twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್ ಮಧ್ಯೆ ಶೂಟಿಂಗ್ ಆರೋಪ: ನಿರ್ದೇಶಕನ ವಿರುದ್ಧ ಪೊಲೀಸರಿಗೆ ಸೋನಾಕ್ಷಿ ಸಿನ್ಹಾ ದೂರು

    |

    ಮಾರಕ ಕೊರೊನಾ ವೈರಸ್ ಸೋಂಕಿನಿಂದ ಜನರನ್ನು ರಕ್ಷಿಸಲು ಲಾಕ್‌ಡೌನ್‌ನಂತಹ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸುಮಾರು ಒಂದೂವರೆ ತಿಂಗಳಿನಿಂದ ದೇಶದಾದ್ಯಂತ ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಗೊಂಡಿವೆ. ಆದರೆ ಈ ಕಟ್ಟುನಿಟ್ಟಾದ ಕ್ರಮದ ನಡುವೆಯೂ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಶೂಟಿಂಗ್‌ನಲ್ಲಿ ಭಾಗಿಯಾದ ಆರೋಪ ಕೇಳಿಬಂದಿದೆ.

    ಈ ಆರೋಪ ಮಾಡಿರುವುದು 'ಚಾಕೋಲೇಟ್', 'ಹೇಟ್ ಸ್ಟೋರಿ', 'ದಿ ತಾಷ್ಕೆಂಟ್ ಫೈಲ್ಸ್‌'ನಂತಹ ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಈ ಆರೋಪ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಸೋನಾಕ್ಷಿ ಸಿನ್ಹಾ ಸಿಡಿದೆದ್ದಿದ್ದಾರೆ. ಮುಂಬೈ ಪೊಲೀಸರಿಗೂ ಈ ಬಗ್ಗೆ ದೂರು ನೀಡಿದ್ದಾರೆ. ಮುಂದೆ ಓದಿ...

    ಈ ಸಮಯದಲ್ಲಿ ಶೂಟಿಂಗಾ?

    ಈ ಸಂಕಷ್ಟದ ಸಮಯದಲ್ಲಿಯೂ ಸೋನಾಕ್ಷಿ ಸಿನ್ಹಾ ಶೂಟಿಂಗ್ ಮಾಡುತ್ತಿದ್ದಾರೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆರೋಪಿಸಿದ್ದಾರೆ. ಮುಂಬೈನ ಸ್ಟುಡಿಯೋ ಒಂದರಿಂದ ಸೋನಾಕ್ಷಿ ಹೊರಬರುತ್ತಿರುವ ಫೋಟೊವನ್ನು ಹಾಕಿರುವ ವಿವೇಕ್, 'ಇಂತಹ ಸಮಯದಲ್ಲಿ ಯಾರು ಶೂಟಿಂಗ್ ಮಾಡುತ್ತಾರೆ?' ಎಂದು ಟ್ವೀಟ್ ಮಾಡಿದ್ದಾರೆ.

    ಮೊದಲು ಚೆನ್ನಾಗಿ ತಿಳಿದುಕೊಳ್ಳಿ

    ಮೊದಲು ಚೆನ್ನಾಗಿ ತಿಳಿದುಕೊಳ್ಳಿ

    ಇದರ ಬಗ್ಗೆ ಸೋನಾಕ್ಷಿ ಕೆಂಡಕಾರಿದ್ದಾರೆ. ಈ ಫೋಟೊ ಕಳೆದ ವರ್ಷ ತೆಗೆದಿರುವುದು. ಫರಾಹ್ ಖಾನ್ ಅವರ 'ಬ್ಯಾಕ್ ಬೆಂಚರ್ಸ್' ಚಾಟ್ ಶೋದ ಶೂಟಿಂಗ್‌ಗೆ ಹೋಗಿದ್ದಾಗ ತೆಗೆದ ಫೋಟೊ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೆ, ಉದ್ಯಮದವರೇ ಆಗಿ ಈ ಮಟ್ಟದ ಆರೋಪ ಮಾಡುವ ಮೊದಲು ಚೆನ್ನಾಗಿ ತಿಳಿದುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.

    ಪೊಲೀಸ್ ಗೆ ಶೇಕ್ ಹ್ಯಾಂಡ್ ಮಾಡಿ ಟ್ರೋಲಿಗರಿಗೆ ಆಹಾರವಾದ ಬಾಲಿವುಡ್ ನಟಪೊಲೀಸ್ ಗೆ ಶೇಕ್ ಹ್ಯಾಂಡ್ ಮಾಡಿ ಟ್ರೋಲಿಗರಿಗೆ ಆಹಾರವಾದ ಬಾಲಿವುಡ್ ನಟ

    ನಿಮ್ಮಿಂದ ಸರಿಯಾದ ಮಾಹಿತಿ ನಿರೀಕ್ಷಿಸುತ್ತಾರೆ

    'ನಿರ್ದೇಶಕರಾಗಿ ಮತ್ತು ಸಿನಿಮಾ ಸಂಸ್ಥೆಗಳು ಹಾಗೂ ಒಕ್ಕೂಟಗಳ ಸದಸ್ಯರಾಗಿ ನಿಮ್ಮ ಬಳಿ ಸರಿಯಾದ ಮಾಹಿತಿ ಇರಬೇಕು ಎಂದು ಎಲ್ಲರೂ ನಿರೀಕ್ಷಿಸುತ್ತಾರೆ. ಸ್ಟುಡಿಯೋಗಳು ಮುಚ್ಚಿರುವುದರಿಂದ ಯಾರೂ ಶೂಟಿಂಗ್ ಮಾಡುತ್ತಿಲ್ಲ. ಮತ್ತೆ ಇದು ರಾಷ್ಟ್ರೀಯ ಲಾಕ್‌ಡೌನ್. ಇದು 2019ರ ನವೆಂಬರ್ 5ರಂದು ತೆಗೆದ ಹಳೆಯ ಚಿತ್ರ. ಆಹಾ ಆ ದಿನಗಳು...' ಎಂದು ಸೋನಾಕ್ಷಿ ಪ್ರತಿಕ್ರಿಯಿಸಿದ್ದಾರೆ.

