ಮಾಜಿ ಪ್ರೇಮಿಗಳಿಗೆ ದಕ್ಕಿದ ವರ್ಷದ ಸುಂದರ-ಸುಂದರಿ ವೋಗ್ ಬ್ಯೂಟಿ ಪ್ರಶಸ್ತಿ

By ಸೋನು ಗೌಡ

ನಿನ್ನೆ (ಜುಲೈ 27, 2016) ರಾತ್ರಿ ತಾಜ್ ಲಾಂಡ್ಸ್ ಎಂಡ್ ಹೋಟೆಲ್ ನಲ್ಲಿ ಬಾಲಿವುಡ್ ನ ತಾರೆಯರೆಲ್ಲಾ ಕಲರ್ ಫುಲ್ ಆಗಿ ಮಿನುಗುತ್ತಿದ್ದರು. ಅಂದ-ಚೆಂದದ ಕಣ್ಣು ಕುಕ್ಕುವಂತಹ ವಿಭಿನ್ನ ಉಡುಗೆ ತೊಟ್ಟು ಕಂಗೊಳಿಸುತ್ತಿದ್ದರು.

ಅದ್ರಲ್ಲೂ ವಿಶೇಷವಾಗಿ ನಟಿ ಕತ್ರಿನಾ ಕೈಫ್ ಮತ್ತು ನಟ ರಣಬೀರ್ ಕಪೂರ್ ಅವರು ಬ್ರೇಕ್ ಅಪ್ ಆದ ಮೇಲೆ ಇದೇ ಮೊದಲ ಬಾರಿಗೆ ಒಟ್ಟಾಗಿ ಒಂದು ಕಲರ್ ಫುಲ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.[50ರ ಸಂಭ್ರಮದಲ್ಲಿರುವ ನಟನಿಂದ, 'ವೋಗ್' ನಿಯತಕಾಲಿಕೆಗೆ ಹಾಟ್ ಫೋಸ್]

ಅಂದಹಾಗೆ ನಿನ್ನೆ ತಾಜ್ ಎಂಡ್ ಹೋಟೆಲ್ ನಲ್ಲಿ 'ವೋಗ್ ಬ್ಯೂಟಿ ಆವಾರ್ಡ್ಸ್' ಪ್ರಶಸ್ತಿ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭಕ್ಕೆ ನಟಿ ಕತ್ರಿನಾ ಕೈಫ್, ನಟಿ ಕರೀಷ್ಮಾ ಕಪೂರ್, ಮಾಹಿರಾ ಖಾನ್, ಅದಿತಿ ರಾವ್ ಹೈದರಿ, ಇಲಿಯಾನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ಸಂಭ್ರಮದ ಸಮಾರಂಭದಲ್ಲಿ ಬಾಲಿವುಡ್ ನ ಯಾವ ನಟ-ನಟಿಯರಿಗೆ, ಏನೇನ್ ಪ್ರಶಸ್ತಿ ಬಂತು ಅನ್ನೋದನ್ನ ನೋಡಿ ಸ್ಲೈಡ್ಸ್ ಗಳಲ್ಲಿ.......

ನಟಿ ಕತ್ರಿನಾ ಕೈಫ್

ನಟಿ ಕತ್ರಿನಾ ಕೈಫ್

ಬಿಟೌನ್ ಬಾರ್ಬಿ ಡಾಲ್ ಕತ್ರಿನಾ ಕೈಫ್ ಅವರು ಕೆಂಪು ಬಣ್ಣದ ಆಕರ್ಷಕ ಗೌನ್ ನಲ್ಲಿ ಸುಂದರವಾಗಿ ಕಂಗೊಳಿಸುತ್ತಿದ್ದು, ಎಲ್ಲರ ಕಣ್ಣು ಕ್ಯಾಟ್ ಮೇಲೆ ನೆಟ್ಟಿತ್ತು.[ಕತ್ರಿನಾ ಜೊತೆ ಲಿಪ್ ಲಾಕ್ ಗೆ ಒಲ್ಲೆ ಎಂದ ರಣಬೀರ್ ಕಪೂರ್]

