For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ನೀಡಿದ್ದ ಬಾಲಿವುಡ್ ಅವಕಾಶ ನಿರಾಕರಿಸಿದ್ದ ವಿಜಯ್ ದೇವರಕೊಂಡ!

  |

  ವಿಜಯ್ ದೇವರಕೊಂಡ ವೃತ್ತಿ ಜೀವನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಿದೆ. ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆಗುವ ಮೊದಲೇ ಬಾಲಿವುಡ್‌ ಅವಕಾಶಗಳು ಅವರಿಗೆ ಎದುರಾಗಿದೆ. ಈಗಾಗಲೇ ಬಾಲಿವುಡ್‌ ಪ್ರಾಜೆಕ್ಟ್‌ಗೆ ಓಕೆ ಎಂದಿದ್ದಾರಂತೆ ವಿಜಯ್ ದೇವರಕೊಂಡ.

  ಇದೀಗ ಬಿಡುಗಡೆ ಆಗಲಿರುವ 'ಲೈಗರ್' ಸಿನಿಮಾಕ್ಕೆ ಬಾಲಿವುಡ್‌ನ ಜನಪ್ರಿಯ ನಿರ್ಮಾಪಕ ಕರಣ್ ಜೋಹರ್ ಸಹಕಾರ ನೀಡಿದ್ದಾರೆ. ಹಿಂದಿಯ ಆವೃತ್ತಿಯ ವಿತರಕ ಅವರೇ ಆಗಿದ್ದು, ಸಹ ನಿರ್ಮಾಪಕರೂ ಆಗಿದ್ದಾರೆ ಎನ್ನಲಾಗುತ್ತಿದೆ.

  'ಲೈಗರ್' ಆ ಸಿನಿಮಾದ ರಿಮೇಕ್ ಅಲ್ವೇ ಅಲ್ಲ: ವಿಜಯ್ ದೇವರಕೊಂಡ ಖಡಕ್ ರೆಸ್ಪಾನ್ಸ್!'ಲೈಗರ್' ಆ ಸಿನಿಮಾದ ರಿಮೇಕ್ ಅಲ್ವೇ ಅಲ್ಲ: ವಿಜಯ್ ದೇವರಕೊಂಡ ಖಡಕ್ ರೆಸ್ಪಾನ್ಸ್!

  ಆದರೆ 'ಲೈಗರ್' ಸಿನಿಮಾ ಚಿತ್ರೀಕರಣಕ್ಕೆ ಮೊದಲೇ ವಿಜಯ್ ದೇವರಕೊಂಡಗೆ ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಯಿಂದ ಆಫರ್ ಬಂದಿತ್ತು ಆದರೆ ಅದನ್ನವರು ನಿರಾಕರಿಸಿದ್ದರು ಎನ್ನಲಾಗುತ್ತಿದೆ. ಸ್ವತಃ ಕರಣ್ ಜೋಹರ್, ವಿಜಯ್ ದೇವರಕೊಂಡಗೆ ಸಿನಿಮಾ ಆಫರ್ ನೀಡಿದ್ದರು ಆದರೆ ಅದನ್ನು ನಿರಾಕರಿಸಿದ್ದರು ವಿಜಯ್.

  ಅವಕಾಶ ನೀಡಿದ್ದ ಕರಣ್ ಜೋಹರ್

  ಅವಕಾಶ ನೀಡಿದ್ದ ಕರಣ್ ಜೋಹರ್

  'ಲೈಗರ್' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿರುವ ವಿಜಯ್ ದೇವರಕೊಂಡ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಬಾಲಿವುಡ್ ಡೆಬ್ಯೂಟ್ ಬಗ್ಗೆ ಮಾತನಾಡುತ್ತಾ, 'ಅರ್ಜುನ್ ರೆಡ್ಡಿ ಸಿನಿಮಾ ವೀಕ್ಷಿಸಿದ ಬಳಿಕ ಕರಣ್ ಜೋಹರ್ ನನಗೆ ಬಾಲಿವುಡ್ ಅವಕಾಶ ನೀಡಿದರು. ಆದರೆ ನಾನಾಗ ಪೂರ್ಣವಾಗಿ ರೆಡಿ ಆಗಿರಲಿಲ್ಲ ಹಾಗಾಗಿ ಆ ಸಿನಿಮಾ ಒಪ್ಪಿಕೊಳ್ಳಲಿಲ್ಲ'' ಎಂದಿದ್ದಾರೆ.

