For Quick Alerts
  ALLOW NOTIFICATIONS  
  For Daily Alerts

  ಗುಡ್ ನ್ಯೂಸ್: ತಂದೆ-ತಾಯಿ ಆಗ್ತಿದ್ದಾರೆ ಅನುಷ್ಕಾ-ವಿರಾಟ್ ಕೊಹ್ಲಿ

  |

  ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ-ನಟಿ ಅನುಷ್ಕಾ ಶರ್ಮಾ ದಂಪತಿ ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಮದುವೆ ಆದ ಎರಡೂವರೆ ವರ್ಷದ ಬಳಿಕ ತಮ್ಮ ಕುಟುಂಬಕ್ಕೆ ಮೂರನೇ ವ್ಯಕ್ತಿಯನ್ನು ಸ್ವಾಗತಿಸುತ್ತಿದ್ದಾರೆ.

  ನಟಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದು, ಈ ವಿಚಾರವನ್ನು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  'ನಮ್ಮ ಕುಟುಂಬಕ್ಕೆ ಮತ್ತೊಬ್ಬರ ಆಗಮನ, 2021ರಿಂದ ನಾವು ಮೂವರು' ಎಂದು ಹೇಳುವ ಮೂಲಕ ಅನುಷ್ಕಾ ಶರ್ಮಾ ಗರ್ಭಿಣಿ ಫೋಟೋವನ್ನು ಶೇರ್ ಮಾಡಿದ್ದಾರೆ.

  ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂದೆ ತಾಯಿ ಆಗ್ತಿರುವ ಸಂಗತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ತೀವ್ರ ಸಂತಸಗೊಂಡಿದ್ದಾರೆ. ಇನ್ನು ಕ್ರಿಕೆಟ್ ವಲಯ ಹಾಗು ಬಾಲಿವುಡ್ ವಲಯದಿಂದ ಅನೇಕರು ವಿರಾಟ್-ಅನುಷ್ಕಾ ದಂಪತಿಗೆ ಶುಭ ಕೋರುತ್ತಿದ್ದಾರೆ. ಡಿಸೆಂಬರ್ 11, 2017 ರಲ್ಲಿ ಇಬ್ಬರು ವಿವಾಹವಾಗಿದ್ದರು.

  English summary
  Indian cricketer Virat Kohli And his wife Anushka Sharma Becoming parents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X