ವಿರಾಟ್ ಕೊಹ್ಲಿ ಸಾಮರ್ಥ್ಯವನ್ನು ಮೆಚ್ಚಿದ ರಣ್ವೀರ್ ಸಿಂಗ್

Recommended Video

ICC World Cup 2019: ವಿರಾಟ್ ಕೊಹ್ಲಿ ಸಾಮರ್ಥ್ಯವನ್ನ ಮೆಚ್ಚಿದ ಬಾಲಿವುಡ್ ಸ್ಟಾರ್ ನಟ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದ್ದಾರೆ. ವಿಶ್ವದ ನಂಬರ್ 1 ಬ್ಯಾಟ್ಸ್ ಮನ್ ಆಗಿರುವ ಕೊಹ್ಲಿ ಸಾಮರ್ಥ್ಯವನ್ನು ಈಗ ಬಾಲಿವುಡ್ ನಟ ರಣ್ವೀರ್ ಸಿಂಗ್ ಮೆಚ್ಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೊಹ್ಲಿ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಅವರನ್ನು ರಣ್ವೀರ್ ಸಿಂಗ್ ಗುಣಗಾನ ಮಾಡಿದ್ದಾರೆ.

''ನಾನು ಚಿಕ್ಕ ವಯಸ್ಸಿನಿಂದ ಕ್ರಿಕೆಟ್ ನ ದೊಡ್ಡ ಅಭಿಮಾನಿ. ನನಗೆ ಅದರ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಭಾರತ ತಂಡಕ್ಕೆ ಈಗ ವಿರಾಟ್ ಕೊಹ್ಲಿ ಬಂದಿದ್ದು, ಹೊಸ ಬದಲಾವಣೆ ನೀಡಿದೆ. ಅವರು ಯಾವಾಗಲೂ ಗ್ರೇಟ್ ಆಟಗಾರ. ಯೋಧನ ರೀತಿ ತಂಡವನ್ನು ಮುನ್ನಡೆಸುತ್ತಿದ್ದಾರೆ.'' ಎಂದು ಕೊಹ್ಲಿಯನ್ನು ರಣ್ವೀರ್ ಸಿಂಗ್ ಹೊಗಳಿದ್ದಾರೆ.

virat leading our country like a true alpha warrior says ranveer singh

ಪಾಕಿಸ್ತಾನ ವಿರುದ್ಧ ಕಳೆದ ಪಂದ್ಯದಲ್ಲಿ 77 ರನ್ ಬಾರಿಸುವ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 11 ಸಾವಿರ ಗಡಿ ದಾಟಿದಾರೆ. ಅತಿ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

ಇನ್ನು, ರಣ್ವೀರ್ ಸಿಂಗ್ ಮೆಚ್ಚಿನ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ರಣ್ವೀರ್ ಸದ್ಯ '83' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಾರತ ಮೊದಲ ವಿಶ್ವ ಕಪ್ ಗೆದ್ದ ಇತಿಹಾಸವನ್ನು ಈ ಸಿನಿಮಾ ಹೇಳಲಿದೆ. ಚಿತ್ರದಲ್ಲಿ ಇಂಡಿಯಾನ್ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ನಟಿಸುತ್ತಿದ್ದಾರೆ.

More from Filmibeat

English summary
Virat Kohli leading our country like a true alpha warrior says actor Ranveer Singh. Ranveer took to his Instagram account to share pictures of his interaction with Virat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X