  ಕರಣ್ ನಮಗೆ ಪೂರ್ಣ ಸಹಕಾರ ನೀಡಿದರು: ವಿಜಯ್

  ಕರಣ್ ನಮಗೆ ಪೂರ್ಣ ಸಹಕಾರ ನೀಡಿದರು: ವಿಜಯ್

  ''ಆದರೆ 'ಲೈಗರ್' ಸಿನಿಮಾದ ಸಂದರ್ಭದಲ್ಲಿ ನಾವೇ ಹೋಗಿ ಕರಣ್ ಜೋಹರ್ ಸಹಾಯ ಕೇಳಿದೆವು ಅವರು ಎಲ್ಲ ರೀತಿಯಲ್ಲಿಯೂ ನಮಗೆ ಸಹಾಯ ಮಾಡಿದರು'' ಎಂದಿದ್ದಾರೆ. ''ಲೈಗರ್ ಸಿನಿಮಾಗೆ ಪ್ಯಾನ್ ಇಂಡಿಯಾ ಅಪೀಲ್ ಇದೆ ಎನಿಸಿತು. ಹಾಗಾಗಿ ನಾವು ಕರಣ್ ಜೋಹರ್ ಸಹಾಯ ಕೇಳಿದೆವು. ಕೂಡಲೇ ಅವರು ನಮ್ಮೊಟ್ಟಿಗೆ ಕೈಜೋಡಿಸಿದರು. ಸಿನಿಮಾದ ಎಲ್ಲ ಹಂತದಲ್ಲಿಯೂ ಅವರು ನಮಗೆ ಸಹಾಯ ಮಾಡಿದರು. ನಮ್ಮ ಜೊತೆಗೆ ನಿಂತರು'' ಎಂದಿದ್ದಾರೆ.

  ಹಲವು ಸಿನಿಮಾಗಳು ವಿಜಯ್ ಕೈಯಲ್ಲಿವೆ

  ಹಲವು ಸಿನಿಮಾಗಳು ವಿಜಯ್ ಕೈಯಲ್ಲಿವೆ

  'ಲೈಗರ್' ಸಿನಿಮಾ ಹಿಟ್ ಆಗುವ ನಿರೀಕ್ಷೆ ಹುಟ್ಟಿಸಿದೆ. ಇದರ ಬೆನ್ನಲ್ಲೆ ವಿಜಯ್ ದೇವರಕೊಂಡ ತಮ್ಮ ಮೊದಲ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ಇದೆ. ಜೊತೆಗೆ ಸುಕುಮಾರ್ ನಿರ್ದೇಶನದ ತೆಲುಗು ಸಿನಿಮಾ ಒಂದರಲ್ಲಿ ವಿಜಯ್ ನಟಿಸಲಿದ್ದಾರೆ. ಆ ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡಲಿದ್ದಾರೆ. ಅದರ ಬಳಿಕ ಪುರಿ ಜಗನ್ನಾಥ್ ಅವರೇ ನಿರ್ದೇಶಿಸುತ್ತಿರುವ ಮತ್ತೊಂದು ಸಿನಿಮಾ 'ಜನ ಗಣ ಮನ'ದಲ್ಲಿ ನಟಿಸಲಿದ್ದಾರೆ. ಇವುಗಳ ಮಧ್ಯೆ ಸಮಂತಾ ಜೊತೆ ನಟಿಸಿರುವ 'ಖುಷಿ' ಸಿನಿಮಾ ಸಹ ಬಿಡುಗಡೆ ಆಗಲಿದೆ.

  ಆಗಸ್ಟ್ 25 ಕ್ಕೆ ಸಿನಿಮಾ ಬಿಡುಗಡೆ

  ಆಗಸ್ಟ್ 25 ಕ್ಕೆ ಸಿನಿಮಾ ಬಿಡುಗಡೆ

  'ಲೈಗರ್' ಸಿನಿಮಾ ಮಾರ್ಷಲ್ ಆರ್ಟ್ ಮತ್ತು ಕಿಕ್ ಬಾಕ್ಸಿಂಗ್ ಮಾಡುವ ಯುವಕ ಕತೆಯುಳ್ಳ ಸಿನಿಮಾ ಆಗಿದೆ. ಜೊತೆಗೆ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ಸಹ ಇದೆ ಎಂಬುದನ್ನು ಟ್ರೈಲರ್ ಹೇಳುತ್ತಿದೆ. ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಎದುರಾಗಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ರಮ್ಯಾ ಕೃಷ್ಣ ತಾಯಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ರೋನಿತ್ ರಾಯ್, ವಿಜಯ್ ದೇವರಕೊಂಡಗೆ ಕೋಚ್ ಆಗಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಸಿನಿಮಾದಲ್ಲಿ ಮೈಕ್ ಟೈಸನ್ ಸಹ ಇದ್ದಾರೆ. ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಚಾರ್ಮಿ ಹಾಗೂ ಪುರಿ ಜಗನ್ನಾಥ್ ಇಬ್ಬರದ್ದೂ ಆಗಿದ್ದು, ಕರಣ್ ಜೋಹರ್ ಸಹ ನಿರ್ಮಾಪಕರಾಗಿದ್ದಾರೆ. ಆಗಸ್ಟ್ 25 ರಂದು ಸಿನಿಮಾ ತೆರೆಗೆ ಬರಲಿದೆ.

  English summary
  Actor Vijay Devarakonda rejected Karan Johar's Bollywood movie offer five years back itself. Karan impressed with Vijay after watching Arjun Reddy.
  Tuesday, August 16, 2022, 21:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X