For Quick Alerts
  ALLOW NOTIFICATIONS  
  For Daily Alerts

  ಕಾಶ್ಮೀರ್ ಫೈಲ್ಸ್ ನಿರ್ದೇಶಕ ಗೋ ಮಾಂಸ ವಿಡಿಯೋ ವೈರಲ್: ಸುಮ್ನೆ 'ಬ್ರಹ್ಮಾಸ್ತ್ರ' ನೋಡಿ ಎಂದ ನೆಟ್ಟಿಗರು!

  |

  'ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇತ್ತೀಚೆಗೆ ಏನಾದರೂ ಒಂದು ವಿವಾದಕ್ಕೆ ಸಿಲುಕುತ್ತಲೇ ಇರುತ್ತಾರೆ. ಅದರಲ್ಲೂ 'ದಿ ಕಾಶ್ಮೀರ್ ಫೈಲ್ಸ್' ಬಿಡುಗಡೆ ಬಳಿಕ ಬಾಲಿವುಡ್ ವಿರುದ್ಧವೇ ತಿರುಗಿಬಿದ್ದಿದ್ದರು. ಸೂಪರ್‌ಸ್ಟಾರ್‌ಗಳನ್ನು ಟೀಕೆ ಮಾಡಲು ಆರಂಭಿಸಿದ್ದರು.

  ಈಗ ವಿವೇಕ್ ಅಗ್ನಿ ಹೋತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ. ವಿವೇಕ್ ಸಂದರ್ಶನ ನೀಡಿದ್ದ ಹಳೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶಕ ಗೋ ಮಾಂಸವನ್ನು ಸೇವಿಸುತ್ತಿರುವ ವಿಷಯವನ್ನು ಒಪ್ಪಿಕೊಂಡಿದ್ದರು. ಅದೇ ವಿಡಿಯೋ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  Brahmastra First Review: ಬ್ರಹ್ಮಾಸ್ತ್ರ ಬಾಲಿವುಡ್ ಮಂದಿಗೆ ಅಪರೂಪ, ಆದರೆ... !Brahmastra First Review: ಬ್ರಹ್ಮಾಸ್ತ್ರ ಬಾಲಿವುಡ್ ಮಂದಿಗೆ ಅಪರೂಪ, ಆದರೆ... !

  ಈಗಲೂ ಗೋ ಮಾಂಸ ತಿನ್ನುತ್ತೇನೆ

  ಟೀಕೆಗೆ ಗುರಿಯಾಗುತ್ತಿರುವ ವಿಡಿಯೋದಲ್ಲಿ ಗೋ ಮಾಂಸ ತಿನ್ನುತ್ತೇನೆಂದು ವಿವೇಕ್ ಅಗ್ನಿಹೋತ್ರಿ ಒಪ್ಪಿಕೊಂಡಿದ್ದಾರೆ. "ನಾನು ಆಗಲೂ ಗೋ ಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ" ಎಂದು ಸಂದರ್ಶದಲ್ಲಿ ಹೇಳಿಕೆ ನೀಡಿದ್ದರು. ಅದೇ ವಿಡಿಯೋ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

  ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಅದೇ ಇನ್ನೊಂದು ಕಡೆ ರಣ್‌ಬೀರ್ ಕಪೂರ್ ಅಭಿಮಾನಿಗಳು ವಿವೇಶ್ ಅಗ್ನಿಹೋತ್ರಿಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

  ಸುಮ್ನೆ ಬ್ರಹ್ಮಾಸ್ತ್ರ ಸಿನಿಮಾ ನೋಡಿ

  ಬಾಲಿವುಡ್‌ನಲ್ಲಿ ಬಾಯ್‌ಕಾಟ್ ಅಭಿಯಾನ ಬಹಳ ದಿನಗಳಿಂದ ನಡೆಯುತ್ತಿರೋದು ಗೊತ್ತೇ ಇದೆ. ಈ ಬಾರಿ ಕೂಡ ಬಾಯ್‌ಕಾಟ್ ಬ್ರಹ್ಮಾಸ್ತ್ರ ಅಭಿಯಾನ ಆರಂಭ ಆಗಿತ್ತು. ಅದೇ ವೇಳೆಗೆ ವಿವೇಶ್ ಅಗ್ನಿಹೋತ್ರಿ ಗೋ ಮಾಂಸ ತಿನ್ನುವ ವಿಡಿಯೋ ವೈರಲ್ ಆಗಿದ್ದು, ರಣ್‌ಬೀರ್ ಅಭಿಮಾನಿಗಳು ಇವರನ್ನೆಲ್ಲಾ ನಂಬಬೇಡಿ ಸುಮ್ಮನೆ ಥಿಯೇಟರ್‌ಗೆ ಹೋಗಿ ಬ್ರಹ್ಮಾಸ್ತ್ರ ಸಿನಿಮಾ ನೋಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

