ಪ್ರೆಗ್ನೆನ್ಸಿ ನಡುವೆಯು ರಾಮ ಲಲ್ಲಾ 'ಪ್ರಾಣ ಪ್ರತಿಷ್ಠಾ' ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಅನುಷ್ಕಾ ಶರ್ಮಾ

ಭಾರತೀಯ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಜನವರಿ 22 ರಂದು ನಡೆಯಲಿರುವ ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾನ 'ಪ್ರಾಣ ಪ್ರತಿಷ್ಠಾ' ಸಮಾರಂಭ ನಡೆಯಲಿದೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಮಮಂದಿರ 'ಪ್ರಾಣ ಪ್ರತಿಷ್ಠಾ' ಸಮಾರಂಭದಲ್ಲಿ ಪಾಲ್ಗೊಳ್ಳಲು ಈಗಾಗಲೇ ಹಲವು ಸೆಲಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಇದೇ ರೀತಿ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Virat Kohli and his wife Anushka sharma to attend Ram Temple Pran Pratishtha ceremony

ಪ್ರೆಗ್ನೆನ್ಸಿ ನಡುವೆಯು ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ಅನುಷ್ಕಾ ಶರ್ಮಾ

ಮಂಗಳವಾರ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಬಂದಿದ್ದು, ಇಬ್ಬರು ಸೆಲಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಟಿ ಅನುಷ್ಕಾ ಶರ್ಮಾ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೂ, ಕೂಡ ಕಾರ್ಯಕ್ರಮಕ್ಕೆ ಹೋಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಎರಡನೇ ಮಗುವಿನ ಬಗ್ಗೆ ಈ ಸೆಲಬ್ರಿಟಿ ಜೋಡಿ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ, ಅವರ ಫೋಟೋ ಮತ್ತು ವಿಡಿಯೋಗಳು ಹಲವು ಬಾರಿ ವೈರಲ್ ಆಗಿವೆ. ಬೆಂಗಳೂರಿನಲ್ಲಿ ಪಂದ್ಯ ನೋಡಲು ಬಂದಿದ್ದ ಅನುಷ್ಕಾ ಅವರ ವಿಡಿಯೋ ಸೋಸಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಬಳಿಕ ಒಂದು ಜಾಹೀರಾತಿನಲ್ಲಿಯೂ ಅನುಷ್ಕಾ ಬೇಬಿ ಬಂಪ್ ಕಾಣಿಸಿತ್ತು. ಇನ್ನು, ರಾಮಮಂದಿರ ಆಹ್ವಾನ ಸ್ವೀಕರಿಸುತ್ತಿರು ಫೋಟೋದಲ್ಲಿಯೂ ಅವರು ಗರ್ಭಿಣಿ ಎಂಬುದು ತಿಳಿಯುತ್ತಿದೆ.

Virat Kohli and his wife Anushka sharma to attend Ram Temple Pran Pratishtha ceremony

ಒಂದು ದಿನ ರಜೆ ತೆಗೆದುಕೊಂಡ ಕ್ರಿಕೆಟಿಗ ವಿರಾಟ್ ಕೊಹ್ಲಿ

ಪವಿತ್ರ ನಗರವಾದ ಉತ್ತರಪ್ರದೇಶದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಆಹ್ವಾನಿತರಾದ ಮೂರನೇ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ. ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿಗೆ ಆಹ್ವಾನ ನೀಡಿದ ನಂತರ, ಸಮಾರಂಭಕ್ಕೆ ಆಹ್ವಾನಿಸಿರುವ ಸೆಲಬ್ರಿಟಿ ಕ್ರಿಕೆಟಿಗರ ಪಟ್ಟಿಗೆ ವಿರಾಟ್ ಕೊಹ್ಲಿ ಸೇರಿದ್ದಾರೆ.

ಹೀಗಾಗಿಯೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿಯಲ್ಲಿ ನಿರತರಾಗಿರುವ ಟೀಮ್ ಇಂಡಿಯಾ ಶಿಬಿರದಿಂದ ವಿರಾಟ್ ಕೊಹ್ಲಿ ವಿರಾಮ ತೆಗೆದುಕೊಳ್ಳಲಿದ್ದಾರೆ. 5 ಪಂದ್ಯಗಳ ಸರಣಿಯು ಜನವರಿ 25 ರಂದು ಹೈದರಾಬಾದ್‌ನಲ್ಲಿ ಪ್ರಾರಂಭವಾಗಲಿದೆ. ಜನವರಿ 21 ರ ವಿರಾಟ್ ಕೊಹ್ಲಿ ಒಂದು ದಿನ ರಜೆ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ. ಅಯೋಧ್ಯೆಯ ರಾಮಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಅನುಮತಿ ನೀಡಿದೆ ಎನ್ನಲಾಗಿದೆ.

ಅಯೋಧ್ಯಾ ಸಮಾರಂಭಕ್ಕೆ ಆಹ್ವಾನಿತರ ವಿಶಿಷ್ಟ ಪಟ್ಟಿ

ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಆರೆಸ್ಸೆಸ್‌ನ ಹಿರಿಯ ಸದಸ್ಯ ಧನಂಜಯ್ ಸಿಂಗ್ ರಾಂಚಿಯಲ್ಲಿರುವ ಎಂಎಸ್ ಧೋನಿ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.

ಸಿನಿಮಾ ತಾರೆಯರ ಪೈಕಿ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ರಜನಿಕಾಂತ್, ಧನುಷ್, ಮೋಹನ್ ಲಾಲ್, ರಣಬೀರ್ ಕಪೂರ್, ಆಲಿಯಾ ಭಟ್, ಅಜಯ್ ದೇವಗನ್, ಪ್ರಭಾಸ್, ಯಶ್, ನಿಖಿಲ್ ಕುಮಾರಸ್ವಾಮಿ, ಅರುಣ್ ಗೋವಿಲ್ ಅವರಂತಹ ಚಲನಚಿತ್ರ ಮತ್ತು ಕಿರುತೆರೆ ಸೆಲೆಬ್ರಿಟಿಗಳು ಆಹ್ವಾನವನ್ನು ಸ್ವೀಕರಿಸಿದ್ದಾರೆ.

More from Filmibeat

English summary
Virat Kohli and Anushka sharma to attend Ram Temple Pran Pratishtha ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X