For Quick Alerts
  ALLOW NOTIFICATIONS  
  For Daily Alerts

  ಮಗಳು ವಮಿಕಾ ಹೆಸರಿನ ಅರ್ಥ ಹೇಳಿದ ವಿರಾಟ್ ಕೊಹ್ಲಿ

  |

  ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಜನಿಸಿದ ಎಂದು ತಿಳಿದಾಗ ಮಗುವಿಗೆ ಏನೆಂದು ಹೆಸರಿಡಬಹುದು ಎನ್ನುವ ದೊಡ್ಡ ಚರ್ಚೆಯೇ ನಡೆದಿತ್ತು. ಕುತೂಹಲದ ನಡುವೆ ಮಗಳಿಗೆ 'ವಮಿಕಾ' ಎಂದು ನಾಮಕರಣ ಮಾಡಿದ್ದರು ತಾರಾ ದಂಪತಿ.

  ವಮಿಕಾ ಎಂದು ಹೆಸರಿನ ಒಳ ಅರ್ಥವೇನು? ಯಾವ ಕಾರಣದಿಂದ ಮಗಳಿಗೆ ಅನುಷ್ಕಾ-ಕೊಹ್ಲಿ ದಂಪತಿ ಈ ಹೆಸರಿಟ್ಟರು ಎನ್ನುವುದು ಅಷ್ಟೇ ಚರ್ಚೆಯಾಗಿತ್ತು. ವಿರಾಟ್ ಹೆಸರಿನಿಂದ 'ವ', ಅನುಷ್ಕಾ ಹೆಸರಿನಿಂದ 'ಕಾ' ಒಳಗೊಂಡು ವಮಿಕಾ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಮರ್ಥನೆಗಳು ಹುಟ್ಟಿಕೊಂಡಿದ್ದವು.

  ಇದೀಗ, ವಿರಾಟ್ ಕೊಹ್ಲಿ ತಮ್ಮ ಮಗಳ ಹೆಸರಿನ ಅರ್ಥ ಏನೆಂದು ಬಹಿರಂಗಪಡಿಸಿದ್ದಾರೆ. ಶನಿವಾರ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೆ-ಉತ್ತರದ ಸಂವಾದ ನಡೆಸಿದ ಕೊಹ್ಲಿಗೆ ''ನಿಮ್ಮ ಮಗಳ ಹೆಸರಿನ ಅರ್ಥವೇನು? ಹೇಗಿದೆ ಮಗು, ಫೋಟೋ, ವಿಡಿಯೋ ಏನಾದರೂ ನೋಡಬಹುದು?'' ಎಂದು ಪ್ರಶ್ನೆಯೊಂದು ಎದುರಾಗಿದೆ.

  ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳಿಗೆ ನಾಮಕರಣ, ಹೆಸರೇನು?ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳಿಗೆ ನಾಮಕರಣ, ಹೆಸರೇನು?

  ಇದಕ್ಕೆ ಉತ್ತರಿಸಿರುವ ಕೊಹ್ಲಿ ವಮಿಕಾ ಎಂದರೆ ದುರ್ಗ ಮಾತೆಯ ಇನ್ನೊಂದು ಹೆಸರು. ಸಾಮಾಜಿಕ ಜಾಲತಾಣ ಅಂದ್ರೆ ಏನು ಎಂದು ನಮ್ಮ ಮಗುವಿಗೆ ಅರ್ಥವಾಗುವವರೆಗೂ ನಾವು ಸೋಶಿಯಲ್ ಮೀಡಿಯಾಗೆ ಪರಿಚಯಿಸದಿರಲು ನಿರ್ಧರಿಸಿದ್ದೇವೆ'' ಎಂದು ತಿಳಿಸಿದ್ದಾರೆ.

  ಸದ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮುಂಬೈನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಜೂನ್ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗಾಗಿ ಕೊಹ್ಲಿ ಕುಟುಂಬ ಸಮೇತ ತೆರಳಲಿದ್ದಾರೆ.

  Upendra ಹೆಸರಿಲ್ಲದ Prajakeeya ಪಕ್ಷ ಗೆಲ್ಲುತ್ತಾ?ಇದು ಸಾಧ್ಯಾನಾ? | Uppi's Open Challenge|Filmibeat Kannada

  2017ರ ಡಿಸೆಂಬರ್ ತಿಂಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಮದುವೆಯಾಗಿದ್ದರು. 2021ರ ಜನವರಿ 11 ರಂದು ಹೆಣ್ಣು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದರು.

  English summary
  Cricketer Virat Kohli revealed meaning of his daughter name vamika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X