ಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆ
ನಟ ವಿವೇಕ್ ಒಬೆಯಾರ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಮಾಜಿ ಪ್ರಿಯತಮೆ ಐಶ್ವರ್ಯ ರೈ ಅವರನ್ನು ಅನಗತ್ಯವಾಗಿ ಎಳೆದುತಂದು ಅವಿವೇಕ ತೋರಿದ ವಿವೇಕ್ ಗೆ ಮಹಿಳಾ ಆಯೋಗ ನೋಟೀಸ್ ಜಾರಿ ಮಾಡಿತ್ತು.
ಈ ಬಗ್ಗೆ ನಟ ವಿವೇಕ್ ಒಬೆರಾಯ್ ಕ್ಷಮೆ ಕೇಳಬೇಕು. ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತೆ. ಟ್ವಿಟ್ಟರ್ ಖಾತೆಯನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಗೆ ಮನವಿ ಮಾಡಬೇಕಾಗುತ್ತೆ ಎಂದು ಮಾಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಎಚ್ಚರಿಕೆ ನೀಡಿದ್ದರು.

ವಿಕೇಕ್ ಮಾಡಿದ್ದ ಟ್ವೀಟ್ ವಿರುದ್ಧ ಸಾಕಷ್ಟು ಬಾಲಿವುಡ್ ನಟ-ನಟಿಯರು ಗರಂ ಆಗಿದ್ದರು. ಅನೇಕರು ವಿವೇಕ್ ಅವರನ್ನು ತರಾಟೆಗೆ ತೆಗೆದುಕೊಂಡ ನಂತರ ತಪ್ಪಿನ ಅರಿವಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಕ್ಷಮೆಯಾಚಿಸುವ ಜೊತೆಗೆ ಐಶ್ವರ್ಯ ರೈ ಬಗ್ಗೆ ಮಾಡಿದ ಟ್ವೀಟ್ಟ್ಅನ್ನು ಡಿಲಿಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ದೇಶವೆ ಎದುರು ನೋಡುತ್ತಿದೆ. ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ. ಈ ಸಮಯದಲ್ಲಿ ನಟ ವಿವೇಕ್ ಒಬೆಯಾರ್, ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ನಡುವಿನ ಸಂಬಂಧವನ್ನು ಚುನಾವಣಾ ಫಲಿತಾಂಶಕ್ಕೆ ಹೋಲಿಸಿ ಮಾಡಲಾಗಿದ್ದ ಟ್ರೋಲ್ ಅನ್ನು ಶೇರ್ ಮಾಡುವ ಮೂಲಕ ವಿವಾದ ಸೃಷ್ಠಿಸಿಕೊಂಡಿದ್ದರು.
ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಫೋಟೋಗೆ ಒಪಿನಿಯನ್ ಪೋಲ್, ವಿವೇಕ್ ಒಬೆರಾಯ್ ಮತ್ತು ಐಶ್ವರ್ಯ ಫೋಟೋ ಕೆಳಗೆ ಎಕ್ಸಿಟ್ ಪೋಲ್ ಹಾಗೂ ಅಭಿಷೇಕ್ ಮತ್ತು ಐಶ್ವರ್ಯ ಫೋಟೋಗೆ ರಿಯಲ್ ರಿಸಲ್ಟ್ ಎನ್ನುವ ಫೋಟೋವನ್ನು ಹಂಚಿಕೊಂಡಿದ್ದರು. "ಹಾಹಾ! ಕ್ರಿಯೇಟಿವ್ ಆಗಿದೆ! ಇದರಲ್ಲಿ ಯಾವುದೆ ರಾಜಕೀಯ ಇಲ್ಲ. ಇದು ಜೀವನ" ಎಂದು ಬರೆದುಕೊಂಡಿದ್ದರು.
ಈ ಟ್ವೀಟ್ ನೋಡಿ ನೆಟ್ಟಿಗರು ಮಾತ್ರವಲ್ಲದೆ ಸೆಲೆಬ್ರಿಟಿಗಳು ವಿವೇಕ್ ಒಬೆರಾಯ್ ವಿರುದ್ಧ ಆಕ್ರೋಶ ವ್ಯಕ್ತಪಡಿದಿಸಿದ್ರು.


Click it and Unblock the Notifications