ವರ್ಷದ ಸುಂದರಿ

ವರ್ಷದ ಸುಂದರಿ

2016ರ ವೋಗ್ ಮ್ಯಾಗಜೀನ್ ನ ಕವರ್ ಪೇಜ್ ಗೆ ಸಖತ್ ಬೋಲ್ಡ್ ಲುಕ್ ಕೊಟ್ಟಿದ್ದ ನಟಿ ಕತ್ರಿನಾ ಕೈಫ್ ಅವರು, '2016ರ ವರ್ಷದ ಸುಂದರಿ' ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.[ಅಬ್ಬಾ! ಲವ್ ಬ್ರೇಕ್ ಅಪ್ ಆದ್ರೂ ಕ್ಯಾಟ್ ಹ್ಯಾಪಿ, ಹೇಗೆ]

ವರ್ಷದ ಸುಂದರ ಪುರುಷ

ವರ್ಷದ ಸುಂದರ ಪುರುಷ

ಭಾರಿ ಬೆಲೆಯ ಸೂಟು-ಬೂಟು ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ರಣಬೀರ್ ಕಪೂರ್ ಅವರು ತಮ್ಮ ಸ್ಟೈಲಿಷ್ ಲುಕ್ ನಿಂದಲೇ ಎಲ್ಲರನ್ನು ಆಕರ್ಷಿಸಿದ್ದರು. ಈ ಸಂಭ್ರಮದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು '2016ರ ವರ್ಷದ ಸುಂದರ ಪುರುಷ' ಎಂಬ ಪ್ರಶಸ್ತಿಯನ್ನು ತಮ್ಮ ಬಗಲಿಗೆ ಹಾಕಿಕೊಂಡರು.

ಕರೀಷ್ಮಾ ಕಪೂರ್

ಕರೀಷ್ಮಾ ಕಪೂರ್

ರಣಬೀರ್ ಕಪೂರ್ ಅವರ ಕಸಿನ್ ಸಿಸ್ಟರ್, ಕರೀನಾ ಕಪೂರ್ ಅವರ ಸಹೋದರಿ ಕರೀಷ್ಮಾ ಕಪೂರ್ ಅವರು ವೋಗ್ ಬ್ಯೂಟಿ ಆವಾರ್ಡ್ ನಲ್ಲಿ 'ಏಜ್ ಲೆಸ್ ಬ್ಯೂಟಿ' ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡರು.

ಪರಿಣಿತಿ ಚೋಪ್ರಾ

ಪರಿಣಿತಿ ಚೋಪ್ರಾ

ಸದ್ಯಕ್ಕೆ 'ಡಿಶೂಂ' ಚಿತ್ರದ ಐಟಂ ಸಾಂಗ್ ಮೂಲಕ ಬಾರಿ ಸುದ್ದಿಯಲ್ಲಿರುವ ಕ್ಯೂಟ್ ನಟಿ ಪರಿಣಿತಿ ಚೋಪ್ರಾ ಅವರು '2016ರ ಸ್ಫೂರ್ತಿದಾಯಕ ಐಕಾನ್' ಎಂಬ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

ಪಾಕಿಸ್ತಾನಿ ನಟಿ ಮಾಹಿರಾ ಖಾನ್

ಪಾಕಿಸ್ತಾನಿ ನಟಿ ಮಾಹಿರಾ ಖಾನ್

ಕಿಂಗ್ ಖಾನ್ ಶಾರುಖ್ ಖಾನ್ ಅವರ 'ರಾಯಿಸ್' ಚಿತ್ರದ ನಟಿ ಮಾಹಿರಾ ಖಾನ್ ಅವರು ಕೂಡ ಈ ಸಂಭ್ರಮದ ಸಮಾರಂಭದ ಭಾಗವಾಗಿದ್ದು, ತಮ್ಮ ಆಕರ್ಷಕ ಡ್ರೆಸ್ಸಿಂಗ್ ಸ್ಟೈಲ್ ನಿಂದ ಎಲ್ಲರ ಗಮನ ಸೆಳೆದರು.

ನಟಿ ಅದಿತಿ ರಾವ್ ಹೈದರಿ

ನಟಿ ಅದಿತಿ ರಾವ್ ಹೈದರಿ

ಹಳದಿ ಬಣ್ಣದ ಸಿಂಪಲ್ ಗೌನ್ ನಲ್ಲಿ ಅಂದವಾಗಿ ಕಾಣಿಸುತ್ತಿದ್ದ ನಟಿ ಅದಿತಿ ರಾವ್‌ ಹೈದರಿ.

More from Filmibeat

English summary
July 27, 2016 Night 'Vogue Beauty Awards' took place at Taj Lands End hotel and many Bollywood celebs spotted at the event in their sizzling hot avatars. Interestingly, ex-lovers Actor Ranbir Kapoor and Actress Katrina Kaif to spotted at the event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X