For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಫೋಟೋ ಶೇರ್ ಮಾಡಿದ ವಿವೇಕ್ ವಿರುದ್ಧ ನೆಟ್ಟಿಗರ ಆಕ್ರೋಶ

  |

  ನಟ ವಿವೇಕ್ ಒಬೆಯಾರ್ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮೋದಿ ಭಕ್ತರು ಕಾತುರದಿಂದ ಕಾಯುತ್ತಿರುವ ನರೇಂದ್ರ ಮೋದಿ ಬಯೋಪಿಕ್ ನಲ್ಲಿ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಇದೆ ತಿಂಗಳು 24ಕ್ಕೆ ತೆರೆಗೆ ಬರುತ್ತಿದೆ.

  ಇದಕ್ಕಿಂತಲೂ ಮಿಗಿಲಾಗಿ 2019 ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ಭಾರತೀಯರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಇನ್ನೇನು ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ. ಈ ಸಮಯದಲ್ಲಿ ಅನೇಕ ಖಾಸಗಿ ಸುದ್ದಿ ವಾಹಿನಿಗಳು ಚುನವಣೋತ್ತರ ಸಮೀಕ್ಷೆಯನ್ನು ಜನತೆಯ ಮುಂದೆ ಇಡುತ್ತಿದ್ದಾರೆ.

  ಈ ಸಮಯದಲ್ಲಿ ನಟ ವಿವೇಕ್ ಒಬೆಯಾರ್, ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ನಡುವಿನ ಸಂಬಂಧವನ್ನು ಚುನಾವಣಾ ಫಲಿತಾಂಶಕ್ಕೆ ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ. ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಫೋಟೋಗೆ ಒಪಿನಿಯನ್ ಪೋಲ್, ವಿವೇಕ್ ಒಬೆರಾಯ್ ಮತ್ತು ಐಶ್ವರ್ಯ ಫೋಟೋಗೆ ಎಕ್ಸಿಟ್ ಪೋಲ್ ಹಾಗೂ ಅಭಿಷೇಕ್ ಮತ್ತು ಐಶ್ವರ್ಯ ಫೋಟೋಗೆ ರಿಯಲ್ ರಿಸಲ್ಟ್ ಎನ್ನುವ ಟ್ರೋಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಇದೇ ಫೋಟೋವನ್ನು ನಟ ವಿವೇಕ್ ಒಬೆರಾಯ್ ಟ್ವಿಟ್ಟರ್ ನಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 'ಹಾಹಾ! ಕ್ರಿಯೇಟಿವ್ ಆಗಿದೆ! ಇದರಲ್ಲಿ ಯಾವುದೆ ರಾಜಕೀಯ ಇಲ್ಲ. ಇದು ಜೀವನ ಎಂದು ಬರೆದುಕೊಂಡಿದ್ದಾರೆ'

  ಈ ಟ್ವೀಟ್ ನೋಡಿ ನೆಟ್ಟಿಗರು ವಿವೇಕ್ ಒಬೆರಾಯ್ ಅವರಿಗೆ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. "ಇದೊಂದು ಚೀಪ್ ಜೋಕ್, ವಿವೇಕ್ ತುಂಬ ಕೆಟ್ಟ ಅಭಿರುಚಿಯ ಮನುಷ್ಯ ಎಂದು ಗೊತ್ತಾಗುತ್ತಿದೆ. ಮಗುವನ್ನು ಎಳೆದು ತರುತ್ತಿದ್ದಾರೆ" ಎಂದು ಕೆಲವರು ಹೇಳಿದ್ರೆ, ಇನ್ನು ಕೆಲವರು "ನಿಮ್ಮ ಕೆಟ್ಟ ಜೋಕನ್ನು ಇನ್ನೊಬ್ಬರ ಖಾಸಗಿ ಬದುಕಿನ ಮೇಲೆ ಹಾಕಬೇಡಿ" ಎಂದು ಹೇಳಿದ್ದಾರೆ. "ಇನ್ನೊಬ್ಬರ ಬದುಕನ್ನು ಇಲ್ಲಿ ಚರ್ಚಿಸಬೇಕಾಗಿಲ್ಲ. ನಿಮಗೆ ನಾಚಿಕೆಯಾಗಬೇಕು" ಎಂದು ಅನೇಕರು ವಿವೇಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  English summary
  Bollywood actor Vivek tweeted a meme on Aishwarya Rai Bachan. This meme shows three different stage of Aishwarya rai Bachchan's old life with Salman khan, Vivek Oberoi and marriage Abhishek Bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X