For Quick Alerts
  ALLOW NOTIFICATIONS  
  For Daily Alerts

  ಗ್ರಾಮೀಣ ಭಾಗದ ಮಕ್ಕಳ ವಿಧ್ಯಾಭ್ಯಾಸಕ್ಕೆ 16 ಕೋಟಿ ಕಲೆಹಾಕಲಿರುವ ನಟ

  |

  ಬಾಲಿವುಡ್ ನಟ, ಕರ್ನಾಟಕದ ಅಳಿಯ ವಿವೇಕ್ ಒಬೆರಾಯ್ ಅವರದ್ದು ಬಾಲಿವುಡ್‌ನಲ್ಲಿ ಬಹುದೊಡ್ಡ ಸ್ಟಾರ್ ಪಟ್ಟವೇನೂ ಅಲ್ಲ, ಆದರೆ ಅವರ ಹೃದಯ ಮಾತ್ರ ಸಣ್ಣದಲ್ಲ.

  ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು 16 ಕೋಟಿ ರೂ ಹಣ ಸಂಗ್ರಹಿಸಲು ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದಾರೆ ವಿವೇಕ್ ಒಬೆರಾಯ್.

  ಗ್ರಾಮೀಣ ಭಾಗದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈ ಅಭಿಯಾನದಿಂದ ಸಂಗ್ರಹವಾಗುವ ಹಣವನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.

  ಶಿವಣ್ಣನ ಮಾತಿಗೆ ವಿರುದ್ಧವಾಗಿ ನಡೆದುಕೊಂಡ ಧ್ರುವ ಸರ್ಜಾ | Filmibeat Kannada

  ಇದೇ ಅಭಿಯಾನದ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜೆಇಇ, ಎನ್‌ಇಇಟಿ ಮುಂತಾದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಆಲೋಚನೆಯೂ ಇದೆ.

  'ಯಾವುದೇ ಗ್ರಾಮದ ವಿದ್ಯಾರ್ಥಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದನೆಂದರೆ ಆತ ತಾನು ತನ್ನ ಕುಟುಂಬವನ್ನು ಮಾತ್ರವೇ ಅಭಿವೃದ್ಧಿಪಡಿಸುವುದಿಲ್ಲ, ಬದಲಿಗೆ ತನ್ನ ಹಳ್ಳಿಯಲ್ಲಿಯೂ ಬದಲಾವಣೆ ತರುತ್ತಾನೆ' ಎಂದಿದ್ದಾರೆ ವಿವೇಕ್ ಒಬೆರಾಯ್.

  'ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ ಆದರೆ ಅವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಎಷ್ಟೋ ಮಂದಿಗೆ ಉನ್ನತ ಶಿಕ್ಷಣ ಮಾಡಲು ಸೂಕ್ತ ಸೌಲಭ್ಯಗಳು ದೊರಕುತ್ತಿಲ್ಲ' ಎಂದು ವಿವೇಕ್ ಒಬೆರಾಯ್ ಬೇಸರ ವ್ಯಕ್ತಪಡಿಸಿದ್ದಾರೆ.

  'ಅವರ ಜನ್ಮಸ್ಥಳದ ಕಾರಣದಿಂದ ಅಂಥಹಾ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ನನ್ನ ತಂಡ ಸೇರಿಕೊಂಡು ಈ ಅಭಿಯಾನ ಆರಂಭಿಸಿದ್ದೇವೆ. ನಾವುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ' ಎಂದಿದ್ದಾರೆ ವಿವೇಕ್ ಒಬೆರಾಯ್.

  ರಾಜ್ಯದ ಪ್ರಮುಖ ರಾಜಕಾರಣಿ ದಿವಂಗತ ಜೀವರಾಜ್ ಆಳ್ವಾ ಅವರ ಪುತ್ರಿ ಪ್ರಿಯಾಂಕಾ ಆಳ್ವಾ ಅವರನ್ನು 2010 ರಲ್ಲಿ ವಿವೇಕ್ ಒಬೆರಾಯ್ ವಿವಾಹವಾಗಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆದಿತ್ಯ ಆಳ್ವಾಗೆ ವಿವೇಕ್ ಒಬೆರಾಯ್ ಭಾವ.

  English summary
  Actor Vivek Oberoi started campaign to help rural area students for their higher studies. He is planing to rise 16 crore this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X