ಬಾಲಿವುಡ್‌ನ 'ಕೆಟ್ಟ ಮುಖ'ದ ಬಗ್ಗೆ ವಿವೇಕ್ ಒಬೆರಾಯ್ ಮಾತು
ಕನ್ನಡದ 'ರುಸ್ತುಂ' ಸೇರಿದಂತೆ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ವಿವೇಕ್ ಒಬೆರಾಯ್ ಒಂದು ರೀತಿ ಬಾಲಿವುಡ್‌ನಲ್ಲಿ ಇದ್ದರೂ ಇಲ್ಲದಂತೆ. ಅದಕ್ಕೆ ಹಲವು ಕಾರಣಗಳಿವೆ. ಆದರೆ ಈಗ ಅವರು ಬಾಲಿವುಡ್‌ನ 'ಇನ್ನೊಂದು ಮುಖ'ದ ಬಗ್ಗೆ ಮಾತನಾಡಿದ್ದಾರೆ.
19 ವರ್ಷಗಳಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ವಿವೇಕ್ ಒಬೆರಾಯ್ ಉದ್ಯಮದ ಬಗ್ಗೆ ಹಲವು ವಿಷಯ ಅರಿತಿದ್ದಾರೆ. ಒಂದು ಸಮಯದಲ್ಲಿ ದೊಡ್ಡ ಸ್ಟಾರ್‌ಡಮ್ ಅನುಭವಿಸಿದ್ದ ವಿವೇಕ್ ಆ ನಂತರ ಕೆಳಮಟ್ಟಕ್ಕೆ ಕುಸಿದರು. ನಂತರ ಸಾವರಿಸಿಕೊಂಡು ಈಗ ಆವರೇಜ್ ಸ್ಟಾರ್ ಎಂಬಲ್ಲಿಗೆ ಬಂದು ನಿಂತಿದ್ದಾರೆ.
ಸರಿ ಸುಮಾರು ಎರಡು ದಶಕಗಳಿಂದಲೂ ಬಾಲಿವುಡ್ ಅನ್ನು ಕಂಡಿರುವ ವಿವೇಕ್ ಒಬೆರಾಯ್ ಈಗ ಬಾಲಿವುಡ್‌ನ 'ಇನ್ನೊಂದು ಮುಖ' ಅಥವಾ ಕೆಟ್ಟ ಮುಖದ ಬಗ್ಗೆ ಮಾತನಾಡಿದ್ದಾರೆ. ಒಬೆರಾಯ್ ಮಾತುಗಳಿಗೆ ನೆಟ್ಟಿಜನರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
'ನಮ್ಮ ಉದ್ಯಮದಲ್ಲಿ ಖಂಡಿತ ಸಮಸ್ಯೆ ಇದೆ. ಆದರೆ ಅದನ್ನು ಗುರುತಿಸಲು ನಾವು ತಯಾರಿಲ್ಲ. ಬಾಲಿವುಡ್ ಸಿನಿಮಾ ಉದ್ಯಮವು 'ಆಸ್ಟ್ರಿಚ್ ಸಿಂಡ್ರೋಮ್'ನಿಂದ ಬಳಲುತ್ತಿದೆ. ತಪ್ಪುಗಳನ್ನು ಗುರುತಿಸಲು ಅದನ್ನು ಸರಿಪಡಿಸಲು ಇಲ್ಲಿ ಯಾರಿಗೂ ಇಷ್ಟವಿಲ್ಲ' ಎಂದಿದ್ದಾರೆ ವಿವೇಕ್ ಒಬೆರಾಯ್.

