ವ್ಯಂಗ್ಯವಾಡಿದ ಮೂರು ದಿನದಲ್ಲೇ ಶಾರುಖ್ ಖಾನ್‌ರ ಜವಾನ್ ಟ್ರೇಲರ್ ಹೊಗಳಿದ ವಿವೇಕ್ ಅಗ್ನಿಹೋತ್ರಿ!

ಬಾಲಿವುಡ್ ನಟ ಶಾರುಖ್ ಖಾನ್ ಅವರ ಜವಾನ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಸಿನಿಮಾ ಬಿಡುಗಡೆಗೆ ಇನ್ನು ಐದು ದಿನ ಬಾಕಿಯಿದ್ದು, ಚಿತ್ರದ ಪ್ರಚಾರದಲ್ಲಿ ಸಿನಿಮಾ ತಂಡ ತೊಡಗಿಸಿಕೊಂಡಿದೆ. ಇದರ ಜೊತೆಗೆ ಅಭಿಮಾನಿಗಳಲ್ಲಿಯೂ ಜವಾನ್ ಕಿಚ್ಚು ಹೆಚ್ಚಾಗಿದೆ. ಹೀಗಾಗಿ ಹಲವೆಡೆ ಜವಾನ್ ಬಗ್ಗೆ ಚರ್ಚೆಗಳಾಗುತ್ತಿವೆ.

ಹೀಗೆಯೇ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಶನಿವಾರ ಟ್ವಿಟರ್‌ನಲ್ಲಿ 'ಏನು ಬೇಕಾದರೂ ಕೇಳಿ' (ask me anything) ಸೆಷನ್ ನಡೆಸಿದ್ದರು. ಇಲ್ಲಿಯೂ ಜವಾನ್ ಸಿನಿಮಾ ಪ್ರಸ್ತಾಪವಾಗಿದೆ. ಅವರ ಮುಂದಿನ ಚಿತ್ರ ದಿ ವ್ಯಾಕ್ಸಿನ್ ವಾರ್ ಬಗ್ಗೆ ವಿವರಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಅವರ ಚಿತ್ರಗಳ ಆಯ್ಕೆಯ ಬಗ್ಗೆಯೂ ವಿವರಗಳನ್ನು ಹಂಚಿಕೊಂಡಿದ್ದಾರೆ.

jawan-trailer-is-adbhut

ಜವಾನ್ ಬಗ್ಗೆ ವಿವೇಕ್ ಅಗ್ನಿಹೋತ್ರಿ ಮಾತು

ಈ ವೇಳೆ ವಿವೇಕ್ ಅಗ್ನಿಹೋತ್ರಿ ಅವರ ಚಿತ್ರಕ್ಕಿಂತ ಕೆಲವು ವಾರಗಳ ಮೊದಲು ಬಿಡುಗಡೆಯಾಗುತ್ತಿರುವ ಶಾರುಖ್ ಖಾನ್ ಅವರ ಜವಾನ್ ಬಗ್ಗೆಯೂ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. "ಜವಾನ್ ಟ್ರೈಲರ್ ನಿಮಗೆ ಹೇಗನಿಸಿತು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ "ಅದ್ಭುತ, ಮೈಂಡ್ ಬ್ಲೋಯಿಂಗ್, ಬ್ಲಾಕ್‌ ಬಸ್ಟರ್ ಎಂದು ಎಲ್ಲೆಡೆ ಬರೆಯಲಾಗಿದೆ" ಎಂದು ಹೇಳಿದ್ದಾರೆ.

ಮತ್ತೆ ಜವಾನ್ ಬಗ್ಗೆಯೇ ಪ್ರಶ್ನೆ ಕೇಳಿದ ಮತ್ತೊಬ್ಬರು ವಿವೇಕ್‌ಗೆ ಜವಾನ್‌ ನೋಡುತ್ತಾರೋ ಇಲ್ಲವೋ ಎಂದು ಕೇಳಿದ್ದಾರೆ. ಇದಕ್ಕೆ ತಾವು ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿರುವುದಾಗಿ ಕಾಶ್ಮೀರಿ ಫೈಲ್ಸ್ ನಿರ್ದೇಶಕರು ತಿಳಿಸಿದ್ದಾರೆ. "ಎಫ್‌ಡಿಎಫ್ಎಸ್. ಎಫ್‌ಡಿಎಫ್ಎಸ್. ಎಫ್‌ಡಿಎಫ್ಎಸ್ (ಮೊದಲ ದಿನ, ಮೊದಲ ಪ್ರದರ್ಶನ). ಆದರೆ ಟಿಕೆಟ್ ಎಲ್ಲಿದೆ. ದಯವಿಟ್ಟು ಶಾರುಖ್ ಖಾನ್ ಅವರನ್ನು ಕೇಳಿ ನನಗೆ ಟಿಕೆಟ್ ಕೊಡಿಸಿ" ಎಂದು ಹೇಳಿದ್ದಾರೆ.

