Don't Miss!
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- News
ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಸಿಗಲಿದೆ ದಿನಸಿ, ಅಗತ್ಯ ಸರಕುಗಳು
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನಿರುದ್ಯೋಗಿ ಬಾಲಿವುಡ್ ಮಂದಿಗೆ ನಾನು ಅಭಾರಿ': ಮತ್ತೆ ಸಿಟ್ಟಿಗೆದ್ದ ಕಾಶ್ಮೀರ್ ಫೈಲ್ಸ್ ನಿರ್ದೇಶಕ!
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತಷ್ಟು ಜನಪ್ರಿಯರಾಗಿದ್ದಾರೆ. ಹಾಗೇ ವಿವೇಕ್ ಅಗ್ನಿಹೋತ್ರಿಗೆ ವಿರೋಧಿಗಳು ಕೂಡ ಹೆಚ್ಚಾಗಿದ್ದಾರೆ. ಹೀಗಾಗಿ ಆಗಾಗಾ ಈ ಸಿನಿಮಾ ನಿರ್ದೇಶಕ ಮುಖ್ಯ ಭೂಮಿಕೆಯಲ್ಲಿರುತ್ತಾರೆ.
ಗೋವಾ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಇರಾನಿ ನಿರ್ದೇಶಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲಿಂದ 'ದಿ ಕಾಶ್ಮೀರ್ ಫೈಲ್ಸ್' ಇತ್ತೀಚೆಗೆ ಮತ್ತೆ ವಿವಾದಕ್ಕೆ ಸಿಲುಕಿತ್ತು. ಆದ್ರೀಗ ಬೇರೆಯೊಂದು ಕಾರಣಕ್ಕೆ ವಿವೇಕ್ ಅಗ್ನಿ ಹೋತ್ರಿ ತಿರುಗಿಬಿದ್ದಿದ್ದಾರೆ.
ಕೆಲವು ದಿನಗಳಿಂದ ವಿವೇಕ್ ಅಗ್ನಿಹೋತ್ರಿ 17.90 ಕೋಟಿ ರೂ. ಬೆಲೆಯ ಐಶಾರಾಮಿ ಫ್ಲ್ಯಾಟ್ ಅನ್ನು ಖರೀದಿ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್, ಆಪ್, ಬಾಲಿವುಡ್ ಮಂದಿ ವಿರುದ್ಧ ಕಿಡಿ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ರಿಲೀಸ್ ಆದ ಬಳಿಕ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಐಶಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಅದರ ಬೆಲೆ ಬರೋಬ್ಬರಿ 17.90 ಕೋಟಿ ರೂ. ಅನ್ನೋ ಸುದ್ದಿ ಹರಿದಾಡಿತ್ತು. ಹಲವು ದಿನಗಳಿಂದ ಈ ಸುದ್ದಿ ಓಡಾಡುತ್ತಲೇ ಇದೆ. ಈ ಸುದ್ದಿಯ ವಿರುದ್ಧ ನಿರ್ದೇಶಕ ವಿವೇಕ್ ಕಿಡಿಕಾರಿದ್ದಾರೆ. ತನ್ನ ಟ್ವೀಟ್ನಲ್ಲಿ ಕಾಂಗ್ರೆಸ್, ಆಪ್ ಹಾಗೂ ಬಾಲಿವುಡ್ ಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹಳ ದಿನಗಳ ಬಳಿಕ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ಹೊಸ ಅಪಾರ್ಟ್ಮೆಂಟ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

ವಿವೇಕ್ ಅಗ್ನಿ ಹೋತ್ರಿ ಟ್ವೀಟ್ನಲ್ಲಿ ಏನಿದೆ?
ಈ ಹಿಂದೆ ವಿವೇಕ್ ಅಗ್ನಿಹೋತ್ರಿ ದುಬಾರಿ ಫ್ಲ್ಯಾಟ್ನ ಫೋಟೊಗಳು ಎಂದು ಶೇರ್ ಮಾಡಲಾಗಿತ್ತು. ಆ ಫೋಟೊಗಳನ್ನು ಇಟ್ಕೊಂಡು ಕಾಶ್ಮೀರ್ ಫೈಲ್ಸ್ ನಿರ್ದೇಶಕ ಟ್ವೀಟ್ ಮಾಡಿದ್ದಾರೆ. " ಎಲ್ಲಾ ಕಾಂಗ್ರೇಸಿಗರಿಗೆ, ಆಪ್ ಮಂದಿಗೆ, ನಿರುದ್ಯೋಗಿ ಬಾಲಿವುಡ್ ಮಂದಿಗೆ ನಾನು ಅಬಾರಿಯಾಗಿದ್ದೇನೆ. ನನಗಾಗಿ ಪ್ರತಿದಿನ ಹೊಸ ಅಪಾರ್ಟ್ಮೆಂಟ್ ಕಟ್ಟುತ್ತಿದ್ದಾರೆ. ಅಲ್ಲದೆ ದುಬಾರಿ ಫರ್ನಿಚರ್ನಿಂದ ಸಿಂಗಾರ ಮಾಡುತ್ತಿದ್ದಾರೆ. ನಾನು ನಿಜವಾಗಲೂ ಸೋಫಾವನ್ನು ಇಷ್ಟಪಟ್ಟಿದ್ದು, ಅದು 10 ಜನಪತ್ನಿಂದ ಬಂದಿದೆ." ಎಂದು ಕಿಡಿಕಾರಿದ್ದಾರೆ.

ಅಪಾರ್ಟ್ಮೆಂಟ್ ಬಗ್ಗೆ ಏನಿತ್ತು ಸುದ್ದಿ?
ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಷಿ ಮುಂಬೈನ ವಾರ್ಸೋವಾದಲ್ಲಿ ದುಬಾರಿ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. ಸುಮಾರು 3258 ಚದರ ಅಡಿಯ ಏರಿಯಾದಲ್ಲಿ ಪಾರ್ತೇನನ್ ಟವರ್ಸ್ನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ ಎನ್ನಲಾಗಿತ್ತು. ಇದು ಬೆಲೆ ಸುಮಾರು 17.9 ಕೋಟಿ ರೂ. ಎಂದು ವರದಿಯಾಗಿತ್ತು. ಆದ್ರೀಗ ವಿವೇಕ್ ಅಗ್ನಿಹೋತ್ರಿ ಅದೆಲ್ಲಾ ಸುಳ್ಳು ಅಂತ ಖಡಕ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇರಾನಿ ನಿರ್ದೇಶಕನ ವಿವಾದಾತ್ಮಕ ಹೇಳಿಕೆ
2022ರ ಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಇರಾನಿ ನಿರ್ದೇಶಕ 'ದಿ ಕಾಶ್ಮೀರ್ ಫೈಲ್ಸ್' ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜ್ಯೂರಿಯೂ ಆಗಿದ್ದ ಇರಾನಿ ನಿರ್ದೇಶಕ ನದಾವ್ ಲಪಿಡ್ ಈ ಸಿನಿಮಾ 'ಅಸಹ್ಯ' ಹಾಗೂ 'ಪ್ರೊಪಗೆಂಡಾ' ಎಂದು ಟೀಕಿಸಿದ್ದರು. ಆ ಹೇಳಿಕೆ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಆಗ ವಿವೇಕ್ "ಅವರ ಏನು ಹೇಳಿದ್ರು.. ಏನು ಹೇಳಿಲ್ಲ ಅನ್ನೋದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ." ಎಂದು ಹೇಳಿದ್ದರು.