ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ವಿರಾಟ್ ಕೊಹ್ಲಿ ಕಾಳಜಿ: ವೈರಲ್ ಆಯ್ತು ವಿಡಿಯೋ
ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರಿಕೆಟ್ ಅಂಗಳದಲ್ಲಿ ಬಹಳ ಆಕ್ರಮಣಶೀಲತೆ ಪ್ರದರ್ಶಿಸುತ್ತಾರೆ. ಅಂಗಳದಲ್ಲಿ ಅವರಿಗೆ ಟಾಂಗ್ ಕೊಡುವ ಯಾರನ್ನೂ ಸುಮ್ಮನೆ ಬಿಟ್ಟಿಲ್ಲ ಕೊಹ್ಲಿ. ಮಾತು ಹಾಗೂ ಬ್ಯಾಟ್ ಎರಡರಿಂದಲೂ ಉತ್ತರ ಕೊಡುತ್ತಾರೆ ವಿರಾಟ್.
Recommended Video
ಸದಾ ಆಕ್ರಮಶೀಲ, ಸಿಟ್ಟಿನ ವ್ಯಕ್ತಿಯಂತೆ ಕಾಣುವ ವಿರಾಟ್ ಕೊಹ್ಲಿ, ತನ್ನ ಆತ್ಮೀಯರ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಾರೆ. ಅದರಲ್ಲಿಯೂ ಮುದ್ದಿನ ಮಡದಿ ಅನುಷ್ಕಾ ಶರ್ಮಾ ಬಗ್ಗೆಯಂತೂ ವಿರಾಟ್‌ಗೆ ಅತೀವ ಕಾಳಜಿ.
2017 ರಲ್ಲಿ ಅದ್ಧೂರಿಯಾಗಿ ವಿವಾಹವಾದ ಈ ಜೋಡಿ ಪ್ರಸ್ತುತ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ಪತ್ನಿ ಬಗ್ಗೆ ವಿರಾಟ್ ಸಹಜವಾಗಿಯೇ ಕಾಳಜಿ, ಪ್ರೀತಿ ಹೆಚ್ಚಿದೆ. ವಿರಾಟ್, ಅನುಷ್ಕಾ ಬಗ್ಗೆ ಕಾಳಜಿ ತೋರುತ್ತಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.

ದುಬೈನಲ್ಲಿರುವ ವಿರಾಟ್-ಅನುಷ್ಕಾ
ವಿರಾಟ್ ಕೊಹ್ಲಿ ಪ್ರಸ್ತುತ ದುಬೈ ನಲ್ಲಿ ಐಪಿಎಲ್ ಆಡುತ್ತಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಸಹ ದುಬೈಗೆ ಆಗಮಿಸಿದ್ದು, ವಿರಾಟ್‌ಗೆ ಬೆಂಬಲ ನೀಡುತ್ತಿದ್ದಾರೆ. ಆರ್‌ಸಿಬಿ ಬಹುತೇಕ ಪಂದ್ಯಗಳಿಗೆ ಕ್ರೀಡಾಂಗಣದಲ್ಲಿ ಹಾಜರಿದ್ದು, ಬೆಂಬಲ ನೀಡುತ್ತಿದ್ದಾರೆ ಅನುಷ್ಕಾ.

ಚೆನ್ನೈ-ಬೆಂಗಳೂರು ಮ್ಯಾಚ್ ದಿನ ನಡೆದ ಘಟನೆ
ಅಕ್ಟೋಬರ್ 25 ರಂದು ನಡೆದ ಚೆನ್ನೈ-ಬೆಂಗಳೂರು ಪಂದ್ಯಕ್ಕೂ ಅನುಷ್ಕಾ ಶರ್ಮಾ ಕ್ರೀಡಾಂಗಣಕ್ಕೆ ಹಾಜರಾಗಿದ್ದರು. ಅನುಷ್ಕಾ ಬರುವ ವೇಳೆಗೆ ತಮ್ಮ ತಂಡದ ಜೊತೆ ವಿರಾಟ್ ಫೀಲ್ಡ್‌ಗೆ ಇಳಿದಾಗಿತ್ತು, ಕ್ರೀಡಾಂಗಣದ ಒಳಗಿಂದಲೇ ಅನುಷ್ಕಾ ರನ್ನು ಗಮನಿಸಿದ ಕೊಹ್ಲಿ, 'ಊಟ ಮಾಡಿದೆಯಾ?' ಎಂದು ಸನ್ನೆ ಮಾಡಿದರು.
ಸನ್ನೆ ಮೂಲಕವೇ ಅನುಷ್ಕಾ ಉತ್ತರ
ಪತಿ ವಿರಾಟ್ ಅವರ ಸನ್ನೆ ಪ್ರಶ್ನೆಗೆ ಸನ್ನೆ ಮೂಲಕವೇ ಊಟ ಮುಗಿಸಿದೆ ಎಂದಿದ್ದಾರೆ. ನಂತರ ವಿರಾಟ್, ಪತ್ನಿಯನ್ನು ನಗಿಸಲು ಮತ್ತೆ ಸನ್ನೆ ಮಾಡುತ್ತಾರೆ. ಆಗ ಅನುಷ್ಕಾ ಸಹ ನಗುತ್ತಲೇ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ನವೆಂಬರ್ 10 ಕ್ಕೆ ಹೆರಿಗೆ?
ಗರ್ಭಿಣಿ ಆಗಿರುವ ಅನುಷ್ಕಾ ಶರ್ಮಾ ಪ್ರಸ್ತುತ ಸಿನಿಮಾದಿಂದ ಬಿಡುವು ಪಡೆದಿದ್ದಾರೆ. ವಿರಾಟ್-ಅನುಷ್ಕಾ ಮಗುವಿನ ಜನನ ನವೆಂಬರ್ 10 ಕ್ಕೆ ಆಗಬಹುದು ಎನ್ನಲಾಗುತ್ತಿದೆ. ಆರ್‌ಸಿಬಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಸ್ವತಃ ಈ ವಿಷಯ ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ವಿಡಿಯೋವನ್ನು ಈಗ ಡಿಲೀಟ್ ಮಾಡಲಾಗಿದೆ.


Click it and Unblock the Notifications











