ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಇಷ್ಟವಾದ ವೆಬ್ ಸೀರೀಸ್ ಇದೇ
ಲಾಕ್‌ಡೌನ್‌ನಿಂದಾಗಿ ಕ್ರಿಕೆಟಿಗ ವಿರಾಟ್ ಕೋಹ್ಲಿ ಮನೆಯಲ್ಲೇ ಇದ್ದಾರೆ. ಮ್ಯಾಚ್‌ಗಳಿಲ್ಲ, ಪ್ರಾಕ್ಟಿಸ್ ಗೆ ಮೈದಾನಕ್ಕೂ ಇಳಿಯುವಂತಿಲ್ಲ. ಜಿಮ್‌ಗಳೂ ತೆರೆದಿಲ್ಲ. ಹಾಗಾಗಿ ಸಮಯ ಕೊಲ್ಲಲು ವೆಬ್ ಸೀರೀಸ್ ನೋಡುತ್ತಿದ್ದಾರೆ ವಿರಾಟ್.
Recommended Video
ವಿರಾಟ್ ಕೊಹ್ಲಿ ತಾವು ನೋಡಿದ ವೆಬ್ ಸೀರೀಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅದ್ಭುತವಾದ ವೆಬ್ ಸೀರೀಸ್ ಎಂದು ಹೊಗಳಿದ್ದಾರೆ.
ಅದ್ಭುತವಾದ ಚಿತ್ರಕತೆ, ಅದ್ಭುತವಾದ ನಿರೂಪಣೆ, ಅದ್ಭುತವಾದ ನಟನೆಯಿಂದಾಗಿ ಈ ವೆಬ್ ಸೀರೀಸ್ ನೋಡಲು ಯೋಗ್ಯವಾಗಿದೆ. ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುತ್ತದೆ ಎಂಬರ್ಥದ ಮಾತುಗಳನ್ನು ವೆಬ್ ಸೀರೀಸ್ ಬಗ್ಗೆ ಆಡಿದ್ದಾರೆ ವಿರಾಟ್ ಕೋಹ್ಲಿ.

ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗುತ್ತಿದೆ
ವಿರಾಟ್ ಕೊಹ್ಲಿ ಇಷ್ಟೆಲ್ಲಾ ಹೊಗಳಿರುವುದು 'ಪಾತಾಳ್ ಲೋಕ್' ಎಂಬ ವೆಬ್ ಸೀರೀಸ್ ಬಗ್ಗೆ. ಇದು ಅಮೆಜಾನ್ ಪ್ರೈಂ ನಲ್ಲಿ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದೆ. ಈ ವೆಬ್ ಸೀರೀಸ್ ಅನ್ನು ನಿರ್ಮಿಸಿರುವುದು ವಿರಾಟ್ ಪತ್ನಿ ಅನುಷ್ಕಾ ಶರ್ಮಾ.

ಅನುಷ್ಕಾ ಶರ್ಮಾ ನಿರ್ಮಿಸಿರುವ ಪಾತಾಳ್ ಲೋಕ್
ಅನುಷ್ಕಾ ಶರ್ಮಾ ನಿರ್ಮಿಸಿರುವ ಪಾತಾಳ್ ಲೋಕ್ ವೆಬ್ ಸೀರೀಸ್ ಅನ್ನು ಅವಿನಾಶ್ ಅರುಣ್ ಮತ್ತು ಪ್ರೋಸಿತ್ ರಾಯ್ ನಿರ್ದೇಶಿಸಿದ್ದಾರೆ. ನೀರಜ್ ಕಬಿ, ಗುಲ್ ಪನಾಗ್, ಜೈದೀಪ್ ಅಲ್ವಾತ್ ಜೊತೆ ಇನ್ನೂ ಕೆಲವು ಹೊಸಬರು ವೆಬ್ ಸೀರೀಸ್‌ನಲ್ಲಿ ನಟಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ವಿರಾಟ್
ಈ ವೆಬ್ ಸೀರೀಸ್ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿರುವ ವಿರಾಟ್ ಕೋಹ್ಲಿ. ಒಂದೇ ದಿನಕ್ಕೆ ಎಲ್ಲಾ ಎಪಿಸೋಡ್‌ಗಳನ್ನೂ ನೋಡಿ ಮುಗಿಸಿದೆ ಎಂದಿದ್ದಾರೆ. ಅಲ್ಲದೆ ಪತ್ನಿ ಅನುಷ್ಕಾ ಶರ್ಮಾ ಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.

ಶಾರುಖ್ ಸಹ ವೆಬ್ ಸೀರೀಸ್ ನಿರ್ಮಿಸಿದ್ದಾರೆ
ಇತ್ತೀಚೆಗೆ ಬಾಲಿವುಡ್ ಸ್ಟಾರ್‌ಗಳು ವೆಬ್ ಸೀರೀಸ್ ನಿರ್ಮಾಣಕ್ಕೆ ಇಳಿದಿದ್ದಾರೆ. ಶಾರುಖ್ ಖಾನ್ ಸಹ ಎರಡು ವೆಬ್ ಸೀರೀಸ್‌ಗಳನ್ನು ನಿರ್ಮಿಸಿದ್ದಾರೆ. ಬಾರ್ಡ್ ಆಫ್ ಬ್ಲಡ್ ಮತ್ತು ಬೇತಾಳ್ ವೆಬ್ ಸೀರೀಸ್ ಅನ್ನು ಅವರು ನಿರ್ಮಿಸಿದ್ದಾರೆ. ಇವು ನೆಟ್‌ಫ್ಲಿಕ್ಸ್ ನಲ್ಲಿ ಪ್ರದರ್ಶನವಾಗುತ್ತಿದೆ.


Click it and Unblock the Notifications