  'ಬ್ರಹ್ಮಾಸ್ತ್ರ' ಸಿನಿಮಾಗೆ ಬಾಯ್‌ಕಾಟ್ ಬಿಸಿ ತಟ್ಟಿದ್ದರೂ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾವನ್ನು ಥಿಯೇಟರ್‌ಗೆ ಹೋಗಿ ನೋಡುವಂತೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ನೀಡುತ್ತಿದ್ದಾರೆ. ಸೆಪ್ಟೆಂಬರ್ 9 ರಿಂದ 'ಬ್ರಹ್ಮಾಸ್ತ್ರ' ಸಿನಿಮಾ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಷ್ಟಕ್ಕೂ ವಿವೇಶ್ ಅಗ್ನಿಹೋತ್ರಿ ಹಳೆ ವಿಡಿಯೋ ವೈರಲ್ ಆಗಿದ್ದು ರಣ್‌ಬೀರ್ ಹಾಗೂ ಆಲಿಯಾಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಪ್ರವೇಶ ನೀಡದೆ ಇದ್ದದ್ದೇ ಪ್ರಮುಖ ಕಾರಣ

  Vivek Agnihotri Beef Eating Statement Viral Ranbir Kapoor Fans Trolls

  ಣಬೀರ್ ಹಾಗೂ ಆಲಿಯಾ ಭಟ್ ಪ್ರವೇಶ ನಿರಾಕರಣೆ

  'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರ ವೇಳೆ ರಣಬೀರ್ ಹಾಗೂ ಆಲಿಯಾ ಭಟ್ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಆ ವೇಳೆ ಅವರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಿರಲಿಲ್ಲ. ಈ ಹಿಂದೆ ರಣ್‌ಬೀರ್ ಕಪೂರ್ ' ನಾನು ಗೋ ಮಾಂಸ ತಿನ್ನುತ್ತೇನೆ' ಎಂದಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಗೋ ಮಾಂಸ ತಿಂದವರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡಲು ಅವಕಾಶ ನೀಡಿರಲಿಲ್ಲ. ಈಗ ವಿವೇಕ್ ಅಗ್ನಿಹೋತ್ರಿಗೆ ಹೇಗೆ ಪ್ರವೇಶ ನೀಡಿದ್ರಿ? ಎಂದು ಪ್ರಶ್ನೆ ಮಾಡಲಾಗುತ್ತಿದೆ.

  ರಣ್‌ಬೀರ್ ಹಾಗೂ ಆಲಿಯಾ ಭಟ್ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳುವ ಮುನ್ನ ವಿವೇಕ್ ಅಗ್ನಿಹೋತ್ರಿ ಹೋಗಿದ್ದರು. ಪತ್ನಿಯೊಂದಿಗೆ ತೆರಳಿದ್ದ ವಿವೇಕ್ ಅಲ್ಲಿ ಪೂಜೆ ಸಲ್ಲಿಸಿದ್ದರು. ಈಗ "ವಿವೇಕ್ ಅಗ್ನಿಹೋತ್ರಿ ಕೂಡ ಗೋ ಮಾಂಸ ತಿಂದಿದ್ದಾರೆ. ಅವರಿಗೆ ಅವಕಾಶ ನೀಡಿದ್ದು ಹೇಗೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ಕೆಂಗಣ್ಣಿಗೆ ಗುರಿಯಾಗಿದ್ದು, ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

  English summary
  Vivek Agnihotri Beef Eating Statement Viral Ranbir Kapoor Fans Trolls , Know More.
  Friday, September 9, 2022, 8:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X