For Quick Alerts
  ALLOW NOTIFICATIONS  
  For Daily Alerts

  ನಿಧಿ ಸಂಗ್ರಹ ಅಭಿಯಾನ: 2 ಕೋಟಿ ರೂ. ದೇಣಿಗೆ ನೀಡಿದ ವಿರುಷ್ಕಾ ದಂಪತಿ

  |

  ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಭೀಕರತೆಗೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ದಿನಕ್ಕೆ ಸಾವಿರಾರು ಮಂದಿಯನ್ನು ಕೊರೊನಾ ಬಲಿ ಪಡೆಯುತ್ತಿದೆ. ಅನೇಕರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ನರಳಾಡುತ್ತಿದ್ದಾರೆ. ಕಷ್ಟದಲ್ಲಿರೊರಿಗೆ ಸಾಕಷ್ಟು ಮಂದಿ ಸಹಾಯ ಹಸ್ತ ಚಾಚುತ್ತಿದ್ದಾರೆ.

  Virat ಹಾಗು Anushka Covid ವಿರುದ್ಧ ಹೋರಾಡಲು ಸಿದ್ಧ | Oneindia Kannada

  ಇದೀಗ ದೇಶದ ಪವರ್ ಫುಲ್ ಕಪಲ್ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ದಂಪತಿ ಸಹಾಯಕ್ಕೆ ಧಾವಾಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿರೋರಿಗೆ ಸಹಾಯ ಮಾಡಲು ಅನುಷ್ಕಾ ಶರ್ಮಾ-ವಿರಾಟ್ ಇಬ್ಬರೂ ನಿಧಿಸಂಗ್ರಹ ಅಭಿಯಾನಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಅನುಷ್ಕಾ ಇತ್ತೀಚಿಗಷ್ಟೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ನಿಧಿ ಸಂಗ್ರಹ ಮಾಡುತ್ತಿರುವುದಾಗಿ ಹೇಳುವ ಜೊತೆಗೆ ಈ ಅಭಿಯಾನದಲ್ಲಿ ಭಾಗಿಯಾಗಿ ಎಂದು ಕೇಳಿಕೊಂಡಿದ್ದರು.

  ಕೊರೊನಾ ಸಂಕಷ್ಟಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆರವಿನ ಹಸ್ತಕೊರೊನಾ ಸಂಕಷ್ಟಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆರವಿನ ಹಸ್ತ

  ಇದೀಗ ಅನುಷ್ಕಾ ದಂಪತಿ 2 ಕೋಟಿ ರೂ. ದೇಣಿಗೆ ನೀಡುವ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ. 'ನಮ್ಮ ದೇಶ ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಡುತ್ತಿದೆ. ನಮ್ಮ ಆರೋಗ್ಯ ವ್ಯವಸ್ಥೆ ತೀವ್ರ ಸವಾಲನ್ನು ಎದುರಿಸುತ್ತಿದೆ. ಜನರು ಬಳಲುತ್ತಿದ್ದಾರೆ. ವಿರಾಟ್ ಮತ್ತು ನಾನು ಕೋವಿಡ್ 19 ಪರಿಹಾರಕ್ಕಾಗಿ ಹಣ ಸಂಗ್ರಹಿಸಲು ಅಭಿಯಾನ ಪ್ರಾರಂಭಿಸಿದ್ದೇವೆ' ಎಂದು ಹೇಳಿದ್ದರು.

  ಐಪಿಎಲ್ ಕ್ಯಾನ್ಸಲ್ ಆದ ಬೆನ್ನಲ್ಲೇ ಮನೆಗೆ ಮರಳಿರುವ ವಿರಾಟ್ ಕೊಹ್ಲಿ ಪತ್ನಿ ಜೊತೆ ಸೇರಿ ಕೊರೊನಾ ಸಂಕಷ್ಟ ಸ್ಥಿತಿಯಲ್ಲಿರೋರಿಗೆ ಸಹಾಯಕ್ಕೆ ಮುಂದಾಗಿದ್ದಾರೆ. ಇದೀಗ ಅಭಿಯಾನ ಪ್ರಾರಂಭ ಮಾಡಿದ್ದು ಒಟ್ಟು ಏಳು ದಿನಗಳು ಈ ಅಭಿಯಾನ ನಡೆಯಲಿದೆ. ಇಲ್ಲಿ ಸಂಗ್ರಹವಾದ ಹಣವನ್ನು ಸೋಂಕಿತರಿಗೆ ಆಕ್ಸಿಜನ್, ವ್ಯಾಕ್ಸಿನ್, ಮೆಡಿಸಿನ್ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ವಿರುಷ್ಕಾ ದಂಪತಿ ಹೇಳಿದ್ದಾರೆ.

  English summary
  Virat Kohli and Anushka Sharma donated 2 crores, begins fund fundraiser for corona relief.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X