For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ವೇಳೆ 14 ಕೆಜಿ ತೂಕ ಕಳೆದುಕೊಂಡ ವಿವೇಕ್ ಒಬೆರಾಯ್

  |

  ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ ಪತ್ನಿ ಜೊತೆ ಮುಂಬೈನಲ್ಲಿ ಬೈಕ್ ರೈಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಬೈಕ್ ಸವಾರಿ ವೇಳೆ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಟೀಕೆ ಎದುರಾಗಿತ್ತು.

  ಲಾಕ್‌ಡೌನ್ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ವಿವೇಕ್ ಒಬೆರಾಯ್ ಬಹಳ ಸೊರಗಿರುವಂತೆ ಕಂಡಿದ್ದರು. ವಿವೇಕ್ ಫಿಟ್ನೆಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯೂ ನಡೆದಿತ್ತು.

  ಗ್ರಾಮೀಣ ಭಾಗದ ಮಕ್ಕಳ ವಿಧ್ಯಾಭ್ಯಾಸಕ್ಕೆ 16 ಕೋಟಿ ಕಲೆಹಾಕಲಿರುವ ನಟಗ್ರಾಮೀಣ ಭಾಗದ ಮಕ್ಕಳ ವಿಧ್ಯಾಭ್ಯಾಸಕ್ಕೆ 16 ಕೋಟಿ ಕಲೆಹಾಕಲಿರುವ ನಟ

  ಆದರೆ, ಲಾಕ್‌ಡೌನ್ ಸಮಯದಲ್ಲಿ ವಿವೇಕ್ ಒಬೆರಾಯ್ 14 ಕೆಜಿ ತೂಕ ಕಳೆದಿಕೊಂಡಿದ್ದರು ಎಂದು ಸ್ವತಃ ನಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ಲಾಕ್‌ಡೌನ್‌ ಅನುಭವದ ಬಗ್ಗೆ ಬಾಂಬೆ ಟೈಮ್ಸ್‌ನೊಂದಿಗಿನ ಮಾತನಾಡಿರುವ ವಿವೇಕ್ ಒಬೆರಾಯ್, ''ತಿನ್ನುವುದು, ಗಂಟೆಗಳ ಕಾಲ ವೀಡಿಯೋ ನೋಡುವುದರ ನಡುವೆ ನನ್ನ ಟ್ರ್ಯಾಕ್ ಕಳೆದುಕೊಂಡಿದ್ದೆ. ನಾನು ಬೆಳಿಗ್ಗೆ 5 ಗಂಟೆಗೆ ಮಲಗುತ್ತಿದ್ದೆ ಮತ್ತು ಮಧ್ಯಾಹ್ನ ಎಚ್ಚರಗೊಳ್ಳುತ್ತಿದ್ದೆ. ನನ್ನ ಬಗ್ಗೆ ನನಗೆ ಅತೃಪ್ತಿ ಇತ್ತು. ಎಲ್ಲವನ್ನೂ ತಪ್ಪಾಗಿ ಮಾಡುತ್ತಿದ್ದೆ. ಈ ಅವಧಿಯಲ್ಲಿ ನಾನು ಸಾಕಷ್ಟು ತೂಕವನ್ನು ಹೊಂದಿದ್ದೆ" ಎಂದು ತಿಳಿಸಿದ್ದರು.

  "ಹೀಗಾಗಿ, ನಾನು ನನ್ನಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿಕೊಂಡೆ. ಕಟ್ಟುನಿಟ್ಟಿನ ಕಟ್ಟುಪಾಡುಗಳನ್ನು ಅನುಸರಿಸಿದೆ. ನನ್ನ ಸಂಪೂರ್ಣ ಜೀವನಶೈಲಿಯನ್ನು ಬದಲಾಯಿಸಿದೆ. ನಾನು ಮುಂಜಾನೆ 4.30ಕ್ಕೆ ಎಚ್ಚರಗೊಳ್ಳಲು ಪ್ರಾರಂಭಿಸಿದೆ. ಯೋಗ ಮತ್ತು ವರ್ಕೌಟ್ ಮಾಡಿದೆ. ಜ್ಯೂಸ್ ಡಯಟ್ ಮೊರೆ ಹೋದೆ. ಈ ವೇಳೆ ಬಹಳಷ್ಟು ಪುಸ್ತಕಗಳನ್ನು ಓದಿದ್ದೇನೆ, ಸ್ಕ್ರಿಪ್ಟ್‌ಗಳನ್ನು ಅಭಿವೃದ್ಧಿಪಡಿಸಿದೆ. ಕೆಲಸದ ಮೇಲೆ ಕೇಂದ್ರೀಕರಿಸಿದೆ. ಈ ಶಿಸ್ತುಬದ್ಧ ಜೀವನಶೈಲಿಯಿಂದ ನಾನು 14 ಕಿಲೋ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಯಿತು. ನಾನು ಈಗ ಆರೋಗ್ಯವಾಗಿದ್ದೇನೆ'' ಎಂದು ಒಬೆರಾಯ್ ಮಾಹಿತಿ ನೀಡಿದ್ದಾರೆ.

  ರಾಬರ್ಟ್ ಅಬ್ಬರಕ್ಕೆ KGF ದಾಖಲೆ ಧೂಳಿಪಟ | Darshan | Yash | Filmibeat Kannada
  English summary
  Bollywood Actor Vivek oberoi lost 14 Kg Weight during Lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X