ಬಾಲಿವುಡ್‌ಗೆ ಎರಡು ಮುಖ ಇದೆ: ವಿವೇಕ್ ಒಬೆರಾಯ್
'ಪ್ರತಿ ವ್ಯಕ್ತಿಗೂ, ಪ್ರತಿ ಉದ್ಯಮಕ್ಕೂ ಒಳ್ಳೆಯ ಮುಖದ ಜೊತೆಗೆ ಕೆಟ್ಟ ಮುಖವೂ ಇರುತ್ತದೆ. ನಾವದನ್ನು ಗುರುತಿಸಬೇಕು. ನಮ್ಮಲ್ಲಿ ಎಷ್ಟು ಕೊರತೆ ಇದೆ, ಎಷ್ಟು ತಪ್ಪಿದೆ, ಎಷ್ಟು ತಪ್ಪು ಮಾಡಿದ್ದೇವೆ, ಎಷ್ಟು ಅನ್ಯಾಯ ಮಾಡಿದ್ದೇವೆ ಎಂಬುದನ್ನು ಗುರುತಿಸಿ ಅದನ್ನು ಒಪ್ಪಿಕೊಳ್ಳಬೇಕು' ಎಂದಿದ್ದಾರೆ ವಿವೇಕ್.

ಸುಶಾಂತ್ ಸಾವಿನ ಬಗ್ಗೆ ಮಾತು
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತನಾಡುತ್ತಾ, 'ಸುಶಾಂತ್ ಸಿಂಗ್ ಘಟನೆ ಆದಾಗಲೂ ಅಷ್ಟೆ, ನಮ್ಮ ಉದ್ಯಮದ ವ್ಯವಸ್ಥೆಯಲ್ಲಿಯೇ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಳ್ಳಲು ಯಾರೂ ತಯಾರಿರಲಿಲ್ಲ. ಎಲ್ಲರೂ ಇದೊಂದು ಸಾಮಾನ್ಯ ಘಟನೆ ಎಂಬಂತೆ ವರ್ತಿಸಿದರು ಮತ್ತು ಮರೆತುಬಿಟ್ಟರು. ಕೆಟ್ಟ ವ್ಯವಸ್ಥೆ ಹಾಗೆಯೇ ಮುಂದುವರೆದಿದೆ' ಎಂದಿದ್ದಾರೆ ವಿವೇಕ್ ಒಬೆರಾಯ್.

ಸಲ್ಮಾನ್ ಖಾನ್ ಜೊತೆ ಕಿರಿಕ್
ನಟ ವಿವೇಕ್ ಒಬೆರಾಯ್, ಐಶ್ವರ್ಯಾ ರೈರ ಬಾಯ್‌ಫ್ರೆಂಡ್ ಆಗಿದ್ದರು ಆ ಸಮಯದಲ್ಲಿ ಸಲ್ಮಾನ್ ಖಾನ್ ವಿವೇಕ್ ಮೇಲೆ ಜಗಳ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. 'ಸಲ್ಮಾನ್ ಖಾನ್ ನನಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದು ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು ವಿವೇಕ್. ಆರಂಭದಲ್ಲಿ ದೊಡ್ಡ ಸ್ಟಾರ್‌ಡಮ್ ಗಿಟ್ಟಿಸಿಕೊಂಡಿದ್ದ ವಿವೇಕ್ ಒಬೆರಾಯ್ ನಿಧಾನಕ್ಕೆ ಅದನ್ನು ಕಳೆದುಕೊಂಡರು. ಈಗ ಸೆಕೆಂಡ್ ಹೀರೋ, ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
Recommended Video

ಕರ್ನಾಟಕದ ಅಳಿಯ ವಿವೇಕ್ ಒಬೆರಾಯ್
ವಿವೇಕ್ ಒಬೆರಾಯ್, ಕರ್ನಾಟಕದ ರಾಜಕಾರಣಿ, ದಿವಂಗತ ಜೀವರಾಜ್ ಆಳ್ವರ ಅಳಿಯ. ಜೀವರಾಜ್ ಆಳ್ವರ ಮಗಳು ಪ್ರಿಯಾಂಕಾರನ್ನು ಮದುವೆಯಾಗಿದ್ದಾರೆ ವಿವೇಕ್. ಪ್ರಿಯಾಂಕಾ ಆಳ್ವರ ಸಹೋದರ ಆದಿತ್ಯ ಆಳ್ವ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರು. ಸಿಸಿಬಿಯಿಂದ ಬಂಧನಕ್ಕೊಳಗಾಗಿದ್ದ ಆದಿತ್ಯ ಆಳ್ವ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.


Click it and Unblock the Notifications











