»   » ಬಾರ್ ಗಳಲ್ಲಿ ರಾಮ್ ಗೋಪಾಲ್ ವರ್ಮಾ ಪುಸ್ತಕ

ಬಾರ್ ಗಳಲ್ಲಿ ರಾಮ್ ಗೋಪಾಲ್ ವರ್ಮಾ ಪುಸ್ತಕ

Posted By:
Subscribe to Filmibeat Kannada

ಇದೇನಪ್ಪಾ ಇದು ಮಟನ್ ಅಂಗಡಿಯಲ್ಲಿ ಮಲ್ಲಿಗೆ ಹೂವು ಎಂದು ಅಚ್ಚರಿಯಾಗುತ್ತಿದೆಯೇ. ಹೌದು ಬಾರ್ ಗಳಲ್ಲಿ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಗ್ಗೆ ಅಭಿಮಾನಿಯೊಬ್ಬ ಹೊರತಂದಿರುವ ಪುಸ್ತಕವೊಂದು ಭರ್ಜರಿಯಾಗಿ ಬಿಕರಿಯಾಗುತ್ತಿದೆ.

ಈ ಪುಸ್ತಕದ ಹೆಸರು 'ವೋಡ್ಕಾ ವಿತ್ ವರ್ಮ'. ಸಿರಾಶ್ರೀ ಎಂಬುವವರು ಬರೆದಿರುವ ಈ ಪುಸ್ತಕದಲ್ಲಿ ವರ್ಮಾ ಅವರ 'ಶಿವ' (1989) ಚಿತ್ರದಿಂದ ಹಿಡಿದು ಇಲ್ಲಿಯವರೆಗಿನ ಅವರ ಏಳುಬೀಳುಗಳನ್ನು ಬಿಡಿಸಿಟ್ಟಿದ್ದಾರೆ.

Vodka with Varma

ವೋಡ್ಕಾ ಬಗೆಗಿನ ವರ್ಮಾ ಪ್ರೀತಿ, ಸೆಕ್ಸ್ ಬಗೆಗಿನ ಅವರ ಅನಿಸಿಕೆ, ಅವರ ಸೆಕ್ಸ್ ಲೈಫ್, ಮಕ್ಕಳು, ಅವರ ನೆಚ್ಚಿನ ನಟಿಯರು, ಮಹಾಭಾರತ, ರಾಮಾಯಾಣ...ಹೀಗೆ ಎಲ್ಲವನ್ನೂ ಈ ಪುಸ್ತಕದಲ್ಲಿ ವರ್ಮಾ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸ್ವತಃ ವರ್ಮಾ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಹಾಕಿಕೊಂಡಿದ್ದಾರೆ. ಒಟ್ಟಿನಲ್ಲಿ ವೈನ್ ಶಾಪಿನಲ್ಲಿ ಪುಸ್ತಕ ಮಾರಾಟವಾಗುತ್ತಿದೆ. ಈ ಪುಸ್ತಕದಲ್ಲಿ ಏನೇನಿದೆಯೋ ಏನೋ ಎಂದು ವರ್ಮಾ ಅಭಿಮಾನಿಗಳು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.

'ವೋಡ್ಕಾ ವಿತ್ ವರ್ಮಾ' ಪುಸ್ತಕದಲ್ಲಿ ಒಟ್ಟು ನಲವತ್ತು ಅಧ್ಯಾಯಗಳಿವೆ. ಒಂದೊಂದಕ್ಕೂ ಒಂದು ವಿಭಿನ್ನ ಹೆಸರು ನೀಡಲಾಗಿದೆ. ಪೆಗ್ಸ್, ಸೋಡಾ, ವಾಟರ್, ಬಾಟಮ್ ಅಪ್ಸ್...ಹೀಗೆ ಹೆಸರಿಡಲಾಗಿದೆ. ಇದಿಷ್ಟೇ ಅಲ್ಲದೆ ಅವರ ವಿಚ್ಛೇದಿತ ಪತ್ನಿಯ ಸಂದರ್ಶನ ಕೂಡ ಇದೆ. (ಏಜೆನ್ಸೀಸ್)

English summary
The surprising news is that the book penned by Sirasri on the life history of Ram Gopal Varma by name 'Vodka with Varma' evoked some response not only for book lovers but also to the wine shop owners as the book contained the name Vodka.
Please Wait while comments are loading...