For Quick Alerts
  ALLOW NOTIFICATIONS  
  For Daily Alerts

  ತನುಶ್ರೀ ದತ್ತಾಗೆ 'ಬಟ್ಟೆ ಬಿಚ್ಚು' ಅಂತ ಹೇಳಿದ್ನಂತೆ ಬಾಲಿವುಡ್ ನಿರ್ದೇಶಕ.!

  |

  ಇತ್ತೀಚೆಗಷ್ಟೇ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 'ಹಾರ್ನ್ ಓಕೆ ಪ್ಲೀಸ್' ಸಿನಿಮಾ ಸೆಟ್ ನಲ್ಲಿ ನಡೆದ ಘಟನೆಯ ಬಗ್ಗೆ ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ವಿವರಣೆ ನೀಡಿದ್ದರು.

  ಇದೀಗ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ತನುಶ್ರೀ ದತ್ತಾ ಬಾಂಬ್ ಸಿಡಿಸಿದ್ದಾರೆ. 'ಚಾಕಲೇಟ್: ಡೀಪ್ ಡಾರ್ಕ್ ಸೀಕ್ರೆಟ್ಸ್' ಎಂಬ ಸಿನಿಮಾದ ಸೀನ್ ವೊಂದಕ್ಕಾಗಿ 'ಬಟ್ಟೆ ಬಿಚ್ಚು' ಅಂತ ತನುಶ್ರೀ ದತ್ತಾಗೆ ವಿವೇಕ್ ಅಗ್ನಿಹೋತ್ರಿ ಹೇಳಿದ್ರಂತೆ.

  ಆಗ ತನುಶ್ರೀ ದತ್ತಾ ಪರವಾಗಿ ನಟರಾದ ಇರ್ಫಾನ್ ಖಾನ್ ಹಾಗೂ ಸುನೀಲ್ ಶೆಟ್ಟಿ ದನಿಯೆತ್ತಿದ್ದರಂತೆ. ಈ ಘಟನೆ ಬಗ್ಗೆ ಸದ್ಯ ತನುಶ್ರೀ ದತ್ತಾ ಪತ್ರಿಕೆಯೊಂದಕ್ಕೆ ವಿವರಿಸಿದ್ದಾರೆ. ಎಲ್ಲವನ್ನೂ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಕ್ಯೂ ಕೊಡಲು ಬಟ್ಟೆ ಬಿಚ್ಚಬೇಕು.!

  ಕ್ಯೂ ಕೊಡಲು ಬಟ್ಟೆ ಬಿಚ್ಚಬೇಕು.!

  ''ಇರ್ಫಾನ್ ಖಾನ್ ಗೆ ನಾನು ಕ್ಯೂ ಕೊಡಬೇಕು ಅಂತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೂಚಿಸಿದರು. ಅಷ್ಟಕ್ಕೂ, ಅದು ನನ್ನ ಶಾಟ್ ಆಗಿರಲಿಲ್ಲ. ಇರ್ಫಾನ್ ಖಾನ್ ಅವರ ಕ್ಲೋಸಪ್ ಶಾಟ್ ಆಗಿತ್ತು. ಅವರು ಏನನ್ನೋ ನೋಡಿಕೊಂಡು ಎಕ್ಸ್ ಪ್ರೆಶನ್ ಕೊಡಬೇಕಿತ್ತು. ಆಗ ನಿರ್ದೇಶಕ ನನ್ನನ್ನ ಕರೆದು - ''ಹೋಗಿ ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡು, ಅವರಿಗೆ ಕ್ಯೂ ಕೊಡು'' ಅಂದ್ರು'' - ತನುಶ್ರೀ ದತ್ತಾ, ನಟಿ

  ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!

  ದನಿ ಎತ್ತಿದ ಇರ್ಫಾನ್ ಖಾನ್

  ದನಿ ಎತ್ತಿದ ಇರ್ಫಾನ್ ಖಾನ್

  ''ಆ ಸಂದರ್ಭದಲ್ಲಿ ಇರ್ಫಾನ್ ಖಾನ್ ಬಹುಬೇಗ ನನ್ನ ಪರವಾಗಿ ಮಾತನಾಡಿದರು. ''ನೀವೇನು ಮಾತನಾಡುತ್ತಿದ್ದೀರಾ.? ನಾನು ನನ್ನ ಕ್ಲೋಸಪ್ ಕೊಡುವೆ. ನನಗೆ ಆಕ್ಟಿಂಗ್ ಬರುತ್ತೆ'' ಅಂತ ನಿರ್ದೇಶಕರಿಗೆ ಇರ್ಫಾನ್ ಖಾನ್ ತಿರುಗೇಟು ಕೊಟ್ಟರು'' - ತನುಶ್ರೀ ದತ್ತಾ, ನಟಿ

  ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?

  ಶಾಕ್ ಆಗಿತ್ತು.!

  ಶಾಕ್ ಆಗಿತ್ತು.!

  ''ಇರ್ಫಾನ್ ಖಾನ್ ಹಾಗೆ ಮಾತನಾಡಿದ್ದಕ್ಕೆ ನಾನು ನಿಜಕ್ಕೂ ಹೆಮ್ಮೆ ಪಡುವೆ. ಫ್ರೇಮ್ ನಲ್ಲಿ ನಾನು ಇಲ್ಲದೇ ಇದ್ದರೂ, ಇನ್ನೊಬ್ಬರಿಗೆ ಕ್ಯೂ ಕೊಡಲು ನಾನು ಯಾಕೆ ಬಟ್ಟೆ ಬಿಚ್ಚಿ ನರ್ತಿಸಲಿ.? ನಿರ್ದೇಶಕ ಹೀಗೆ ಹೇಳಿದಾಗ ನನಗೆ ನಿಜಕ್ಕೂ ಶಾಕ್ ಆಗಿತ್ತು'' ಅಂತಾರೆ ತನುಶ್ರೀ ದತ್ತಾ.

  ಚಿತ್ರರಂಗದಲ್ಲಿ ಒಳ್ಳೆಯವರೂ ಇದ್ದಾರೆ

  ಚಿತ್ರರಂಗದಲ್ಲಿ ಒಳ್ಳೆಯವರೂ ಇದ್ದಾರೆ

  ''ಆ ಸಮಯದಲ್ಲಿ ಸೆಟ್ ನಲ್ಲಿ ಸುನೀಲ್ ಶೆಟ್ಟಿ ಕೂಡ ಇದ್ದರು. ಅವರೂ ಕೂಡ ನನ್ನ ಪರವಾಗಿ ಮಾತನಾಡಿದರು. ''ನಾನು ಬಂದು ಕ್ಯೂ ಕೊಡ್ಲಾ.?'' ಅಂತ ನಿರ್ದೇಶಕರಿಗೆ ಸುನೀಲ್ ಶೆಟ್ಟಿ ಕೇಳಿದರು. ನಿರ್ದೇಶಕರಿಗೆ ಸುನೀಲ್ ಶೆಟ್ಟಿ ಬೆಂಡೆತ್ತಿದರು. ಇಂಡಸ್ಟ್ರಿಯಲ್ಲಿ ಹೀಗೆ ಒಳ್ಳೆಯವರೂ ಇದ್ದಾರೆ'' - ತನುಶ್ರೀ ದತ್ತಾ, ನಟಿ

  English summary
  Bollywood Director Vivek Agnihotri asked me to remove my clothes and dance says Tanushree Dutta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X