದನ್ನ ಫೋಟೋ ಕ್ಲಿಕ್ ಮಾಡಿ ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.

  'ಕಜ್ರಾ ರೇ..' ಹಾಡಿಗೆ ಸೂಪರ್ ಸ್ಟೆಪ್ ಹಾಕಿದ ವಿರಾಟ್ ಕೋಹ್ಲಿ'ಕಜ್ರಾ ರೇ..' ಹಾಡಿಗೆ ಸೂಪರ್ ಸ್ಟೆಪ್ ಹಾಕಿದ ವಿರಾಟ್ ಕೋಹ್ಲಿ

  ಇತ್ತೀಚಿಗಷ್ಟೆ ಅನುಷ್ಕಾ ಶರ್ಮಾ ಅಭಿನಯಿಸಿದ್ದ 'ಪರಿ' ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರವನ್ನ ರಿಲೀಸ್ ಗೂ ಮೊದಲೇ ಪ್ರಿಮಿಯರ್ ಶೋ ಆಯೋಜಿಸಿ ವಿರಾಟ್ ಸಿನಿಮಾ ನೋಡಿದ್ದರು.

  ಅನುಷ್ಕಾ ಹೊಸ ಚಿತ್ರದ ಟ್ರೈಲರ್ ಗೆ ವಿರಾಟ್ ಮಾಡಿದ ಕಾಮೆಂಟ್ ಏನು?ಅನುಷ್ಕಾ ಹೊಸ ಚಿತ್ರದ ಟ್ರೈಲರ್ ಗೆ ವಿರಾಟ್ ಮಾಡಿದ ಕಾಮೆಂಟ್ ಏನು?

  ಅನುಷ್ಕಾ ಮತ್ತು ವಿರಾಟ್ ಜೋಡಿ ಕಳೆದ ಡಿಸೆಂಬರ್ 11 ರಂದು ಇಟಲಿಯಲ್ಲಿ ಮದುವೆಯಾಗಿದ್ದರು. ಇಬ್ಬರು ಖುಷಿ ಖುಷಿಯಿಂದ ಸಾಗುತ್ತಿದ್ದು, ಒಬ್ಬರ ವೃತ್ತಿಯನ್ನ ಮತ್ತೊಬ್ಬರು ಪ್ರೋತ್ರಾಹಿಸುವ ಗುಣ ಹೊಂದಿದ್ದಾರೆ. ಇದು ಸಹಜವಾಗಿ ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಮೆಚ್ಚುಗೆ ಗಳಿಸಿಕೊಂಡಿದೆ.

  English summary
  Virat Kohli recently took to his Instagram handle and posted a picture showing off the stunning sea view from his humble abode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X