    ಸುಳ್ಳು ಸುದ್ದಿ ತಡೆಯುವುದು ಹೇಗೆ?

    ಇಷ್ಟಕ್ಕೇ ಸೋನಾಕ್ಷಿ ಸುಮ್ಮನಾಗಿಲ್ಲ. ಮತ್ತೊಂದು ಟ್ವೀಟ್‌ನಲ್ಲಿ ಮುಂಬೈ ಪೊಲೀಸರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಟ್ವಿಟರ್ ಖಾತೆಗಳನ್ನು ಟ್ಯಾಗ್ ಮಾಡಿ, ಜನರು ಆಧಾರರಹಿತ ವದಂತಿಗಳನ್ನು ತಡೆಯುವುದು ಹೇಗ ಎಂದು ಕೇಳಿದ್ದಾರೆ. 'ಈ ಸಂದರ್ಭದಲ್ಲಿ ವದಂತಿಗಳು ಮತ್ತು ಸುಳ್ಳು ಸುದ್ದಿಗಳನ್ನು ಹರಡುವುದರಿಂದ ಜನರನ್ನು ತಡೆಯುವ ಕ್ರಮ ಹೇಗೆ? ಜವಾಬ್ದಾರಿಯುತ ಪ್ರಜೆಯಾಗಿ ಕೇಳುತ್ತಿದ್ದೇನೆ. ಮನೆಯಲ್ಲಿ ಕುಳಿತು ಸಾಮಾಜಿಕ ಅಂತರ ಪಾಲಿಸುತ್ತಾ ಇದ್ದೇನೆ. ನಾನು ಶೂಟಿಂಗ್ ಮಾಡುತ್ತಿಲ್ಲ' ಎಂದು ಹೇಳಿದ್ದಾರೆ.

    ರೋಗನಿರೋಧಕ ಶಕ್ತಿ ಹೆಚ್ಚಿಸಲು ಟಿಪ್ಸ್ ಕೊಟ್ಟ ಬಾಲಿವುಡ್ ತಾರೆ ಸೊನಾಲಿ ಬೇಂದ್ರೆರೋಗನಿರೋಧಕ ಶಕ್ತಿ ಹೆಚ್ಚಿಸಲು ಟಿಪ್ಸ್ ಕೊಟ್ಟ ಬಾಲಿವುಡ್ ತಾರೆ ಸೊನಾಲಿ ಬೇಂದ್ರೆ

    ಸ್ಪಷ್ಟನೆ ನೀಡಿದ ವಿವೇಕ್

    ಸ್ಪಷ್ಟನೆ ನೀಡಿದ ವಿವೇಕ್

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿವೇಕ್ ಅಗ್ನಿಹೋತ್ರಿ, 'ನಾನು ಉಲ್ಲೇಖಿಸಿರುವುದು ಪತ್ರಿಕೋದ್ಯಮದ ಮಟ್ಟವನ್ನೇ ಹೊರತು ನಿಮ್ಮ ಮೇಲೆ ಆರೋಪಿಸಿರುವುದಲ್ಲ. ನಿಮಗೆ ಏನಾದರೂ ಹೇಳುವುದಿದ್ದರೆ ನಿಮ್ಮನ್ನು ಟ್ಯಾಗ್ ಮಾಡುತ್ತಿದ್ದೆ. ಇಂತಹ ಫೋಟೊಗಳನ್ನು ಈಗ ಪ್ರಕಟಿಸುವುದು ತಪ್ಪು ಅಭಿಪ್ರಾಯ ಮೂಡಿಸುತ್ತದೆ. ಸ್ಟಾರ್ ಆಗಿ ನೀವು ಇಂತಹ ಪೀತ ಮತ್ತು ಸಂವೇದನಾರಹಿತ ಪತ್ರಿಕೋದ್ಯಮವನ್ನು ನೀವೂ ಕಠಿಣವಾಗಿ ಖಂಡಿಸಬೇಕು' ಎಂದು ಹೇಳಿದ್ದಾರೆ.

    ಮಮತಾ ಬ್ಯಾನರ್ಜಿ ರೀತಿ ನೀವೂ ಮನೆಗೆ ಎಣ್ಣೆ ಸಪ್ಲೈ ಮಾಡಿ ಎಂದು ಕೇಳಿದ ನಿರ್ದೇಶಕಮಮತಾ ಬ್ಯಾನರ್ಜಿ ರೀತಿ ನೀವೂ ಮನೆಗೆ ಎಣ್ಣೆ ಸಪ್ಲೈ ಮಾಡಿ ಎಂದು ಕೇಳಿದ ನಿರ್ದೇಶಕ

    English summary
    Sonakshi sinha seeks police help to stop spreading false news, after filmmaker Vivek Agnihotri shares a photo of her.
    Monday, April 13, 2020, 20:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X