ಇತ್ತೀಚೆಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಜವಾನ್ ಮತ್ತು ಪ್ರಭಾಸ್ ಅವರ ಸಲಾರ್ ಅನ್ನು ಅಪಹಾಸ್ಯ ಮಾಡುವ ಮೀಮ್ ಅನ್ನು ಹಂಚಿಕೊಂಡಿದ್ದರು. ಇದಾದ ಮೂರು ದಿನಗಳಲ್ಲಿಯೇ ಜವಾನ್ ಟ್ರೈಲರ್ ಮತ್ತು ಜವಾನ್ ಸಿನಿಮಾ ನೋಡುವ ಬಗ್ಗೆ ಮಾತನಾಡಿದ್ದಾರೆ.

ಇದಲ್ಲದೇ, ವಿವೇಕ್ ತಮ್ಮ ಚಿತ್ರ ದಿ ವ್ಯಾಕ್ಸಿನ್ ವಾರ್, ಸಿನಿಮಾ ಪ್ರಚಾರಗಳು, ನಿರೀಕ್ಷೆ, ಚಿತ್ರದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಇದರ ಮಧ್ಯೆ ಹಲವರು ಅವರ ಸಿನಿಮಾಗಳನ್ನು ಟೀಕಿಸಿದ್ದಾರೆ. ಜೊತೆಗೆ ಅವರ ಚಲನಚಿತ್ರಗಳನ್ನು ಪ್ರೋಪಗಾಂಡ ಎಂದು ಕರೆದಿದ್ದಾರೆ.

jawan-trailer-is-adbhut

"ನಿಮ್ಮ ಹೊಸ ಪ್ರೋಪಗಾಂಡ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ" ಎಂದು ಪ್ರಶ್ನಿಸಿದ್ದಾರೆ. ಟ್ರೋಲಿಂಗ್‌ಗೆ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ, "ನೀವು ಸಹ ಪ್ರೋಪಗಾಂಡ ವ್ಯಾಕ್ಸಿನ್‌ನ ಭಾಗವಾಗಿದ್ದೀರಿ. ಇದು ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲಿದೆ. ಅದನ್ನು ವೀಕ್ಷಿಸಿ). ಇದಕ್ಕಾಗಿ ನಿಮ್ಮ ತಾಯಿ ನಿಮ್ಮನ್ನು ಪ್ರೀತಿಸುತ್ತಾರೆ" ಎಂದು ಟಾಂಗ್ ಕೊಟ್ಟಿದ್ದಾರೆ.

'ಸರ್ಕಾರ ಪರ' ಚಿತ್ರಗಳನ್ನು ನಿರ್ಮಿಸುವ ವಿವೇಕ್ ಅಗ್ನಿಹೋತ್ರಿ!

ಮತ್ತೊಬ್ಬ ಟ್ವಿಟರ್‌ ಬಳಕೆದಾರರು, "ನೀವು ಸರ್ಕಾರದ ಪರ ಚಲನಚಿತ್ರಗಳನ್ನು ಏಕೆ ಮಾಡುತ್ತಿದ್ದೀರಿ..? ಹಣಕ್ಕಾಗಿ ಅಥವಾ ಮುಂದಿನ ದಿನಗಳಲ್ಲಿ ರಾಜ್ಯಸಭಾ ಸ್ಥಾನಕ್ಕಾಗಿ..?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, "ನನ್ನ ಮಹತ್ವಾಕಾಂಕ್ಷೆಯು ರಾಜ್ಯಸಭೆಗೆ ಹೊಂದಿಕೊಳ್ಳುವಷ್ಟು ಚಿಕ್ಕದಲ್ಲ. ನನಗಾಗಿ ಏನಾದರೂ ದೊಡ್ಡದಾಗಿ ಯೋಚಿಸಿ" ಎಂದು ತಾವು ರಾಜ್ಯಸಭಾ ಸ್ಥಾನದ ಆಕಾಂಕ್ಷಿಯಲ್ಲ ಎಂದಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ತಯಾರಿಸಿದ ಕೊರೋನವೈರಸ್ ಲಸಿಕೆಯನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ನಾನಾ ಪಾಟೇಕರ್, ಅನುಪಮ್ ಖೇರ್, ರೈಮಾ ಸೇನ್ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಹಿಂದಿ, ಇಂಗ್ಲಿಷ್, ಬಾಂಗ್ಲಾ, ಪಂಜಾಬಿ, ಭೋಜ್‌ಪುರಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಬೆಂಬಲ ನೀಡಿದ್ದಾರೆ.

More from Filmibeat

English summary
Vivek Agnihotri praises Jawan trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X